ಸಿಪಿಐಎಂಎಲ್ ಲಿಬರೇಷನ್‌ನಿಂದ ನಿವೃತ್ತಿ: ಭಾರಧ್ವಾಜ್
ಗಂಗಾವತಿ: ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಪಕ್ಷ ಹಾಗೂ ಎ.ಐ.ಸಿ.ಸಿ.ಟಿ.ಯು ಸಂಘಟನೆಯಿಂದ ಹೊರಬಂದಿದ್ದೇನೆ. ನಮ್ಮ ಹಳೆ ಸಂಘಟನೆಯಾದ ಕ್ರಾಂತಿ ಚಕ್ರ ಬಳಗ ಕಮ್ಯುನಿಸ್ಟ್ (ಎಂ.ಎಲ್) ವತಿಯಿಂದ ಹೋರಾಟಗಳನ್ನು ಮಾಡಲು ನಿರ್ಧರಿಸಿದ್ದೇನೆ. ಎಲ್ಲಾ ನನ್ನ ಸ್ನೇಹಿತರು, ಅಭಿಮಾನಿಗಳು ಸಹಕಾರ ನೀಡಬೇಕೆಂದು ಕೋರುತ್ತೇನೆ. ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವು ೨೦೦೩ ರಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಸೇರಬೇಕಾದರೆ ನಮ್ಮ ಪಕ್ಷವಾದ ಕ್ರಾಂತಿ ಚಕ್ರ ಬಳಗವನ್ನು ಸಿ.ಪಿ.ಐ.ಎಂ.ಎಲ್ ನವರೊಂದಿಗೆ ವಿಲೀನ ಮಾಡಿದ್ದೆವು. ಈಗ ಮೊದಲಿನಂತೆ ಪಕ್ಷದಲ್ಲಿ ವಾತಾವರಣ ಇಲ್ಲದ ಕಾರಣ ನಾವು ಹೊರಬಂದಿದ್ದೇವೆ. ಶೀಘ್ರದಲ್ಲೇ ಕ್ರಾಂತಿ ಚಕ್ರ ಬಳಗದ ಸಾಮಾನ್ಯ ಸಭೆ ಕರೆದು ಹೊಸ ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಲಿದ್ದೇವೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.