ಬಡವರ ಜೀವನ ಹಸನು ಮಾಡಿದ ಗ್ಯಾರಂಟಿ ಯೋಜನೆಗಳು : ನಾಗರತ್ನ ಪೂಜಾರ
ಕೊಪ್ಪಳ : ೧೪ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಗ್ಯಾರಂಟಿ ಯೋಜನೆ ಸಮಿತಿ ಸಭೆಯಲ್ಲಿ ಮಾತನಾಡಿದ ತಾಲೂಕು ಕೆಡಿಪಿ ಸದಸ್ಯ ನಾಗರತ್ನ ಪೂಜಾರ ರವರು ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನಿಡಿದ ಭರವಸೆಯಂತೆ ೫ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವುದರ ಮೂಲಕ ರಾಜ್ಯದ ಬಡ ಜನತೆಯ ಬಾಳು ಹಸನಾಗಿದೆ. ಜನರ ಕಲ್ಯಾಣಕ್ಕಾಗಿ ಅನುಷಾನಗೊಂಡ ಗ್ಯಾರಂಟಿ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಜನರ ಮನೆ ಮನೆ ಬಾಗಿಲೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಬರುವ ಲೋಕಸಭಾ ಚುನಾವಣೆಗೆ ವಿಷೇಶವಾಗಿ ಮಹಿಳೆಯರು ಜನರ ಬಳಿ ಮತಯಾಚನೆ ಮಾಡಬೇಕು ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರವಾಗಿದ್ದು, ಜನರ ಕಲ್ಯಾಣವೆ ಇದರ ಗುರಿಯಾಗಿದೆ ಇಗಾಗಲೇ ಕೇಂದ್ರದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಸರ್ಕಾರ ಬಂದರೆ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಚರ್ಚಿಸಲಾಗಿದ್ದು, ೧. ನಾರಿ ನ್ಯಾಯ ಗ್ಯಾರಂಟಿ , ೨. ಮಹಾಲಕ್ಷ್ಮಿ ಯೋಜನೆ ೩. ಪ್ರತಿ ಮಹಿಳಿಗೆ ವರ್ಷಕ್ಕೆ ೧ಲಕ್ಷ ರೂ ೪. ದೇಶದ ಅರ್ದದಷ್ಟ ಜನಸಂಖ್ಯೆಯ ಸಂಪೂರ್ಣ ಹಕ್ಕು ೫. ಸ್ತ್ರೀ ಶಕ್ತಿಗೆ ಗೌರವ ೬. ಅಧಿಕಾರದಲ್ಲಿ ಮೈತ್ರಿ ೭. ದೇಶದಲ್ಲಿ ಸಾವಿತ್ರಿ ಬಾಯಿ ಪುಲೆ ವಸತಿ ನಿಲಯ ನಿರ್ಮಾಣ ಹಾಗೂ ಇನ್ನೀತರ ಯೋಜನೆಗಳ ಮಹಿಳೆಯರ ಸಬಲೀಕರಣಕ್ಕಾಗಿ ಅನುಷ್ಟಾನಗೊಳಿಸಲು ನಿಶ್ಚಿತವಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ. ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಯ ಅಧ್ಯಕ್ಷ ಬಾಲಚಂದ್ರನ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಕ್ಬರ ಪಾಪ ಪಲ್ಟನ್, ಯುವ ಕಾಂಗ್ರೆಸ್ ನಾಯಕ ಸೋಮಶೇಖರ ಹಿಟ್ನಾಳ, ಚಾಮದ್ ಪಾಷ ಕಿಲ್ಲೆದಾರ, ಜ್ಯೋತಿ ಗೊಂಡಬಾಳ, ಈರಣ್ಣ ಹುಲಗಿ, ವಿಜಯಕುಮಾರ ಹುಲಗಿ, ಮಾನ್ವಿ ಪಾಷ, ಉಮಾ ಪಾಟೀಲ್, ಅರುಣ ಅಪ್ಪು ಶೆಟ್ಟಿ, ರೇಷ್ಮಾ ಬೇಗಂ, ಕಾವೇರಿ ರ್‍ಯಾಗಿ, ಪದ್ಮಾವತಿ ಕಂಬಳಿ, ಅಜ್ಜಪ್ಪ ಸ್ವಾಮಿ, ದೇವರಾಜ, ಸವಿತ ಗೋರಂಟ್ಲಿ, ಹಾಗೂ ಇನ್ನೀತರರು ಉಪಸ್ಥಿತರಿದ್ದರು.
Comments are closed.