ಸಿ.ಪಿ.ಎಸ್.ಶಾಲೆಗೆ ಮೂಲಭೂತ ಸೌಲಭ್ಯ ಜಿಲ್ಲಾಡಳಿತ ಬದ್ದವಾಗಿದೆ: ನಳಿನಿ ಅತುಲ್
ಕೊಪ್ಪಳ: ನಗರದ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸಿ.ಪಿ.ಎಸ್.ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಬದ್ದವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಳಿನಿ ಅತುಲ್ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಪರಿಸರ ಪ್ರೇಮಿತಂಡದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಪ್ರಸ್ತುತ ದಿನಮಾನಗಳಲ್ಲಿ ನಗರದ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಪೈಪೋಟಿಯಿಂದ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿವೆ.ಇದರ ನಡುವೆಯೂ ಕೂಡಾ ಸಿ.ಪಿ.ಎಸ್.ಶಾಲೆಯು ೩೩೬ ಮಕ್ಕಳನ್ನು ಹೊಂದಿರುವ ಅತಿ ದೊಡ್ಡ ಶಾಲೆಯಾಗಿದೆ.ಈ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಸಲು ಬದ್ದವಾಗಿದೆ.ಪರಿಸರ ಪ್ರೇಮಿತಂಡದವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.ಇಂತಹ ಕಾರ್ಯಗಳು ಇನ್ನೂ ಹೆಚ್ಚು ಆಗಬೇಕು.ಈ ಕಾರ್ಯದಲ್ಲಿ ನಾನು ಕೂಡಾ ಭಾಗಿಯಾಗಿರುವುದು ಖುಷಿ ತಂದಿದೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೋಡಿ ಅವರು ಮಾತನಾಡಿ,ಪರಿಸರ ಪ್ರೇಮಿತಂಡವು ಕೇವಲ ಶಾಲೆಗಳಿಗೆ ಬಣ್ಣ ಹಚ್ಚುವ ಕೆಲಸ ಅಷ್ಟೇ ಅಲ್ಲ ಗಿಡಗಳನ್ನು ಹಚ್ಚುವುದರ ಮೂಲಕ ಪರಿಸರ ಕಾಳಜಿ ಮಾಡುತ್ತಿದ್ದಾರೆ.ಇವರು ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ.ಈ ಕಾರ್ಯ ಇದೇ ರೀತಿಯಲ್ಲಿ ಮುಂದುವರೆಯಲಿ ಎಂದು ಹೇಳೀದರು.
ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಮಾತನಾಡುತ್ತಾ,ಶಾಲೆಯಲ್ಲಿ ಅಭ್ಯಾಸ ಮಾಡಿದ ಮಕ್ಕಳು ಮುಂದೆ ಉನ್ನತವಾದ ಹುದ್ದೆಯನ್ನು ಅಲಂಕರಿಸಿದಾಗ ತಾನು ಕಲಿತ ಶಾಲಾ ಅಭಿವೃದ್ದಿಗೆ ತನ್ನದೆಯಾದ ಕೊಡುಗೆಯನ್ನು ನೀಡಬೇಕು.ಶಾಲಾ ವಾತಾರವರಣದಲ್ಲಿ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಸಬೇಕು.ಪರಿಸರ ಪ್ರೇಮಿತಂಡ ೨೫ನೇ ವಾರಗಳನ್ನು ಪೂರೈಸುತ್ತಿರುವುದು ಮೆಚ್ಚುಗೆಯ ಕೆಲಸ ಎಂದು ಹೇಳಿದರು.
ವಿಕಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡುತ್ತಾ,ಸಿ.ಪಿ.ಎಸ್.ಶಾಲೆಯ ಅಭಿವೃದ್ದಿಗಾಗಿ ಸರಕಾರದ ಸಹಾಯವಿಲ್ಲದೇ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಜೊತೆಯಲ್ಲಿ ದಾನಿಗಳ ಸಹಾಯದಿಂದ ಅಭಿವೃದ್ದಿ ಮಾಡಲಾಗುತ್ತಿದೆ.ಮುಖ್ಯವಾಗಿ ನಮ್ಮ ಶಾಲೆಗೆ ಶೌಚಾಲಯದ ಅಗತ್ಯ ಬಹಳ ಇದೇ ಅದನ್ನು ಒದಗಿಸುವುದರ ಜೊತೆಯಲ್ಲಿ ನಮ್ಮ ಶಾಲಾ ಕಟ್ಟಡವು ಬೇರೆ ಇಲಾಖೆಯ ಅಧಿನದಲ್ಲಿದ್ದು,ಅದನ್ನು ನಮ್ಮ ಇಲಾಖೆಗೆ ವರ್ಗಾಯಿಸಿ ಕೊಡುವಂತೆ ಮನವಿ ಮಾಡಿದರು.
ಈ ಸಮಯದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಕಡಿ,ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ,ಪರಿಸರ ಪ್ರೇಮಿತಂಡ ನಾಯಕರಾದ ಮಲ್ಲಿಕಾರ್ಜುನ ತೊದಲಬಾಗಿ,ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರು,ದೈಹಿಕ ಶಿಕ್ಷಣಾಧಿಕಾರಿ ಬಸವರಾಜ.ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ,ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಸಿ.ಆರ್.ಪಿ.ಹನುಮಂತಪ್ಪ ಕುರಿ ನಿರೂಪಿಸಿದರು.
ಶಾಲೆಯ ಶಿಕ್ಷಕಿ ಶೀಲಾ ಬಂಡಿ ಪ್ರಾರ್ಥನೆ ನೇರವೇರಿಸಿದರು.
ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಗತಿಸಿ,ವಿರುಪಾಕ್ಷಪ್ಪ ಬಾಗೋಡಿ ವಂದಸಿರು.
Comments are closed.