ವಿಕಲಚೇತನರಿಗೆ ಅನುಕಂಪದ ಬದಲು ಅವಕಾಶ ನೀಡಬೇಕು:ನಾಗರಾಜ ಜುಮ್ಮಣ್ಣನ್ನವರ

Get real time updates directly on you device, subscribe now.


ಕೊಪ್ಪಳ: ವಿಕಲಚೇತನರಿಗೆ ಅವರ ಅಂಗವೈಕಲ್ಯತೆಯನ್ನು ಕಂಡು ಅನುಕಂಪವನ್ನು ಪಡದೆ ಅವರಿಗೆ ಅವಕಾಶ ನೀಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಸರಕಾರಿ ನೌಕರರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್ ಜುಮ್ಮನ್ನವರ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗ|ಣದಲ್ಲಿ ಯುವಸಬೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ವಿಕಲಚೇತನರ ಬಗ್ಗೆ ಅನುಕಂಪವನ್ನು ಪಡುವ ಬದಲಾಗಿ ಅವರಿಗೆ ಅವಕಾಶ ಮಾಡಿ ಕೊಟ್ಟಾಗ ಮಾತ್ರ ಅವರಲ್ಲಿ ಇರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ.ರಾಜ್ಯದಲ್ಲೇ ಮೊದಲ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ.ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವಿಕಲಚೇತನರ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ವಿಕಲಚೇತನ ನೌಕರರ ಸಂಘದವರು ಮನವಿ ಮಾಡಿದ್ದಾರೆ.ಈ ಕುರಿತು ರಾಜ್ಯ ಸಂಘದ ಸಭೆಯಲ್ಲಿ ಹಾಗೂ ಸರಕಾರದ ಜೊತೆಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ವಿಕಲಚೇತನ ನೌಕರರ ಕ್ರೀಡಾಕೂಟ ಆಯೋಜನೆಗೆ ಪ್ರಯತ್ನ ಮಾಡುತ್ತೆನೆ.ಅಲ್ಲದೇ ವಿಕಲಚೇತನರು ಕೂಡಾ ಪ್ರಸ್ತುತ ದಿನಮಾನಗಳಲ್ಲಿ ತಮ್ಮ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಠ್ಠಲ್ ಜಾಬಗೌಡ iತನಾಡಿ,ವಿಕಲಚೇತನ ನೌಕರರಿಗಾಗಿ ಯುವಸಭೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಕೂಟಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಟ್ಟಿದೆ.ವಿಕಲಚೇತನ ನೌಕರರ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಗುರುತಿಸಬೇಕಾದರೆ ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡುತ್ತಾ,ವಿಕಲಚೇತನ ನೌಕರರು ಸಾಮಾನ್ಯ ನೌಕರರೊಂದಿಗೆ ಸ್ಪರ್ಧೇ ಮಾಡಲು ಸಾಧ್ಯವಿಲ್ಲ.ವಿಕಲಚೇತನ ನೌಕರರಿಗೆ ಅವರ ಅಂಗವೈಕಲ್ಯತೆಗೆ ಅನುಗುಣವಾಗಿ ಸರಕಾರಿ ನೌಕರರ ಕ್ರೀಡಾಕೂಟದ ಜೊತೆಯಲ್ಲಿ ವಿಕಲಚೇತನ ನೌಕರರಿಗೂ ಕೂಡಾ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ಮನವಿ ಮಾಡಲಾಗಿತ್ತು.ಅದರಂತೆ ಕಳೆದ ೬ ವರ್ಷಗಳಿಂದ ವಿಕಲಚೇತನರ ಕ್ರೀಡಾಕೂಟಗ|ಳು ಜರುಗುತ್ತಿವೆ.ಆದರೆ ರಾಜ್ಯದಲ್ಲಿ ಕೇವಲ ೪ ಜಿಲ್ಲೆಗಳ ಮಾತ್ರ ವಿಕಲಚೇತನ ನೌಕರರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿದ್ದು,ಉಳಿದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ನೌಕರರು ಕ್ರೀಡಾಕೂಟದಿಂದ ವಂಚಿತರಾಗುತ್ತಿದ್ದಾರೆ.ಈಗಾಗಲೇ ರಾಜ್ಯದಲ್ಲಿ ಎಲ್ಲಾ ಜಿಲ್ಲೆಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವಿಕಲಚೇತನ ನೌಕರರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ಮನವಿ ನೀಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.ವಿಕಲಚೇತನ ನೌಕರರು ಕೂಡಾ ಸರಕಾರಿ ನೌಕರರ ಸಮಘದ ಸದಸ್ಯರಾಗಿದ್ದು,ಸರಕಾರಿ ನೌಕರರ ಸಂಘವು ಕೂಡಾ ಇದರ ಬಗ್ಗೆ ಗಮನ ಹರಿಸಬೇಕು.ಅಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಿಕಲಚೇತನ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದರು.
ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯರಾದ ಗೋಪಾಲ ದುಬೆ,ಖಜಾಂಚಿ ವೆಂಕಟೇಶ ಕುಲಕರ್ಣಿ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ಉಪಾಧ್ಯಕ್ಷರಾದ ಆಸೀಫ್ ಅಲಿ,ಅಕ್ಷರ ದಾಸೋಹ ಅಧಿಕಾರಿ ಹನುಮಂತಪ್ಪ,ದೈಹಿಕ ಶಿಕ್ಷಣಾಧಿಕಾರಿ ಬಸವರಾಜ,ವಿಕಲಚೇತನ ನೌಕರರ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ,ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಬುಲ್ಟಿ,ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ,ಕುಕನೂರು ತಾಲೂಕ ಅಧ್ಯಕ್ಷರಾದ ಲಾಲಬಾಷಾ,ಕುಷ್ಟಗಿಯ ಚಂದಪ್ಪ ಕರಡಿ,ತಾಲೂಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ಬಸವರಾಜ ನಿರೂಪಿಸಿದರು.
ನೌಕರರ ಸಂಘದ ನಿರ್ದೇಶ|ಕರಾದ ಸೋಮರಡ್ಡಿ ಹಳ್ಳೂರು ಸ್ವಾಗತಿಸಿ,ಸಾಂಸ್ಕೃತಿಕ ಕಾರ್ಯದರ್ಶಿ ರಾಮಣ್ಣ ಶ್ಯಾವಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!