ಗ್ರಾಹಕರು ಕೃತಕ ಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಿ: ನ್ಯಾ. ದೇವೇಂದ್ರ ಪಂಡಿತ್

Get real time updates directly on you device, subscribe now.

:  ಗ್ರಾಹಕರು ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ನಡೆಸುವ ಹಣಕಾಸಿನ ವ್ಯವಹಾರಕ್ಕಾಗಿ ಬಳಸುವ ಕೃತಕ ಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಹೇಳಿದರು.

ಶುಕ್ರವಾರದಂದು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ ವಿಶ್ವವಿದ್ಯಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರು ತಮ್ಮ ವೈಯಕ್ತಿಕ ಖಾತೆಯ ನಂಬರ್ ಅನ್ನು ಅಥವಾ ಖಾತೆಯ ವಿವರಗಳನ್ನು ಬಿಟ್ಟುಕೊಡಬಾರದು. ಮೊಬೈಲ್ ಮೂಲಕ ಆನ್‌ಲೈನ್ ಹಣ ವರ್ಗಾವಣೆ ಸಂದರ್ಭಗಳಲ್ಲಿ ಜಾಗ್ರತೆ ವಹಿಸಬೇಕು. ಗ್ರಾಹಕರು ಕೊಂಡ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದ್ದಲ್ಲಿ, ಅದರಿಂದ ಮೋಸ ಹೋದಲ್ಲಿ ಅಥವಾ ವೆಹಿಕಲ್ ಇನ್ಸೂರೆನ್ಸ್ ಕಂಪನಿಯಿಂದ ಯಾವ ರೀತಿ ಪರಿಹಾರ ಪಡೆಯಬೇಕು ಎಂಬುದಕ್ಕೆ ಸೂಕ್ತವಾದ ಕಾನೂನಾತ್ಮಕ ಉತ್ತರಗಳನ್ನು ನೀಡುತ್ತಾ ಕೃತಕ ಬುದ್ದಿ ಮತ್ತೆ ಬಳಸಿ ನಡೆಸುವ ವ್ಯವಹಾರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ನ್ಯಾಯವಾದಿ ಮತ್ತು ಮುಜುಮದಾರ ಫೌಂಡೇಶನ್‌ನ ಅಧ್ಯಕ್ಷರಾದ ಸಾವಿತ್ರಿ ಮುಜುಮದಾರ ಅವರು, ಎ.ಐ ಅಥವಾ ಕೃತಕ ಬುದ್ಧಿಮತ್ತೆಯು ಕೆಲವು ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅವುಗಳಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಆದ್ದರಿಂದ ಅವುಗಳಿಂದ ಸರಿಯಾದ ಉತ್ತರ ನಿರೀಕ್ಷಿಸಲಾಗುವುದಿಲ್ಲ. ಇಂದು ಸಿದ್ಧ ಮಾದರಿಯ ಧ್ವನಿಗಳಿಂದ ಸಿಗುವ ಮಾಹಿತಿ ಅಪೂರ್ಣವಾಗಿರುತ್ತದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೋರಾಟ ಆರಂಭವಾಗಿದೆ. ಆದ್ದರಿಂದ ಗ್ರಾಹಕರು ಜವಾಬ್ದಾರಿಯುತವಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಬೇಕು. ಬಳಕೆದಾರ ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಆ ವಸ್ತುವಿನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ ಮತ್ತು ಇತರೆ ಆಹಾರಪದಾರ್ಥಗಳಲ್ಲಿ ಕೃತಕ ಬಣ್ಣ ಮತ್ತು ರಾಸಾಯನಿಕ ಬಳಕೆಯನ್ನು ನಿಷೇಧಿಸಲಾಗಿದೆ. ಇದರ ಬಳಕೆ ಕಂಡುಬಂದಲ್ಲಿ ಗ್ರಾಹಕರು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ಕೊಡಬಹುದು ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೂ ದೂರು ನೀಡಿ ನ್ಯಾಯ ಪಡೆಯಬಹುದು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜಿ.ಇ.ಸೌಭಾಗ್ಯ ಲಕ್ಷ್ಮೀ ಗ್ರಾಹಕರ ಹಕ್ಕುಗಳು, ಜವಾಬ್ದಾರಿ ಹಾಗೂ ಪರಿಹಾರ ಕುರಿತು ಮಾತನಾಡಿದರು. ಐದರಿಂದ ಐವತ್ತು ಲಕ್ಷಗಳವರೆಗೂ ಪರಿಹಾರ ಪಡೆಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಜಿ.
ಮಾಲ್ದಾರ್ ಅವರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಸಂವಾದ ನಡೆಸಿದರು. ಕಾನೂನು ಪರಿಹಾರಗಳನ್ನು ಮತ್ತು ಸಲಹೆಗಳನ್ನು ನೀಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ವಿ.ಪ್ರಸಾದ ಅವರು ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಣಿತರಿಂದ ಮಾರ್ಗದರ್ಶನ ಮತ್ತು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಅನ್ನಪೂರ್ಣ ಮುದುಕಮ್ಮನವರ, ಇಲಾಖೆಯ ಅಧಿಕಾರಿಗಳಾದ ದೇವರಾಜ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕೃಷ್ಣ, ಬಕ್ರುದ್ದಿನ್, ಪ್ರೊ. ಸುಧಾಕರ, ಪ್ರೊ. ಪ್ರವೀಣ ಪೊಲೀಸ್ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: