ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಚೆಕ್‌ಪೋಸ್ಟ್ ಗಳಿಗೆ ಭೇಟಿ, ಖುದ್ದು ವಾಹನಗಳ ಪರಿಶೀಲನೆ

Get real time updates directly on you device, subscribe now.

ಲೋಕಸಭಾ ಚುನಾವಣೆ 2024 ರ ನಿಮಿತ್ತ ಜಿಲ್ಲೆಯ ವಿವಿಧೆಡೆ ತೆರೆದಿರುವ ವಿವಿಧ ಚೆಕ್‌ಪೋಸ್ಟ್ಗಳಿಗೆ ಮಾರ್ಚ್ 28 ರ ರಾತ್ರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾತ್ರಿ 10:30 ಕ್ಕೆ ಕೊಪ್ಪಳ ತಾಲ್ಲೂಕು ದದೇಗಲ್ ಚೆಕ್‌ಪೋಸ್ಟ್, 11:20 ಕ್ಕೆ ಬನ್ನಿಕೊಪ್ಪ ಚೆಕ್‌ಪೋಸ್ಟ್, 1 ಗಂಟೆಗೆ ಯಲಬುರ್ಗಾ ತಾಲೂಕು ಸಂಕನೂರ್ ಹಾಗೂ 1:30 ಕ್ಕೆ ಬಂಡಿ ಕ್ರಾಸ್ ಚೆಕ್‌ಪೋಸ್ಟ್ಗೆ ಭೇಟಿ ನೀಡಿ, ತಾವೇ ಖುದ್ದಾಗಿ ವಾಹನಗಳ ಪರಿಶೀಲನೆ ನಡೆಸಿದರು. ಚೆಕ್‌ಪೋಸ್ಟ್ ಸಿಬ್ಬಂದಿಗಳು ನಿಯಮಾನುಸಾರ ವಾಹನಗಳ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚೆಕ್‌ಪೋಸ್ಟ್ಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ನಡೆಸಿ, ಚೆಕ್‌ಪೋಸ್ಟ್ ಗಳಲ್ಲಿ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: