101 ಟೆಂಗಿನಕಾಯಿ ಒಡೆದು ಹರಕೆ ಮುಟ್ಟಿಸಿದ ಅಭಿಮಾನಿ ಆಟೋ ಚಾಲಕ
ದೊಡ್ಡನಗೌಡ ಪಾಟೀಲ್ ವಿಜಯಶಾಲಿ
ಕುಷ್ಟಗಿ. ಜೂ.27; ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ವಿಜಯಶಾಲಿಯಾದ ಪ್ರಯುಕ್ತ ಅವರ ಅಭಿಮಾನಿ ಪಟ್ಟಣದ ಆಟೋ ಚಾಲಕ ಹನುಮಾನ್ ಸಿಂಗ್ (ರಜಪೂತ್ ಸಿಂಗ್) ಅವರು ಇಲ್ಲಿನ ಆರಾಧ್ಯ ದೈವ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರಿಗೆ 101 ಟೆಂಗಿನಕಾಯಿ ಒಡೆದು ಹರಕೆ ತೀರಿಸಿದರು. 2023 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿಜಯಶಾಲಿಯಾಗಬೇಕು ಎಂದು ದೊಡ್ಡನಗೌಡ ಪಾಟೀಲ್ ರ ಅಭಿಮಾನಿ ಪಟ್ಟಣದ ಆಟೋ ಚಾಲಕ ಹನುಮಾನ್ ಸಿಂಗ್ (ರಜಪೂತ್ ಸಿಂಗ್) ಅವರು ಇಲ್ಲಿನ ಆರಾಧ್ಯ ದೈವ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರಿಗೆ 101 ಟೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದಾನೆ. ಹರಕೆಯ ಪ್ರಕಾರ 2023 ನೇ ಸಾಲಿನ
ಚುನಾವಣೆಯಲ್ಲಿ ದೊಡ್ಡನಗೌಡ ಪಾಟೀಲ್ ಜಯಶಾಲಿಯಾದ ಕಾರಣ ಮಂಗಳವಾರ ಬೆಳಿಗ್ಗೆ ಗೆಳೆಯರೊಂದಿಗೆ ಶ್ರೀ ಅಡವಿ ಮುಖ್ಯ ಪ್ರಾಣೇಶ
ದೇವಸ್ಥಾನಕ್ಕೆ ತೆರಳಿ 101 ಟೆಂಗಿನಕಾಯಿ ಸರ್ಮಪಿಸಿ ಹರಕೆ ತಿರಿಸಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ
ದುರ್ಗೇಶ ಡಂಬರ್, ಶಿವು ಡಂಬರ, ಹನುಮಾನ್ ಸಿಂಗ್, ಮಧು ಯಾದವ್, ಕಾಸಿಂಸಾಬ, ಚಾಂದು ಕಿಡದೂರ, ಪರಶುರಾಮ ಕೋರಿ, ಬಾಬುವಲಿ, ರಫೀಕ್ ಸಾಬ, ಎಂ.ಡಿ ಪಾಷಾ, ನಹೀಮ್ ಉಪಸ್ಥಿತರಿದ್ದರು.
Comments are closed.