ಕವಲೂರ ಗ್ರಾಮದ ಪಕ್ಕಿನ್ ಕೆರೆ ಸ್ವಚ್ಛತೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ಕಾರ್ಯದರ್ಶಿಗೆ ಮನವಿ
.
ಕೊಪ್ಪಳ: ತಾಲೂಕಿನ ಕವಲೂರ ಗ್ರಾಮದ ಪಕ್ಕಿನ್ ಕೆರೆ ಸ್ವಚ್ಛಗೊಳಿಸಿ ಅಭಿವೃದ್ಧಿಗೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಂಬಣ್ಣ ರುದ್ರಾಕ್ಷಿ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕವಲೂರ ಗ್ರಾಮ ಘಟಕ ಹಾಗೂ ಜಿಲ್ಲಾ ಘಟಕ ಜಂಟಿಯಾಗಿ ಮನವಿ ಅರ್ಪಿಸಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಕವಲೂರ ಗ್ರಾಮದ ರಿಂಗ್ ರೋಡ್ ನಿರ್ಮಾಣ. ಪಕ್ಕಿನ್ ಕೆರೆ ಸ್ವಚ್ಛತೆ ಮಾಡಿ ಅಭಿವೃದ್ಧಿ ಗೊಳಿಸಬೇಕು. ಗ್ರಾಮದಲ್ಲಿ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಬೇಕು.ಕವಲೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಕಿನ್ ಕೆರಿ ಮೇಲಿರುವ ಪ್ಲಾಟ್ ಗಳಿಂದ ಬರುವ ಚರಂಡಿ ಹಾಗೂ ಬಚ್ಚಲ ನೀರು ಕೆರೆಗೆ ಬಂದು ಸೇರುತ್ತದೆ. ಐತಿಹಾಸಿಕ ಹಿನ್ನಲೆ ಹೊಂದಿರುವ ಕೆರೆ. ಪ್ರಾಣಿ ಪಕ್ಷಿಗಳಿಗೆ ಮತ್ತು ಗ್ರಾಮದ ಮನೆ ಬಳಕೆಗೆ.ಬಟ್ಟೆ ತೊಳೆಯಲು ಬಳಸುವ ನೀರು. ಕೆರೆ ದಡದಲ್ಲಿರುವ ಅಂಗಡಿಯ ಕಸ. ಕಡ್ಡಿ.ಪ್ಲಾಸ್ಟಿಕ್. ಮಲ ಮೂತ್ರ ವಿಸರ್ಜನೆ ಮಾಡುತಿದ್ದು. ಮಲಿನ ವಸ್ತುಗಳು ಕೆರೆಗೆ ಸೇರುತ್ತಿದ್ದರಿಂದ ಕೆರೆಯ ನೀರು ಬಳಸಲು ಯೋಗ್ಯವಾಗಿಲ್ಲಾ. ರೋಗ ರೂಜಿನಗಳು ಬರುತಿದೆ. ಕೆರೆ ನೀರು ಪ್ರಾಣಿಗಳು ಸಹ ಕುಡಿಯುತ್ತಿಲ್ಲಾ. ಪ್ಲಾಟ್‌ನ ಗಲಿಜು ನೀರನ್ನು ಬೇರೆ ಕಡೆ ಹರಿಯಲು ಚರಂಡಿ ವ್ಯವಸ್ಥೆ ಮಾಡಿ. ನೇರವಾಗಿ ಮಳೆಯ ನೀರನ್ನು ಕೆರೆಯಲ್ಲಿ ಸಂಗ್ರಹಿಸಬೇಕು. ಜೆ.ಜೆ.ಎಮ್. ಕಾಮಗಾರಿ ಅರ್ಧಕ್ಕೆ ನಿಂತಿದ್ದಲ್ಲದೆ ಕಳಪೆ ಕಾಮಗಾರಿ ನಡೆದಿದೆ ಸರಿಪಡಿಸಬೇಕು. ಕವಲೂರ ಗ್ರಾಮದ ಜನ ಹೆಡಿಗಳಲ್ಲ. 1994ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಲ್ಲ ಎಂದು ಚುನಾವಣಾ ಪ್ರಚಾರಕ್ಕೆ ಬಂದಾಗ ಹಾಲಿ ಶಾಸಕರನ್ನು ಕೂಡಿ ಹಾಕಿದ್ದರು.ಕವಲೂರ ಗ್ರಾಮಕ್ಕೆ ನಿರ್ಲಕ್ಷ್ಯ ಮಾಡುವ ಜನ ಪ್ರತಿನಿಧಿಗಳಿಗೆ ಎಚ್ಚರಿಕೆಯಾಗಿದೆ. ಮುಂದೆ ಚುನಾವಣೆ ಬರಲಿದೆ. ಎಲ್ಲರೂ ಮತಕ್ಕಾಗಿ ಮನೆ ಮನೆಗೆ ಬರುತ್ತಾರೆ. ಗ್ರಾಮಕ್ಕೆ ಮೂಲ ಭೂತ ಸೌಲಭ್ಯಗಳನ್ನು ಏನು ಕೊಟ್ಟಿದ್ದೀರಿ ? ಎಂದು ಪ್ರಶ್ನಿಸಲು ಕರೆ ನೀಡಿದರು.
