ಆನೆಗೊಂದಿ ಇತಿಹಾಸದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿ: ಶಾಸಕರಾದ ಜಿ.ಜನಾರ್ಧನ ರೆಡ್ಡಿ

Get real time updates directly on you device, subscribe now.

—-
: ಮಹತ್ವದ ಆನೆಗೊಂದಿ ಇತಿಹಾಸದ ಬಗ್ಗೆ ಇಂದಿನ ಯುವ ಸಮುದಾಯ ಮತ್ತು ಹೊಸ ಪೀಳಿಗೆಗೆ
ವಿಚಾರಗೋಷ್ಠಿಗಳ ಮೂಲಕ  ತಿಳಿಸುವ ಕೆಲಸವಾಗಬೇಕು ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.
ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಆನೆಗೊಂದಿಯ ಗಗನ್ ಮಹಲ್ ಹತ್ತಿರದ ಶಬರಿ ವೇದಿಕೆಯಲ್ಲಿ ಮಾರ್ಚ್ 11ರಂದು ಏರ್ಪಡಿಸಲಾಗಿದ್ದ
ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಷಯದ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿರುವ ಆನೆಗೊಂದಿ ಉತ್ಸವ ಆಚರಣೆಗೆ ಬಹಳಷ್ಟು ಕಡಿಮೆ ಸಮಯದಲ್ಲಿ ನಿರ್ಧಾರ ಮಾಡಿದ್ದರೂ ಸಹ ಉತ್ಸವ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸಹ ಹಂಪಿ ಉತ್ಸವದ ಬಳಿಕ ಆನೆಗೊಂದಿ ಉತ್ಸವವನ್ನು ಮಾಡಲೇಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳ ಪ್ರಯತ್ನದಿಂದ ಉತ್ಸವ ಆಚರಣೆಗೆ ವೇಗ ಸಿಕ್ಕಿದೆ. ವಿಜಯನಗರ ಸಾಮ್ರಾಜ್ಯದ ವೈಭವನ್ನು ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದರು. ವಿಚಾರಗೋಷ್ಠಿಯ ಪ್ರಚಾರಕ್ಕೆ ಕ್ರಮ: ಉತ್ಸವದ ಅಂಗವಾಗಿ ನಡೆಯಲಿರುವ ಈ ವಿಚಾರಗೋಷ್ಠಿ ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ಕುರಿತಾಗಿದೆ. ಈ ವಿಚಾರಗೋಷ್ಠಿಯನ್ನು ಪೂರ್ಣವಾಗಿ ವಿಡಿಯೋ ಚಿತ್ರಿಕರಣ ಮಾಡಿಸಿ ಅದನ್ನು ಸಂಪೂರ್ಣ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷಗಳಿಗೆ ಅನುವಾದ ಮಾಡಿಸಿ ದೇಶದೆಲ್ಲೆಡೆ ಪ್ರಚಾರದ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಪ್ರಾಧ್ಯಾಪಕರಾದ ಎಸ್.ಕರಿಗೂಳಿ ಅವರು ಆಶಯ ನುಡಿಗಳನ್ನಾಡಿ, ಆನೆಗೊಂದಿಯು ಒಂದು ಐತಿಹಾಸಿಕ ತಾಣವಾಗಿದೆ. ಚರಿತ್ರೆಯಲ್ಲಿ ಎಂದೂ ಮರೆಯದ ಐತಿಹ್ಯ ಹೊಂದಿದೆ.
ಏಳು ಸಾಲಿನ ಗುಡ್ಡಗಳ ಮೊದಲ ಸಾಲಿನ ಪೂರ್ವದ ಸೆರಗಿನಲ್ಲಿ ದಕ್ಷೀಣಕ್ಕೆ ತುಂಗೆಯನ್ನು ಇಟ್ಟುಕೊಂಡು ಹೊಂದಿರುವಂತಹ ಪ್ರದೇಶವೆ ಈ ಆನೆಗೊಂದಿ ಪ್ರದೇಶ. ವೈಶಿಷ್ಟಪೂರ್ಣವಾದ ಇಂತಹ ಪ್ರದೇಶದಲ್ಲಿ ನೆಲೆಸಿರುವ ನಾವೇ ಧನ್ಯರು, ಐತಿಹಾಸಿಕ ಸತ್ಯಗಳನ್ನು ಇವತ್ತಿಗೆ ಸಂತತಿಗೆ ಹೇಳುವಂತಹ ಒಂದು ಕಾರ್ಯಕ್ರಮ ಮತ್ತು ಪ್ರಕ್ರಿಯೆ ಎಂದರೆ ಈ ರೀತಿಯ ಉತ್ಸವಗಳು. ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಪತ್ತು ಜನಪದ ಶೈಲಿಯಲ್ಲಿ ಬಿಂಬಿತವಾಗಿತ್ತು ಎಂದು ಹೇಳಿದರು.
ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕಾರ್ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸ: ಸಂಶೋಧಕರಾದ ಡಾ.ಗೀತಾ ಪೊಲೀಸ್ ಪಾಟೀಲ್ ಅವರು ಆನೆಗೊಂದಿ-ಕುಮ್ಮಟದುರ್ಗ-ವಿಜಯನಗರ ಚಾರಿತ್ರಿಕ ಪರಂಪರೆ’, ಸಾಹಿತಿಗಳಾದ ಪವನ ಕುಮಾರ ಗುಂಡೂರು ಅವರು ಆನೆಗೊಂದಿ-ಕುಮ್ಮಟದುರ್ಗ-ವಿಜಯನಗರ ಸಾಂಸ್ಕೃತಿಕ ಪರಂಪರೆ, ಸಂಶೋಧಕರಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಕಿಷ್ಕಿಂದೆ-ಅಂಜನಾದ್ರಿ ಅಭಿವೃದ್ಧಿ ಮುನ್ನೋಟ, ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಅವರು ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆ ಮತ್ತು ಸವಾಲುಗಳು, ಕೃಷಿ ವಿಜ್ಞಾನಿಗಳಾದ ಡಾ ಎಸ್.ಎ.ಗೌಡರ್ ಅವರು ತುಂಗಭದ್ರಾ ನೀರಾವರಿ ಪ್ರದೇಶದ ಪರ್ಯಾಯ ಕೃಷಿ ಸಾಧ್ಯತೆಗಳು, ಶೈಲಜಾ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಕರಕುಶಲ ಕಲೆಯ ಬೆಳವಣಿಗೆ-ಮಹಿಳೆಯ ಪಾತ್ರ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಚಾರಗೋಷ್ಠಿ ರಾಜವಂಶಸ್ಥರಾದ ಲಲಿತರಾಣಿ ಶ್ರೀರಂಗದೇವರಾಯಲು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ, ತಾಲ್ಲೂಕು ಪಂಚಾಯತ್ ಇಓ ಲಕ್ಷ್ಮೀ ದೇವಿ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವಿ, ಉಪಾಧ್ಯಕ್ಷರಾದ ಪೂರ್ಣಿಮಾ, ಗಣ್ಯರಾದ ಅರುಣಾ ಲಕ್ಷ್ಮೀ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜೇಶ್ವರಿ ಸುರೇಶ, ಜಗನ್ನಾಥ್ ದೇಸಾಯಿ, ರಾಮ್ ಮೂರ್ತಿ ನವಲಿ, ನಾಗರಾಜ ಇಂಗಳಗಿ, ಪ್ರಸನ್ನ ದೇಸಾಯಿ, ಸುದರ್ಶನ್ ವರ್ಮ, ರಮೇಶ್ ಕುಲಕರ್ಣಿ, ಮಹೇಶ್ ಸಿಂಗನಾಳ, ಮಂಜುನಾಥ್ ದರೋಜಿ, ಹನುಮಂತಪ್ಪ, ಶಂಶಾದ್ ಬೇಗಂ, ಪಂಪಣ್ಣ ನಾಯಕ, ಅರ್ಜುನ ನಾಯಕ, ವಿರುಪಾಕ್ಷ ನಾಯಕ, ರಾಜೇಶ ರೆಡ್ಡಿ, ಜೀಲಾನ್ ಫಾಶಾ ಖಾದ್ರಿ, ಮಲ್ಲಿಕಾರ್ಜುನ ನಂದಾಪೂರ ವೈ, ರಾಮಣ್ಣ ನಾಯಕ ಬಳ್ಳಾರಿ, ಚನ್ನಬಸವ ಜೇರೆನ್, ರಾಮೇಶ ಕೋಟಿ, ಚಂದ್ರಶೇಖರ ಶೆಟ್ಟಿ, ದೇವಪ್ಪ ವಮಾಳೆ ಕಿ, ಟಿ. ಜಿ ಬಾಬು, ವಿಶ್ವನಾಥ ಬೆಳಗಲ್ ಮಠ, ಎಸ್ ಎಂ ಪಟೇಲ್, ಎಂ. ಜೆ ಶ್ರೀನಿವಾಸ, ಕೆ, ಮಲ್ಲಿಕಾರ್ಜುನ ಸಣಾಪುರ, ಪ್ರವೀಣ ಪೊಲೀಸ್ ಪಾಟೀಲ್, ಶಾಹೀನ್ ಕೌಸರ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!