“ಸಮಾನತೆಯ ಬೆಳಕು” ಕೃತಿ ಲೋಕಾರ್ಪಣೆ

0

Get real time updates directly on you device, subscribe now.

 

ಬೆಂಗಳೂರು : 25- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಚಿಂತನೆಯ ಸೊಬಗಿನಿಂದ ಕಂಗೊಳಿಸಿತು. ಈ ಭವ್ಯ ವೇದಿಕೆಯಲ್ಲಿ ಆತ್ಮೀಯ ಸ್ನೇಹಜೀವಿ, ಸರಳ ವ್ಯಕ್ತಿತ್ವದ ನ್ಯಾಯಾಂಗ ಇಲಾಖೆಯ ಸಹೋದ್ಯೋಗಿ ಶಫಿವುಲ್ಲಾ ಚಿತ್ರದುರ್ಗ ಅವರಿಂದ ರಚಿತವಾದ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಹಾಗೂ ಸಮಾನತೆಯ ಸಂದೇಶವನ್ನು ಆಧರಿಸಿದ “ಸಮಾನತೆಯ ಬೆಳಕು” ಕೃತಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯದ ೩೧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದು ಸಮಾರಂಭಕ್ಕೆ ವಿಶೇಷ ಮೆರುಗು ತಂದರು. ಜೊತೆಗೆ ಬಯಲ ಬೆಳಕಿನ ಕವಿ ಹಾಗೂ ನಿರಂತರ ಪ್ರಕಾಶನದ ಪ್ರಕಾಶಕ,ಖ್ಯಾತ ಸಾಹಿತಿಗಳಾದ ಎ.ಎಸ್. ಮಕಾನದಾರ, ಗದುಗಿನ ಯುವ ಬರಹಗಾರ ಹಾಗೂ ಕವಿಗಳಾದ ಅಮೀರ ನಾಯಕ, ರಾಜ್ಯ ನ್ಯಾಯಾಂಗ ಇಲಾಖೆಯ ನೌಕರರ ಸಂಘದ ನಿರ್ದೇಶಕರು, ಅಖಿಲ ಕರ್ನಾಟಕ  ಮಹಿಳಾ ನೌಕರರ ಸಂಘದ ಉಪಾಧ್ಯಕ್ಷರಾದಡಾ. ಎಂ ಮಲ್ಲಿಕಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯ ಪಿ.ಜಿ ಹರ್ಷ, ಎಸ್ ಸಿ ಎಸ್ ಟಿ ನೌಕರರ ಸಂಘದ ಉಪಾಧ್ಯಕ್ಷರಾದ ಮುನಿ ಕೃಷ್ಣಪ್ಪ, ಸೌರಭ ಸಂಸ್ಕೃತಿ ಕ ಕಲಾ ಬಳಗದ ಅಧ್ಯಕ್ಷ ರಹಿಮಾನ ಕೋಳೂರ
 ನೌಕರರ ಸಂಘದ ವ್ಯವಸ್ಥಾಪಕರಾದ ಕೆ.ಐ.ಸುಣಗಾರ, ರಾಜ್ಯ ಕ್ರೀಡಾ ಕಾರ್ಯದರ್ಶಿಗಳಾದ   ಐ. ಎ.ಗಾಡಗೋಳಿ, ಆಶುಕವಿ.ಹಜರತ ಅಲಿ ದಾವಣಗೆರೆ, ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಡಾ. ಬಸವರಾಜ್ ಬಳ್ಳಾರಿ. ರಾಜು ಕಂಟುಗೊಣ್ಣವರ, ಎಸ್ ಸಿ ಎಸ್ ಟಿ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಮಹೇಶ್ ಹೂಬಳಿ, ಶಿರಹಟ್ಟಿ ಖಜಾನೆ ಅಧಿಕಾರಿಗಳಾದ ಶಿವಪ್ಪ ಹದ್ಲಿ, ಎಚ್.ಎಸ್.ಬಾದನಟ್ಟಿ,ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಎಂ.ನಿಟ್ಟಾಲಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಸುರೇಶ ಕೊಪ್ಪದ. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕೃತಿಯ ಸಾಮಾಜಿಕ ಸಂದೇಶವನ್ನು ಪ್ರಶಂಸಿಸಿದರು.
“ಸಮಾನತೆಯ ಬೆಳಕು” ಕೃತಿ ಡಾ. ಅಂಬೇಡ್ಕರ್ ಅವರ ಸಮಾನತೆ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಪ್ರಯತ್ನವಾಗಿದ್ದು ಗದಗ ನಿರಂತರ ಪ್ರಕಾಶನ ಸಂಸ್ಥೆ ಪುಸ್ತಕ ಪ್ರಕಟಿಸಿ, ಲೇಖಕ ಶಫಿ ವುಲ್ಲ ಅಂತಹ ಎಲೆ ಮರೆಯ ಕಾಯಿಎಂತಿರುವ  ಪ್ರತಿಭಾವಂತ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ಕನ್ನಡ ಸಾರಾಸ್ವತ ಲೋಕಕ್ಕೆ ಬಹು ಉಪಕೃತ ಕಾರ್ಯ ಮಾಡಿದೆ ಎಂದು  ಅಭಿಪ್ರಾಯಪಟ್ಟರು.               ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಸಮ್ಮಿಲನವಾಗಿ ನಡೆದ ಈ ಕೃತಿ ಬಿಡುಗಡೆ ಸಮಾರಂಭವು ಸಭಿಕರ ಮನಸೂರೆಗೊಂಡಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!