ಕೂಕನಪಳ್ಳಿ : ಶ್ರಮದಾನ ಕಾರ್ಯಕ್ರಮ
ಕೊಪ್ಪಳ : ಪರಿಸರ ರತ್ನ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ. ಟಿ ಹಾಗೂ ಪರಿಸರ ಪ್ರೇಮ ತಂಡ, ಕೊಪ್ಪಳ , ಕಲ್ ತಾವರಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬರುವ ಕೂಕನಪಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರದಂದು 22 ನೇ ವಾರದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ.ಟಿ. ರವರ ಸ್ವಂತ ಹಣದಲ್ಲಿ ಮತ್ತು ಆಸಕ್ತ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆ ಉಳುವಿಗಾಗಿ ಮತ್ತು ಅಭಿವೃದ್ಧಿಗಾಗಿ ಸರ್ಕಾರಿ ಅಂಗನವಾಡಿ ಕಟ್ಟಡ ಸುಂದರಗೊಳಿಸಲು ಬಣ್ಣ ಹಚ್ಚುವ ಕಾರ್ಯಕ್ರಮ ಹಾಗೂ ಮಹಿಳಾ ಸಬಲೀಕರಣಗೊಳ್ಳುವ ಉದ್ದೇಶದಿಂದ ಮತ್ತು ಪರಿಸರ ಸಂರಕ್ಷಣೆ ಮಾಡಲು ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಹೆಣ್ಣು ಮಗು ಮತ್ತು ಕುಟುಂಬಸ್ಥರಿಂದ 20 ಸಸಿ ನೆಡುವ ಕಾರ್ಯಕ್ರಮ ಸ್ವಚ್ಛತೆ ಹಿತದೃಷ್ಟಿಯಿಂದ ಶಾಲಾ ಆವರಣದಲ್ಲಿ ಸ್ವಚ್ಛತೆಗೊಳಿಸುವುದು ಹಾಗೂ ಸಂಸ್ಕಾರ ಸಂಸ್ಕೃತಿ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಾಗು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು 22 ನೇ ವಾರದ ಶ್ರಮಧಾನ ಕಾರ್ಯಕ್ರಮಕ್ಕೆ ಆಸಕ್ತರು ಸ್ವ ಇಚ್ಛೆಯಿಂದ ಭಾಗವಹಿಸಿ ಶ್ರಮಧಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಪ್ಪ ನಾಯಕ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣವರ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಶಿವಬಸಪ್ಪ ಕರಡಿ ಕೃಷ್ಣಪ್ಪ ಪೂಜಾರ, ಸರಸ್ವತಿ ಅಮರೇಶ ಚಕ್ರಸಾಲಿ ಮತ್ತು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಎಸ್ಡಿಎಮ್ ಸಿ ಅಧ್ಯಕ್ಷ ಯಮನೂರಪ್ಪ ಗುಳದಳ್ಳಿ ,ಸದಸ್ಯರಾದ ಅಮರೇಶ ಮೇಟಿ,ಕೆಂಚಪ್ಪ ವೀರಾಪೂರ ಮತ್ತು ಸರ್ವ ಸದಸ್ಯರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷರು,ಅಂಗನವಾಡಿ. ಆಶಾ,ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಸಂಜೀವಿನಿ ಸ್ವ ಸಹಾಯ ಒಕ್ಕೂಟದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು
Comments are closed.