ವಿಕಲಚೇತನರು ಸ್ವಾಲಂಭಿಗಳಾಗಿ ಬದುಕು ಸಾಗಿಸಿ: ಬೀರಪ್ಪ ಅಂಡಗಿ

Get real time updates directly on you device, subscribe now.


ಕೊಪ್ಪಳ: ವಿಕಲಚೇತನರು ಬೇರೆಯವರಿಗೆ ಅವಲಂಭಿತರಾಗಿ ಜೀವನ ಮುನ್ನಡಿಸದೇ ಸ್ವಾವಲಂಭಿಗಳಾಗಿ ಜೀವನ ನಡೆಸಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಛೆರಿಯ ಆಡಿಟೋರಿಯಂ ಹಾಲ್ ನಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ವಿಕಲಚೇತನರಿಗೆ ಒಂದು ದಿನದ ಕಾರ್ಯಗಾರದಲ್ಲಿ ಸ್ವಯಂ ಉದ್ಯೋಗದ ಕುರಿತು ಉಪನ್ಯಾಸ ನೀಡುತ್ತಾ,ವಿಕಲಚೇತನರು ತಮ್ಮ ಅಂಗವಿಕಲತೆಯ ಒಂದನ್ನು ನೆಪವಾಗಿಟ್ಟುಕೊಂಡು ಯಾವುದೇ ರೀತಿಯಲ್ಲಿ ಉದ್ಯೋಗದಲ್ಲಿ ತೊಡಗದೆ ಬೇರೆಯವರ ಮೇಲೆ ಅವಲಂಭಿತರಾಗಿ ಬದುಕನ್ನು ಸಾಗಿಸುವ ಬದಲಾಗಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಸಹಾಯ ಪಡೆದು ಸ್ವಉದ್ಯೋಗ ಮಾಡುವ ಮೂಲಕ ಸ್ವತಂತ್ರವಾಗಿ ಬದುಕು ಸಾಗಿಸಲು ಕಲಿಯಬೇಕಿದೆ.ಸರ್ಕಾರವು ವಿಕಲಚೇತನರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಅಂಥ ಯೋಜನೆಗಳು ಸರಿಯಾದ ರೀತಿಯಲ್ಲಿ ಅರ್ಹ ವಿಕಲಚೇತನರಿಗೆ ತಲುಪಬೇಕಾದರೆ ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ.ವಿಕಲಚೇತನರ ಸಮೂದಾಯದ ಸರ್ವಾಂಗಿಣ ಅಭಿವೃದ್ದಿಯಾಗಬೇಕಾದರೆ ಪ್ರತಿಯೊಬ್ಬ ವಿಕಲಚೇತನರು ಕೈ ಜೋಡಿಸಬೇಕಿದೆ.ವಿವಿಧ ಪರಿಸರದಿಂದ ಬಂದ ಅನೇಕ ವಿಕಲಚೇತನರು ಕಷ್ಟಪಟ್ಟು ಅಧ್ಯಾಯನ ಮಾಡುವುದರ ಮೂಲಕ ಉನ್ನತವಾದ ಹುದ್ದೆಗಳನ್ನು ಪಡೆದವರು ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ವಿಕಲಚೇತನರನ್ನು ಆದರ್ಶವಾಗಿಟ್ಟುಕೊಂಡು ವಿಕಲಚೇತನರು ಸ್ವಾವಲಂಬ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಸಾಹಯಕ ಯೋಜನಾ ಅಧಿಕಾರಿ ಬಸವರಾಜ ಮಾರನಬಸರಿ ಮಾತನಾಡಿ,ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಕೂಡಾ ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕರು ವಿವಿಧ ಕ್ಷೇತ್ರದಲ್ಲಿ ಸಾಧಕರಿದ್ದಾರೆ.ಅಂಥಹ ಸಾಧನೆ ಮಾಡಿದ ವಿಕಲಚೇತನರನ್ನು ಸರಕಾರವು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ.ವಿಕಲಚೇತನರು ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳಿಸಿಕೊಳ್ಳುವುದರ ಮೂಲಕ ಉತ್ತಮ ರೀತಿಯಲ್ಲಿ ಜೀವನ ನಿರ್ವಹಣೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ಶ್ರೀದೇವಿ ಮಾತನಾಡುತ್ತಾ,ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ವಿಕಲಚೇತನರು ಅವುಗಳನ್ನು ಸರಿಯಾದ ರೀತಿಯಿಂದ ಬಳಿಸಿಕೊಳ್ಳಬೇಕು ಅಲ್ಲದೇ ಇರುವ ಯೋಜನೆಗಳನ್ನು ಪ್ರತಿಯೊಬ್ಬ ವಿಕಲಚೇತನರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಕಲಚೇತನರು ಯಾವ ರೀತಿಯಲ್ಲಿ ಕೆಲಸ ಪಡೆಯಬಹುದು ಎಂಬುವುದರ ಕುರಿತು ಮಾಹಿತಿ ದೇವರಾಜ ಪತ್ತಾರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಜನಾ ನಿರೂಪಣಾ ಅಧಿಕಾರಿ ರಂಗಪ್ಪ ವಹಿಸಿದ್ದರು
ಕಾರ್ಯಕ್ರಮದಲ್ಲಿ ರಾಜ್ಯ ಸಂಯೋಜನಕರಾದ ನರಸಿಂಹಮೂರ್ತಿ,ಸೇಲ್ಕೋ ಸಂಸ್ಥೆಯ ಭರತೇಶ ಹಾಜರಿದ್ದರು.
ಕಾರ್ಯಕ್ರಮವನ್ನು ವಿರೇಶ ಹಾಲಗುಂದಿ ನಿರೂಪಿಸಿದರು.
ಮಲ್ಲಿಕಾರ್ಜುನ ಪೂಜಾರ ಸ್ವಾಗತಿಸಿ,ಮಂಜುನಾಥ ಹೊಸಕೇರಾ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!