ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಸಮರ್ಥರು: ಸಂಧ್ಯಾ ಮಾದಿನೂರು
– ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆಟೋಟ
– ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಆಚರಣೆ
ಕೊಪ್ಪಳ
ಮಹಿಳೆ ಅಬಲೆ ಅಲ್ಲಾ, ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ, ಆಕೆ ಯಾವುದೇ ಸೀಮಿತ ಕ್ಷೇತ್ರದಲ್ಲಿ ಅಲ್ಲಾ, ಎಲ್ಲಾ ಕ್ಷೇತ್ರಗಳಲ್ಲಿಯೂ ಸಮರ್ಥಳು ಎಂದು ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು ಅವರು ಹೇಳಿದ್ದಾರೆ.
ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ರೆಡ್ಡಿ ಮಹಿಳಾ ಸಂಘದವರು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯನ್ನು ಅನಾದಿಕಾಲದಿಂದ ಕೇವಲ ಅಡುಗೆ ಮನೆಗೆ ಸೀಮಿತ ಮಾಡಲಾಗಿತ್ತು. ಆದರೆ, ಅದರೆ, ಆಕೆ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಶಕ್ತಿಯನ್ನು ತೋರಿಸಿದ್ದರಿಂದ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ದೊರೆಯುತ್ತಿದ್ದು, ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಆದರೂ ಇನ್ನು ಹೆಚ್ಚು ಹೆಚ್ಚು ಅವಕಾಶದ ಅವಶ್ಯಕತೆ ಇದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಮಾತನಾಡಿ, ಮಹಿಳೆಯರು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವರನ್ನು ಸ್ಪೂರ್ಥಿಯಾಗಿ ತೆಗೆದುಕೊಂಡು ಇತರ ಮಹಿಳೆಯರು ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದರು.
ಡಾ. ಕಸ್ತೂರು ಕರಮುಡಿ ಅವರು ಪ್ರಸ್ಥಾವಿಕ ಮಾತನಾಡಿ, ಆಧುನಿಕ ಕಾಲದಲ್ಲಿ ಮಹಿಳೆಯರು ಸಬಲರಾಗಿದ್ದಾರೆ. ಶಿವಶರಣೇ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶದ ಬದುಕು ಇಂದಿಗೂ ಮಾದರಿಯಾಗಿದೆ ಎಂದರು.ಮಹಿಳೆಯರು ಸಂಘಟನೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವ ಅಗತ್ಯವಿದೆ ಎಂದರು.ಸಮಾಜದ ಹಿರಿಯ ಮಹಿಳೆ ನಿರ್ಲಮಲಾ ಅವಾಜಿ, ಲಕ್ಷ್ಮೀ ಹಂಗನಕಟ್ಟಿ, ಸುರೇಖಾ ನಾಗರಳ್ಳಿ ಮಾತನಾಡಿದರು.
ಮಹಿಳೆಯರಿಗೆ ಕವಿತಾ ಅಳವಂಡಿ ಅವರು ವಿವಿಧ ಆಟಗನ್ನಾಡಿಸಿ, ರಂಜಿಸಿದರು. ಶರಣಮ್ಮ ಪಾಟೀಲ್, ಶ್ವೇತಾ ಹೆಬ್ಬಾಳ, ಗಂಗಮ್ಮ ತೋಟದ, ಸರೋಜಾ ಮೇಟಿ, ಜಯಶ್ರೀ ಡಂಬ್ರಳ್ಳಿ, ಸುಜಾತ, ಗೀತಾ ಡಂಬ್ರಳ್ಳಿ ಮೊದಲಾದವರು ಇದ್ದರು. ರತ್ನಾ ಕಾತರಕಿ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಲಕ್ಷ್ಮೀಚಂದ್ರಶೇಖರ ಅವರು ವಂದನಾರ್ಪಣೆ ಮಾಡಿದರು.
Comments are closed.