ಕೊಪ್ಪಳ ನಗರಸಭೆ: ಕನ್ನಡ ಭಾಷೆ ನಾಮಫಲಕಗಳ ಅಳವಡಿಕೆಗೆ ಸೂಚನೆ
: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ, ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು.ಯಾವುದೇ ವ್ಯಾಪಾರಸ್ಥರ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರದಿದ್ದರೆ ಅಂತಹ ನಾಮಫಲಕಗಳನ್ನು 7 ದಿನಗೊಳಗಾಗಿ ಬದಲಾಯಿಸಬೇಕು. ತಪ್ಪಿದಲ್ಲಿ ನಗರಸಭೆ/ಪುರಸಭೆ ಕಾಯ್ದೆಯ ಪ್ರಕಾರ ನಾಮಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.