ಇಕ್ಬಾಲ್ ಅನ್ಸಾರಿಗೆ ಮಂತ್ರಿ ಪದವಿ ಕೊಡಿ: ಗಿರೀಶ್ ರಾವ್ ಗಾಯಕವಾಡ್
ಗಂಗಾವತಿ: ಮಾಜಿ ಸಚಿವ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕ ಜನಾನುರಾಗಿ , ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ವಿಧಾನ ಪರಿಷತ್ ಜತೆಗೆ ಮಂತ್ರಿ ಮಾಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಗಿರೀಶ್ ರಾವ್ ಎ. ಗಾಯಕವಾಡ್ ವರೀಷ್ಠರಲ್ಲಿ ಮನವಿ ಮಾಡಿದ್ದಾರೆ.
ಪ್ರಾಮಾಣಿಕ ರಾಜಕಾರಣಿ ಅನ್ಸಾರಿಯವರು ತಮಗೆ ನೀಡಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಕಡಿಮೆ ಅವಧಿಯಲ್ಲಿ ಪ್ರಭಾವಿ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಪಕ್ಷದ ಆಂತರಿಕ ಕುತಂತ್ರಕ್ಕೆ ಸೋಲನುಭವಿಸಿದ್ದು ಅವರು ಪಡೆದ ಮತಗಳೆ ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ರಾಕ್ಯರಾಜಕಾರಣಕ್ಕೆ ಅನಿವಾರ್ಯ ಮುಸ್ಲಿಂ ನಾಯಕ ಅನ್ಸಾರಿಯವರನ್ನು ಎಂಎಲ್ ಸಿ ಮಾಡಿ, ಮಂತ್ರಿ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಎಂಪಿ ಚುನಾವಣೆ ಸಾಕಷ್ಟು ಮುಸ್ಲೀಂ ಮತಗಳು ಪಕ್ಷಕ್ಲೆ ಹರಿದು ಬರಲಿವೆ,ಕಾಂಗ್ರೆಸ್ ನಾಯಕರು ಶೀಘ್ರ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಗಾಯಕವಾಡ್ ಆಗ್ರಹಿಸಿದ್ದಾರೆ
Comments are closed.