ಆನೆಗೊಂದಿ ಉತ್ಸವ: ಫಲ-ಪುಷ್ಪ ಪ್ರದರ್ಶನಕ್ಕೆ ಜಿ.ಜನಾರ್ಧನ ರೆಡ್ಡಿ ಅವರಿಂದ ಚಾಲನೆ

Get real time updates directly on you device, subscribe now.

ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಉತ್ಸವದ ಮುಖ್ಯ ವೇದಿಕೆ ಆವರಣದಲ್ಲಿ ಮಾರ್ಚ್ 11 ಮತ್ತು 12ರಂದು ಏರ್ಪಡಿಸಲಾದ ಫಲ-ಪುಷ್ಪ ಪ್ರದರ್ಶನಕ್ಕೆ ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಲಲಿತರಾಣಿ ರಂಗದೇವರಾಯಲು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ, ಗಣ್ಯರಾದ ಅರುಣಾ ಲಕ್ಷ್ಮೀ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೈಬೀಸಿ ಕರೆಯುತಿದೆ ಫಲ-ಪುಷ್ಪ ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂವಿನ ಮತ್ತು ಹಣ್ಣಿನ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಹೂವಿನ ಜೋಡಣೆ ಮುಖಾಂತರ ವಿವಿಧ ರೀತಿಯ ಮಾದರಿಯ ಸ್ತಭ್ಧ ಚಿತ್ರಗಳ ಮೂಲಕ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ವಿಶೇಷವಾಗಿ ಹಣ್ಣುಗಳಲ್ಲಿ ನಾಡದೇವತೆಯಾದ ಭುವನೇಶ್ವರಿ ದೇವಿ, ಕುವೆಂಪು, ದ.ರಾ ಬೇಂದ್ರೆ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್  ಚಿತ್ರಗಳು ಹಾಗೂ ಆನೆಗೊಂದಿ ಕೋಟೆಯ ಮುನ್ನೋಟ, ಹಂಪಿ ದೇವಸ್ಥಾನದ ಗೋಪುರ ಸ್ತಭ್ಧ ಚಿತ್ರ ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದರಿ, ವರ್ಟಿಕಲ್ ಮಾದರಿ, ತ್ರೀಕೋನಾಕಾರ ಅಲಂಕಾರಿಕ ಗಿಡಗಳ ಮಾದರಿ, ಹುಲ್ಲಿನ ಮಾದರಿಯ ನೀರಿನ ಜಲಪಾತ ಅನಾವರಣ, ವಿವಿಧ ಹಣ್ಣು ಮತ್ತು ತರಕಾರಿಗಳ ಕೆತ್ತನೆ, ಜಿಲ್ಲೆಯ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪ್ರದರ್ಶಿಕೆಗಳು, ವಿವಿಧ ಅಲಂಕಾರಿಕ ಕುಂಡಗಳ ಜೋಡಣೆ, ಬಣ್ಣ ಬಣ್ಣದ ಹೂವುಗಳ ಮತ್ತು ತರಕಾರಿಗಳ ಜೋಡಣೆ ಹಾಗೂ ಇಲಾಖೆಯ ಯೋಜನೆಗಳ ಮಾಹಿತಿಗಳ ಬಗ್ಗೆ ವಿವರಣೆ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಪರಿಕರಗಳ ಪ್ರದರ್ಶನವನ್ನು ಈ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದ್ದು, ಒಟ್ಟಾರೆ ಈ ಫಲ-ಪುಷ್ಪ ಪ್ರದರ್ಶನವು ತುಂಬಾ ಆಕರ್ಷಣೀಯವಾಗಿದ್ದು, ಜನರನ್ನು ತನ್ನತ್ತ ಕೈಬೀಸಿ ಕರೆಯುವಂತಿದೆ.
ಎಲ್ಲಾ ಸಾರ್ವಜನಿಕರು ಮತ್ತು ರೈತರು ಫಲಪುಷ್ಪ ಪ್ರದರ್ಶನವನ್ನು ಕಣ್ಣುಂಬಿಕೊಳ್ಳಬೇಕೆಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!