ಗ್ರಾಮ ಘಟಕದ ಕಾರ್ಯದರ್ಶಿ ಪಾನಿ ಶಾ ಮಕಾಂದಾರ್ ಮಾತನಾಡಿ ಕವಲೂರ ಮುರ್ಲಾಪುರ ರಸ್ತೆ ಮತ್ತು ಕವಲೂರ ಗಟ್ಟಿ ರೆಡ್ಡಿಹಾಳ ರಸ್ತೆ ಹಾಗೂ ಕವಲೂರ ಬನ್ನಿಕೊಪ್ಪ ರಸ್ತೆ ಹದಗೆಟ್ಟಿರುವದರಿಂದ ರಸ್ತೆ ಯಾವುದೆ ರೀತಿಯ ಅಭಿವೃದ್ಧಿ ಹೊಂದಿಲ್ಲಾ ಮತ್ತು ಕೊಪ್ಪಳದ ಕಟ್ಟ ಕಡೆ ಗ್ರಾಮ ಆಗಿರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಾ ಸಂಚಾಲಕ ರಾಜಾ ಸಾಬ್ ತಹಶೀಲ್ದಾರ್ ಮಾತನಾಡಿ ಈ ಹಿಂದೆ ಊರಿನ ರೈತರು ಹಾಗೂ ಗ್ರಾಮಸ್ಥರು ಈ ವಿಷಯದ ಬಗ್ಗೆ ತಮಗೆ ಅರ್ಜಿ ಸಲ್ಲಿಸಿದ್ದು ತಾವುಗಳು ಯಾವುದೆ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಬೇಡಿಕೆಗಳನ್ನು ಒಂದು ತಿಂಗಳ ಒಳಗಾಗಿ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ರೂಪದ ಹೋರಾಟ ಪ್ರಾರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕವಲೂರ ಗ್ರಾಮ ಘಟಕದ ಅಧ್ಯಕ್ಷ ಶರಣಯ್ಯ ಅಬ್ಬಿಗೇರಿ.ಗ್ರಾಮ ಘಟಕದ ಉಪಾಧ್ಯಕ್ಷ
ಸೈಯ್ಯದ್ ಬಾಷಾ ದೊಡ್ಡಮನಿ.
ಜಿಲ್ಲಾ ಸಂಘಟನಾ ಸಂಚಾಲಕ
ತುಕಾರಾಮ್ ಬಿ. ಪಾತ್ರೋಟಿ. ಮುಖಂಡ ಮಹಾಲಿಂಗಯ್ಯ ಸಿಂದೋಗಿ ಮಠ. ಶರಣಯ್ಯ ರಾಮಗೇರಿ ಮಠ. ಶಂಶುದ್ದೀನ್ ಮಕಾಂದಾರ್. ಅಶೋಕ್ ಎಲಿಗಾರ. ಹುಸೇನ್ ಬಾಷಾ ತಹಶೀಲ್ದಾರ್. ಮೌಲಾ ಸಾಬ್ ಮತ್ತಿಗೇರಿ. ಹನುಮಂತ ದೊಡ್ಡಮನಿ ಸೇರಿದಂತೆ ಅಪಾರ ಸಂಖ್ಯೆ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
Comments are closed.