ಹಣ್ಣುಗಳನ್ನು ಸೇವಿಸಿ, ಜೇನು ಸವಿದು ಆರೋಗ್ಯ ಭಾಗ್ಯ ಪಡೆಯಿರಿ: ಕೃಷ್ಣ ಉಕ್ಕುಂದ

Get real time updates directly on you device, subscribe now.

ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಾರ್ವಜನಿಕರು ಭೇಟಿ ನೀಡಿ, ಎಲ್ಲಾ ಹಣ್ಣುಗಳನ್ನು ಸೇವಿಸಿ ಜೇನು ಸವಿದು ಆರೋಗ್ಯ ಭಾಗ್ಯ ಪಡೆಯಿರಿ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ತಿಳಿಸಿದ್ದಾರೆ.
ಈ ವರ್ಷದ ಮಹಾಶಿವರಾತ್ರಿ ಪ್ರಯುಕ್ತ ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ ಹಣ್ಣು ಮತ್ತು ಜೇನು ಮೇಳವನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಮಾ.6 ರಿಂದ ಮಾ.9 ರವರೆಗೆ 4 ದಿನಗಳ ಈ ಮೇಳದಲ್ಲಿ ರೈತರು ಬೇಳೆದ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಉತ್ಪನ್ನಗಳನ್ನು ತೋಟಗಾರಿಕೆ ಇಲಾಖೆ (ಜಿಪಂ) ಕೊಪ್ಪಳ ಕಚೇರಿಯ ಆವರಣದಲ್ಲಿ ಮಾರಾಟ ಮಾಡಲು 17ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ಅಳವಡಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ಲಭ್ಯವಿರುವ ವಿವಿಧ ಬಗೆಯ ಹತ್ತಾರು ಹಣ್ಣುಗಳ ವಿವಿಧ ತಳಿಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳದ್ದಾಗಿದೆ.
ಈ ಮೇಳದಲ್ಲಿ ದ್ರಾಕ್ಷಿ, ಕಲ್ಲಂಗಡಿ, ಪೇರಲ, ಅಂಜೂರ, ಪಪ್ಪಾಯ, ಬಾಳೆ ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯವಿರುತ್ತವೆ. ಈ ಎಲ್ಲಾ ಹಣ್ಣುಗಳನ್ನು ಹಾಗೂ ಈ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಜ್ಯೂಸ್, ಜಾಮ್, ಜೆಲ್ಲಿ, ಪುಡಿ, ಸೋಪ, ಇತ್ಯಾಧಿಗಳನ್ನು ಗ್ರಾಹಕರ ಆರೋಗ್ಯ ವೃದ್ಧಿ ದೃಷ್ಟಯಿಂದ ಮಾರಾಟ ಮಾಡಲಾಗುತ್ತಿದೆ.
ಈ ಮೇಳದಲ್ಲಿ ರೈತರಿಗಾಗಿ ಉಚಿತವಾಗಿ ಸ್ಟಾಲ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಆಯೋಜಿಸಲಾಗಿದ್ದು, 17 ಕ್ಕೂ ಹೆಚ್ಚು ಹಣ್ಣು ಬೆಳೆಗಾರರು, 10 ಕ್ಕೂ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡಾ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಕೊಪ್ಪಳ ಜಿಲ್ಲಾ ಹಾಪಕಾಮ್ಸ್ ನೂರಾರು ಸದಸ್ಯ ರೈತರಿಂದ ವಿವಿಧ ಹಣ್ಣುಗಳನ್ನು ಖರೀದಿಸಿ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಈ ವರ್ಷದ ಮೇಳದ ವಿಶೇಷವೆಂದರೇ ಬಾಕ್ಸ್ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ಪೂರೈಸುತ್ತಿರುವುದು. ಇದರಿಂದಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಎಲ್ಲಾ ಹಣ್ಣು ಬೆಳೆಗಾರರಿಗೆ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸದಂತಾಗಿದೆ. ಮೇಳದಲ್ಲಿ ಗ್ರಾಹಕರಿಗಾಗಿ ವಿಶೇಷ ಆಕರ್ಷಣೆಗೆಂದು ಹಣ್ಣುಗಳಿಂದ ಅಲಂಕೃತವಾದ ಫೋಟೋ ಪಾಂಯಿಂಟ್‌ನ್ನು ಸಹ ಆಯೋಜಿಸಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಈ ಮೇಳದಲ್ಲಿ 50ಕ್ಕೂ ಹೆಚ್ಚಿನ ವಿವಿಧ ಹಣ್ಣುಗಳ ತಳಿಗಳನ್ನು ಪ್ರದರ್ಶನಕ್ಕೆ ಈಡಲಾಗಿದೆ ಹಾಗೂ ರೈತರು ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಪರಲ, ಅಂಜೂರ, ಪಪ್ಪಾಯ, ಬಾಳೆ ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳಾದ ಜೇನಿನ ಸೋಪ್ ಜೇನಿನ, ಲಿಪ್ ಭಾಮ್, ವ್ಯಾಸ್ಲಿನ್, ಜೇನಿನ ಜಾಮ್, ಹಾಗೂ 10 ಕ್ಕೂ ಹೆಚ್ಚಿನ ವಿವಿಧ ಜೇನು ತುಪ್ಪಗಳಾದ ಸುಂಟಿ ಜೇನು, ನಿಂಬೆ ಜೇನು, ನೇರಳೆ ಜೇನು, ನುಗ್ಗೆ ಜೇನು, ಬೆಳ್ಳೊಳ್ಳಿ ಜೇನು ಹಾಗೂ ವಿವಿಧ ಹೂಗಳಿಂದ ಕೂಡಿದ ಜೇನು ರಾಯಲ್ ಜೆಲ್ಲಿ ಹಾಗೂ ಔಷಧಿ ಸಸ್ಯಗಳ ಗಿಡ ಮೂಲಿಕೆಗಳನ್ನು ಇಡಲಾಗಿದೆ ಹಾಗೂ ಮಾರಾಟ ಮಾಡಲಾಗುತ್ತದೆೆ. ಮೇಳದಲ್ಲಿ ವಿವಿಧ ಜಿಲ್ಲೆಗಳ ಬೆಳೆಯುವ ಕೆಂಪು ಬಾಳೆ, ನೆಂದ್ರನ್ ಬಾಳೆ, ಬೆಣ್ಣೆ ಹಣ್ಣು, ಪಿಯರ್, ಲೀಚಿ, ವಿದೇಶಿ ಸೇಬು ಹಾಗೂ ವಿವಿಧ ಹಣ್ಣುಗಳನ್ನು ಹಾಗೂ ಹಣ್ಣಿನ ವಿವಿಧ ಸಂಸ್ಕರಿಸಿದ ಉತ್ಪನ್ನಗಳನ್ನು ಸಹ ಪ್ರದರ್ಶನಕ್ಕಿಡಲಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಹಣ್ಣುಗಳನ್ನು ಪ್ಯಾಕ ಮಾಡಿ ಸರಬರಾಜು ಮಾಡಲು ಆಕರ್ಷಿಣೀಯವಾದ ರಟ್ಟಿನ ಡಬ್ಬಿಗಳನ್ನು ವಿತರಿಸಲಾಗುತ್ತಿದೆ. ಇವುಗಳ ಮೇಲೆ ರೈತರ ಹೆಸರು, ಹಣ್ಣುಗಳು ಅವುಗಳ ವಿವಿಧ ತಳಿ, ಅಲ್ಲದೇ ದರವನ್ನು ಕೂಡಾ ಮುದ್ರಿಸಿದ್ದು, ರೈತರಿಗೂ, ಗ್ರಾಹಕರಿಗೂ ಇದು ಅತ್ಯಂತ ಪ್ರಯೋಜನಕಾರಿಯಾಗಲಿದೆ. ಅಲ್ಲದೇ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಎಲ್ಲಾ ಹಣ್ಣುಗಳ ಹಾಗೂ ರೈತರ ಹೆಸರು ಕೂಡಾ ದೂರ ದೂರಕ್ಕೆ ಪಸರಿಸಿದಂತಾಗುತ್ತದೆ ಹೀಗಾಗಿ ಮಾರುಕಟ್ಟೆ ಒದಗಿಸಿದಂತಾಗುತ್ತದೆ.
ಇದಲ್ಲದೇ ಎಲ್ಲಾ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ವಿಶಿಷ್ಟ ಅನುಭವ ನೀಡಬಲ್ಲದಾಗಿದೆ.
“ಎಲ್ಲಾ ಹಣ್ಣುಗಳನ್ನು ಸೇವಿಸಿ ಜೇನು ಸವಿದು ಆರೋಗ್ಯ ಭಾಗ್ಯ ಪಡೆಯಿರಿ” ಎಂಬುದೇ ಈ ಮೇಳದ ದ್ಯೇಯವಾಗಿದ್ದು, ಜಿಲ್ಲೆಯ ಗ್ರಾಹಕರು ಈ ಮೇಳದ ಸದುಪಯೋಗ ಪಡೆಯಬೇಕೆಂದು ಕೊಪ್ಪಳ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!