ನಗರಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ರಾಜಶೇಖರ ಅಡೂರ್

Get real time updates directly on you device, subscribe now.

ಕೊಪ್ಪಳ :  ಸಂಸದ ಕರಡಿ ಸಂಗಣ್ಣ ಆಪ್ತ ಬಿಜೆಪಿ ಮುಖಂಡ, ನಗರಸಭಾ ಸದಸ್ಯ   ರಾಜಶೇಖರ ಅಡೂರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

೧೧ನೇ ವಾರ್ಡ್ ನ  ನಗರಸಭಾ ಸದಸ್ಯರು ಆಗಿರುವ ಅಡೂರು ತಮ್ಮ ನಗರಸಭಾ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.  ತಮ್ಮ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ನಗರದ ಅಭಿವೃದ್ಧಿಗಾಗಿ ಈ ಹಿಂದೆಯೇ ಸೇರಬೇಕಾಗಿತ್ತು. ನನ್ನ ರಾಜಿನಾಮೆ ಹಾಗೂ ಕಾಂಗ್ರೇಸ್ ಪಕ್ಷ  ಸೇರ್ಪಡೆಗೆ ಯಾವುದೇ ಷರತ್ತು ಹಾಕಿಲ್ಲ. ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ತಪ್ಪಿದ್ದಕ್ಕು ಇದಕ್ಕೂ ಸಂಬಂಧವಿಲ್ಲ.  ಅವರು ಕಾಂಗ್ರೇಸ್ ಪಕ್ಷ ಸೇರ್ಪಡೆ ಕುರಿತು ನನಗೆ ಮಾಹಿತಿಯಿಲ್ಲ. ಇದು ನನ್ನ ಸ್ವಂತ ನಿರ್ಧಾರ, ಶೀಘ್ರದಲ್ಲಿ ಮತ್ತಷ್ಟು ಸದಸ್ಯರೂ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅರಸೀಫ್ ಅಲಿ ಪ್ರಸನ್ನ ಗಡಾದ , ಬಾಲಚಂದ್ರ k m ಸೈಯದ್ , ಕೃಷ್ಣ ಇಟಂಗಿ ಕಾಟನ್ ಪಾಷಾ, ಶಿವಕುಮಾರ್ ಶೆಟ್ಟರ್ ಕತಿಬ್ ಭಾಷು, ಮೌಲಾ ಹುಸೇನ್ ಜಮೆದಾರ್, ಮಾನ್ವಿ ಪಾಷಾ, ಜ್ಯೋತಿ ಗೊಂಡಬಾಳ , ಮಲ್ಲು ಪೂಜಾರ, ಅಕ್ಬರ್ ಪಾಟನ್, ಅಝೀಮ್ ಅತ್ತಾರ್,  ಶರಣಪ್ಪಾ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!