ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್
ಕುಷ್ಟಗಿ ಜೂ.26; ಕುಷ್ಟಗಿ ತಾಲೂಕು ಅತೀ ಹಿಂದುಳಿದ ಪ್ರದೇಶವಾದ ಕಾರಣ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಅವಶ್ಯಕತೆ ಇದೆ ಸರಕಾರದ
ಹಂತದಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುತ್ತೇನೆ ಎಂದು ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಭರವಸೆ ನೀಡಿದರು.
ತಾಲೂಕಿನ ಬೀಳಗಿ, ಕಬ್ಬರಗಿ, ಕಲ್ಲಗೋನಾಳ, ಕಡೂರ, ಯರೇಗೋನಾಳ, ಹುಚನೂರ, ಅಂಟರಠಾಣ, ಪುರ್ತಗೇರಿ, ಹೂಲಗೇರಿ ಹಾಗೂ ಬಂಡರಗಲ್ಲ
ಗ್ರಾಮದಲ್ಲಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಸ್ಥರ ಸನ್ಮಾನ
ಸ್ವೀಕರಿಸಿ ಮಾತನಾಡಿದ ಅವರು ಕ್ಷೇತ್ರದ ಮತದಾರರು ನನ್ನ ಮೇಲೆ ನೂರಾರು ಆಸೆ ಹಾಗೂ ಕನಸುಗಳನ್ನು ಇಟ್ಟು 2023 ನೇ ಸಾಲಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದೀರಿ ನಿಮ್ಮ ಆಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ
ನೀಡಿದರು. ಕೃಷ್ಣಾ ಬಿ ಸ್ಕೀಂ ಯೋಜನೆ ಹಾಗೂ ಕೆರೆ ತುಂಬಿಸುವ ನೀರಾವರಿ ಯೋಜನೆಗಳನ್ನು ಸರ್ಮಪಕವಾಗಿ ಜಾರಿಗೆ
ತರುವ ಮೂಲಕ ಕುಷ್ಠಗಿ ಕ್ಷೇತ್ರದ ರೈತರ ಹೊಲಗಳಿಗೆ ನೀರು ಒದಗಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದರು.
ವಿವಿಧ ಗ್ರಾಮಗಳ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ
ಬಸವರಾಜ ಹಳ್ಳೂರು, ಜಿಲ್ಲಾ ಉಪಾಧ್ಯಕ್ಷ ತುಕಾರಾಂ ಸುರ್ವೆ, ಪ್ರಭಾಕರ ಚಿಣಿ, ಮಲ್ಲಣ್ಣ ಪಲ್ಲೇದ, ಚಂದ್ರಕಾಂತ ವಡಿಗೇರಿ,
ಮುತ್ತು ರಾಥೋಡ್, ಮಹಾಂತೇಶ ಬದಾಮಿ, ನಾಗರಾಜ ನಂದಾಪೂರ, ರಾಜು ನಾಯಕ್, ಪ್ರಕಾಶ, ರಾಮಲಿಂಗಪ್ಪ ಬಿರಲದಿನ್ನಿ, ಬಸವರಾಜ ಗಡಚಿಂತಿ, ಸೋಮಪ್ಪ ಹಡಪದ, ಶರಣಪ್ಪ ಕಮತರ್, ರಮೇಶ್ ಕಮತರ್, ಹನಮಂತ ವಣಗೇರಿ, ನಾಗರಾಜ್ ಕಮತರ್, ರಮೇಶ್ ಕರಮುಡಿ ಹಾಗೂ ಬೀಳಗಿ, ಕಬ್ಬರಗಿ, ಕಲ್ಲಗೋನಾಳ, ಕಡೂರ, ಯರೇಗೋನಾಳ, ಹುಚನೂರ ಅಂಟರಠಾಣ, ಪುರ್ತಗೇರಿ, ಹೂಲಗೇರಿ ಹಾಗೂ ಬಂಡರಗಲ್ಲ ಗ್ರಾಮದ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
Comments are closed.