ರಾಜಶೇಖರ್ ಅಡೂರ್ ನೇತೃತ್ವದಲ್ಲಿ ನಗರಸಭಾ ಸದಸ್ಯರು ಕಾಂಗ್ರೆಸ್ ಗೆ?
ಕೊಪ್ಪಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಈಗಾಗಲೇ ಆರಂಭವಾಗಿದೆ. ಬಿಜೆಪಿಯ ಹಲವಾರು ಮುಖಂಡರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಗಾಳ ಹಾಕಿದ್ದು ಬಿಜೆಪಿಯ ಮುಖಂಡರಾದ ರಾಜಶೇಖರ್ ಅಡೂರ್ ಸೇರಿದಂತೆ ಕೊಪ್ಪಳ ನಗರಸಭೆಯ ಏಳು ಸದಸ್ಯರು ಹಾಗೂ ಇತರರು ನಾಳೆ ಕಾಂಗ್ರೆಸ್ ಪಕ್ಷ ಸೇರುವ ಸಂಭವನೀಯತೆ ಇದೆ.
ನಾಳೆ ಬೆಳಿಗ್ಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ರಾಜಶೇಖರ ಅಡೂರ್ ಅವರ ಮನೆಯಲ್ಲಿ ಉಪಹಾರ ಸೇವನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಏಳು ನಗರಸಭಾ ಸದಸ್ಯರು ಸೇರಿದಂತೆ ಇತರರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಮೂಲಗಳು ತಿಳಿಸಿವೆ
Comments are closed.