ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳ ಸದ್ಬಳಕೆಗೆ ಮನವಿ

Get real time updates directly on you device, subscribe now.

ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಏಕೈಕ ಸುಸಜ್ಜಿತವಾದ ಈಜುಕೊಳವು ಕಾರ್ಯಾರಂಭವಾಗಿದ್ದು, ಈಜುಕೊಳವು ಇಬ್ಬರು ತರಬೇತುದಾರರು, ಇಬ್ಬರು ಲೈಫ್ ಗಾರ್ಡ್ ಹಾಗೂ ಈಜುಕೊಳಕ್ಕೆ ಬರುವಂತಹ ಸಾರ್ವಜನಿಕರಿಗೆ ಸುಸಜ್ಜಿತ ಡ್ರೆಸಿಂಗ್ ರೂಮ್, ಶೌಚಾಲಯಗಳ ಕೊಠಡಿ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದೆ.
ಪ್ರತಿ 03 ತಿಂಗಳಿಗೊಮ್ಮೆ ಸಂಪೂರ್ಣವಾಗಿ ನೀರನ್ನು ತೆಗೆದು ಹೊಸ ನೀರನ್ನು ಬಳಕೆ ಮಾಡಲಾಗುತ್ತಿದ್ದು, ಈಜುಕೊಳದ ನೀರನ್ನು ಪ್ರತಿದಿನ ಫಿಲ್ಟೆçÃಶನ್ ಮಾಡಿ ನೀರು ಶುದ್ದೀಕರಿಸಲಾಗುತ್ತಿದೆ. ಸಾರ್ವಜನಿಕರು ಈಗಾಗಲೇ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ಈಜುಕೊಳ ತರಬೇತುದಾರರಿಂದ ತರಬೇತಿ ನೀಡಲಾಗುವುದು.
ಈಜುಕೊಳಕ್ಕೆ ಪ್ರತಿದಿನ ಬೆಳಗ್ಗೆ 06 ರಿಂದ ಸಂಜೆ 4.30 ರವರೆಗೆ ಸಾರ್ವಜನಿಕರಿಗೆ ಹಾಗೂ ಸಂಜೆ 5 ರಿಂದ 6 ರವರೆಗೆ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಈಜುಕೊಳ ಸದಸ್ಯತ್ವಕ್ಕೆ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಆಜೀವ ಸದಸ್ಯತ್ವಕ್ಕೆ ರೂ.2000/, ಮಾಸಿಕ ರೂ.1500/-, 12 ವರ್ಷದೊಳಗಿನವರಿಗೆ ರೂ.2000/-, ಮಾಸಿಕ ರೂ.750/-, ಸಾರ್ವಜನಿಕರಿಗೆ ಪ್ರತಿ ಒಂದು ತಾಸಿಗೆ ರೂ.100/- ಗಳ ಶುಲ್ಕವನ್ನು ನಿಗದಿಪಡಿಸಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: