ಭಾಗ್ಯನಗರ ರತಿ-ಮನ್ಮಥರ ಪ್ರತಿಷ್ಠಾಪನೆ
ಹೋಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದ ಪದ್ಧತಿಯಂತೆ ಶ್ರೀ ಶಾರದಾ ನಾಟ್ಯ ಕಲಾವಿದರ ಸಂಘ ದ ಪರಿವಾರದೊಂದಿಗೆ 23.03.2023 ರಂದು ಮುಂಜಾನೆ ಭಾಗ್ಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡನ ಆವರಣದಲ್ಲಿ ರತಿ ಮನ್ಮತರ ಪ್ರತಿಷ್ಠಾಪನೆ ಮಾಡಲಾಗಿದೆ ಮತ್ತು ಇದೇ ದಿನ ರಾತ್ರಿ8 ಗಂಟೆಗೆ ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮ ಇದ್ದು ಗ್ರಾಮದ ಹಿರಿಯರು ಹಾಗೂ ಗ್ರಾಮದ ಎಲ್ಲ ಸಮಾಜದ ಮಹನೀಯರೊಂದಿಗೆ ಶಾರದಾ ನಾಟ್ಯ ಸಂಘದ ಸರ್ವ ಸದಸ್ಯ ಪದಾಧಿಕಾರಿಗಳೊಂದಿಗೆ ಕಾಮ ದಹನದ ಕಾರ್ಯಕ್ರಮ ಜರಗುವುದು.
ಸಕಲ ಸದ್ಭಕ್ತರು ರತಿ ಮನ್ಮಥರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವಾದ ಪಡೆಯಲು ಈ ಮೂಲಕ ಶ್ರೀ ಶಾರದಾ ನಾಟ್ಯ ಸಂಘದ ಹಿರಿಯರು ವಿನಂತಿಸಿಕೊಂಡಿದ್ದಾರೆ ನಾಳೆ ರವಿವಾರ 24 /4 2023 ರಂದು ರಂಗ ಪಂಚಮಿ ಇದ್ದು ಎಲ್ಲರೂ ಸಹಾನುಭೂತಿಯಿಂದ ಈ ಹೋಳಿ ಹುಣ್ಣಿಮೆ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಡಲು ಗ್ರಾಮದವರನ್ನು ವಿನಂತಿಸಿಕೊಂಡಿದ್ದಾರೆ
Comments are closed.