ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್‌ರ ಹುತಾತ್ಮ ದಿನಾಚರಣೆ

Get real time updates directly on you device, subscribe now.


– ಭಾರಧ್ವಾಜ್

ಗಂಗಾವತಿ: ಮಾರ್ಚ್-೨೩ ಶನಿವಾರ ನಗರದ ರಾಯಚೂರು ರಸ್ತೆಯಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್, ರಾಜಗುರು, ಸುಖದೇವ್ ರವರ ಹುತಾತ್ಮ ದಿನಾಚರಣೆ ನಡೆಸಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಹುತಾತ್ಮ ದಿನಾಚರಣೆ ಪ್ರಯುಕ್ತ ಭಗತಸಿಂಗ್, ರಾಜಗುರು, ಸುಖದೇವ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಹುತಾತ್ಮರ ಜೀವನ ಚರಿತ್ರೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಹಾಗೆಯೇ ವಿದ್ಯಾರ್ಥಿ ಘಟಕದ ನಾಯಕರಾದ ಇಂಕಿಲಾಬ್ ಫಯಾಜ್ ಮಾತನಾಡಿ, ಉರ್ದು ಭಾಷೆಯಲ್ಲಿರುವ ಕ್ರಾಂತಿಕಾರಿ ಕವಿತೆಯನ್ನು ಕನ್ನಡಕ್ಕೆ ಅರ್ಥೈಸಿ ಹೇಳಿದರು.
ಸಿ.ಪಿ.ಐ.ಎಂ.ಎಲ್ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ಮಾತನಾಡಿ, ಭಗತಸಿಂಗ್‌ರ ಜೀವನ ಕಾರ್ಮಿಕರಿಗೆ ಮಾರ್ಗದರ್ಶನ ಎಂದರು.
ಈ ಸಂದರ್ಭದಲ್ಲಿ ಕಾರ್ ಮೆಕ್ಯಾನಿಕ್ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

 

Get real time updates directly on you device, subscribe now.

Comments are closed.

error: Content is protected !!