ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ-೨೦೨೫ ಜಾಗೃತಿ ಜಾಥಾ ನಿಮಿತ್ಯ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ
ಕೊಪ್ಪಳ – ಸಂಸ್ಥಾನ ಶ್ರೀ ಗವಿಮಠದಜಾತ್ರಾ ಮಹೋತ್ಸವವೆಂದರೆ, ವಿನೂತನ ವಿಶೇಷತೆಯ ಹೊಸತನದಆಧುನಿಕ ಸ್ಪರ್ಷತೆಯ ಸಂಗಮ. ಪ್ರತಿ ವರ್ಷಒಂದಲ್ಲಾಒಂದುರೀತಿಯಜನಜೀವನದ ಪ್ರಗತಿಗೆಜಾಗೃತಿ ಮೂಡಿಸಲುಅಗತ್ಯವಾದಉಪಯುಕ್ತಜನಜಾಗೃತಿಕಾರ್ಯಕ್ರಮವಾಗಿದೆ. ಈ ವರ್ಷವೂ ಸಹ ವಿನೂತನವಾದಜಾಗೃತಿ ಮೂಡಿಸಲು ಶ್ರೀಮಠವು ಹೊಸ ಸಂಕಲ್ಪದೊಂದಿಗೆ ಸಿದ್ಧವಾಗಿದೆ.
ಪ್ರಸ್ತುತಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ೨೦೨೫ರಸಾಮಾಜಿಕಜಾಗೃತಿ ವಿಷಯವಾಗಿ’ಸಕಲಚೇತನ’ಎಂಬ ಶೀರ್ಷಿಕೆಯ ಅಡಿಯಲ್ಲಿವಿಕಲಚೇತನರ ನಡೆ ಸಕಲಚೇತನದಕಡೆ ಎಂಬ ಘೋಷ ವಾಕ್ಯದೊಂದಿಗೆಜಾಗೃತಿಜಾಥಾಹಮ್ಮಿಕೊಳ್ಳಲಾಗಿದೆ. ದಿನಾಂಕ ೧೧.೦೧.೨೦೨೫ರ ಶನಿವಾರ ಬೆಳಿಗ್ಗೆ ೮.೦೦ ಗಂಟೆಗೆ ಕೊಪ್ಪಳದ ಬಾಲಕಿಯರ ಸರಕಾರಿಕಾಲೇಜಿನ ಮೈದಾನ(ತಾಲೂಕುಕ್ರೀಡಾಂಗಣ)ದಿಂದಆರಂಭವಾಗಿ ಅಶೋಕ ವೃತ್ತ, ಜವಾಹರರಸ್ತೆ, ಗಡಿಯಾರಕಂಬದ ಮೂಲಕ ಶ್ರೀಗವಿಮಠದ ಜಾತ್ರಾ ಮಹಾದಾಸೋಹಕ್ಕೆತಲುಪಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.
ಈ ಒಂದು ಸತ್ಕಾರ್ಯಕ್ಕೆ ಭಕ್ತರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾಇಲಾಖೆ, ಆರೋಗ್ಯ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಕೌಶಲ್ಯಾಭಿವೃದ್ಧಿ ಇಲಾಖೆ, ಭಾರತೀಯರೆಡ್‌ಕ್ರಾಸ್ ಸಂಸ್ಥೆ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಹಕಾರ ಪ್ರೋತ್ಸಾಹದೊಂದಿಗೆಆಯೋಜಿಸಲಾಗುತ್ತದೆ.
ಸದರಿಅಭಿಯಾನದ ಅಂಗವಾಗಿ ದಿನಾಂಕ ೦೨.೦೧.೨೦೨೫ ರಂದುಸ್ಥಳಿಯ ಶಾಲಾ, ಕಾಲೇಜು ಮಟ್ಟದಲ್ಲಿಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಕಲಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದ ಸ್ಪಂದನೆ ಎಂಬ ವಿ?ಯದ ಭಾ?ಣ ಸ್ಪರ್ಧೆಯನ್ನುಆಯೋಜಿಸಲು ತಿಳಿಸಲಾಗಿದೆ.
ಈ ಸ್ಥಳಿಯ ಶಾಲಾ, ಕಾಲೇಜು ಮಟ್ಟದಲ್ಲಿಆಯ್ಕೆಯಾದ ವಿದ್ಯಾರ್ಥಿಗಳಿಗೆ ಸದರಿ ವಿಷಯದ ಮೇಲೆ ಜಿಲ್ಲಾ ಮಟ್ಟದ ಸ್ಪರ್ಧೆಯನ್ನುದಿನಾಂಕ ೦೪.೦೧.೨೦೨೫, ಶನಿವಾರದಂದು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಾಗೃತಿಜಾಥಾ ನಡಿಗೆಯಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ೯೭೪೨೩೦೭೧೫೩. ೯೯೮೬೫೯೧೦೭೬ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಗವಿಮಠ ಪ್ರಕಟಣೆಯಲ್ಲಿ ತಿಳಿಸಿದೆ.