ಕುರುಬ ಸಮಾಜದ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಜೂನ್ 28 ಕೊನೆಯ ದಿನಾಂಕ
ಕೊಪ್ಪಳ. ಜೂನ್ 27- ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2022-23ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು
ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 2022-23 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ದ್ವಿತೀಯ ವರ್ಷದ ಪಿಯುಸಿ ವಾಣಿಜ್ಯ ,ಶಿಕ್ಷಣ, ಕಲಾ ವಿಭಾಗದಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ವಿಶೇಷವಾಗಿ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅರ್ಜಿ ಪ್ರತಿಯೊಂದಿಗೆ 1.ಅಂಕಪಟ್ಟಿ 2) ಜಾತಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ 3) ಎರಡು ಪಾಸ್ ಪೋರ್ಟ್ ಫೋಟೋ 4) ಆಧಾರ್ ಕಾರ್ಡ್ ಜೆರಾಕ್ಸ್ ದೊಂದಿಗೆ ಅರ್ಜಿಯು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್ ದಲ್ಲಿ ದೊರೆಯುತ್ತಿದ್ದು ಅಲ್ಲೇ ಭರ್ತಿ ಮಾಡಿ ಅರ್ಜಿಯನ್ನು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್-9611083605, ತಿಕೋಟಿಕರ್ ಪೆಟ್ರೋಲ್ ಬಂಕ್ ಹತ್ತಿರ ಸೆಂಟ್ರಲ್ ಬಸ್ ನಿಲ್ದಾಣ ಕೊಪ್ಪಳ ಇಲ್ಲಿಗೆ ಜೂನ್ 28 ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಹಾಲುಮತ ಮಹಾಸಭಾ ಕೊಪ್ಪಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ದ್ಯಾಮಣ್ಣ ಕರಿಗಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಲುಮತ ಮಹಾಸಭಾ, ಮುದ್ದಪ್ಪ ಗೊಂದಿಹೊಸಳ್ಳಿ ಬೇವಿನಹಳ್ಳಿ ತಾಲೂಕ ಅಧ್ಯಕ್ಷರು ಹಾಲುಮತ ಮಹಾಸಭಾ ಕೊಪ್ಪಳ ಇವರು ಇದ್ದರು .
ಹೆಚ್ಚಿನ ಮಾಹಿತಿಗಾಗಿ – ಹಾಲುಮತ ಮಹಾಸಭಾದ ತಾಲೂಕ ಗೌರವಾಧ್ಯಕ್ಷ ದ್ಯಾಮನಗೌಡ ಭೀಮನೂರು-9901741295 , ತಾಲೂಕು ಉಪಾಧ್ಯಕ್ಷರಾದ ಪ್ರಕಾಶ್ ಬಿಕನಳ್ಳಿ-9686742563,
ತಾಲೂಕು ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಗೊರವರ್ – 9035512375, ತಾಲೂಕ ಕಾರ್ಯಧ್ಯಕ್ಷ ಅನ್ನದಾನಿಸ್ವಾಮಿ ಚಿಕ್ಕಸಿಂದೊಗಿ -917022176178,
ತಾಲೂಕ ಘಟಕದ ಉಪಾಧ್ಯಕ್ಷ ಮಂಜುನಾಥ್ ಮ್ಯಾಗಳಮನಿ -9980486555, ಸಂಘಟನಾ ಕಾರ್ಯದರ್ಶಿ
ವಿನಾಯಕ ಏನ್ ಕುಷ್ಟಗಿ -6364174056 ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು….
Comments are closed.