ಬಿಸರಳ್ಳಿ: ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
ಮಾ.28 ರಂದು ಬೇಳೂರು ಗ್ರಾಮದ ಹತ್ತಿರ ಇರುವ ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿನ ಪಂಪ್‌ಹೌಸ್ ನಲ್ಲಿ ಪಂಪ್‌ಹೌಸ್ ಬೋರ್‌ವೆಲ್‌ಗಳಿಗೆ ಹೊಸ ಮೋಟಾರ್ ಗಳನ್ನು ಅಳವಡಿಸಿ ಸಣ್ಣ-ಪುಟ್ಟ ದುರಸ್ಥಿ ಕೈಗೊಂಡು ಬಿಸರಳ್ಳಿ ಗ್ರಾಮಕ್ಕೆ ಕುಡಿಯಲು ಸಿಹಿ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ವತಿಯಿಂದ ಎಲ್ಲಾ ಕ್ರಮ ವಹಿಸಲಾಗಿರುತ್ತದೆ ಎಂದು ತಾ.ಪಂ. ಇಒ ಅವರು ತಿಳಿಸಿದ್ದಾರೆ.
Comments are closed.