ಆನೆಗೊಂದಿ ಉತ್ಸವ: ಆಕರ್ಷಕ ಮ್ಯಾರಥಾನ್ ಸ್ಪರ್ಧೆ
ಸಚಿನ್, ಮಣಿಕಂಠ, ರಾಜು ನಾಯಕ್, ಮಂಜುನಾಥ, ಮಹಮದ್ ಸಮೀರ್, ಆಫಿಯಾ, ಹೀನಾಕೌಸರ್, ವಿಜಯಲಕ್ಷ್ಮಿ, ಸುನೀತಾ, ಸಿಂಧು ಮ್ಯಾರಥಾನ್ ವಿಜೇತರು
ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಆನೆಗೊಂದಿಯ ಕಡೆಬಾಗಿಲು ಹತ್ತಿರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೊಡಿ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮ್ಯಾರಥಾನ್ ಓಟದ ವಿಜೇತರು ಮತ್ತು ಬಹುಮಾನ: ಆನೆಗೊಂದಿಯ ಕಡೆಬಾಗಿಲುದಿಂದ ಪ್ರಾರಂಭಗೊAಡು ಅಂಜನಾದ್ರಿ ಬೆಟ್ಟದ ದಾರಿ, ಪಂಪಾ ಸರೋವರವರೆಗೆ ನಡೆದ ಮ್ಯಾರಾಥಾನ್ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ 12,000 ರೂ., ದ್ವಿತೀಯ 10,000 ರೂ., ತೃತೀಯ 8000 ರೂ., ಚತುಥ್ 6000 ರೂ. ಮತ್ತು ಪಂಚಮಿ 4000 ರೂ.ಗಳಾಗಿದ್ದು, ಈ ಓಟದಲ್ಲಿ ಪುರುಷರ ವಿಭಾಗದಲ್ಲಿ ಧಾರವಾಡದ ಸಚಿನ್ ಪ್ರಥಮ ಸ್ಥಾನ ಪಡೆದರು. ಧಾರವಾಡದ ಮಣಿಕಂಠ ದ್ವಿತೀಯ, ಅಥಣಿಯ ರಾಜು ನಾಯಕ್ ತೃತೀಯ, ಹೊಸಪೇಟೆಯ ಮಂಜುನಾಥ ನಾಲ್ಕನೇ ಸ್ಥಾನ ಪಡೆದರೆ, ಗಂಗಾವತಿಯ ಮಹಮದ್ ಸಮೀರ್ ಐದನೇ ಸ್ಥಾನ ಪಡೆದುಕೊಂಡರು.
ಅದೇ ರೀತಿ ಮ್ಯಾರಥಾನ್ ಓಟದ ಮಹಿಳಾ ವಿಭಾಗದಲ್ಲಿ ಹಿರೇಬೆಣಕಲ್-1ರ ಆಫಿಯಾ ಪ್ರಥಮ ಸ್ಥಾನ ಪಡೆದರು. ಹಿರೇಬೆಣಕಲ್-1ರ ಹಿನಾಕೌಸರ್ ದ್ವಿತೀಯ, ಧಾರವಾಡದ ವಿಜಯಲಕ್ಷ್ಮಿ ತೃತೀಯ, ಕೊಪ್ಪಳದ ಸುನೀತಾ ನಾಲ್ಕನೇ ಸ್ಥಾನ ಪಡೆದರೆ ಕೊಪ್ಪಳದ ಸಿಂಧು ಐದನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಆನೆಗೊಂದಿ ಉತ್ಸವ ಮ್ಯಾರಥಾನ್ ವಿಜೇತರಾಗಿ ಬಹುಮಾನಕ್ಕೆ ಅರ್ಹರಾದರು.
Comments are closed.