ಅಕ್ಷರ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ
ಗಂಗಾವತಿ : ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ, ಯು ಕೆ ಜಿ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ಏರ್ಪಡಿಸಲಾಗಿತ್ತು.
ಈ ವೇಳೆ ಶಾಲೆಯ ಮುಖ್ಯ ಉಪಾಧ್ಯಾಯನಿ ಹಿಮಾರೆಡ್ಡಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ, ಚಿಕ್ಕ ಮಕ್ಕಳಿಗೆ ಇಂದು ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಏರ್ಪಡಿಸಿದ್ದೇವೆ, ಸ್ಪರ್ಧೆಯಲ್ಲಿ ಮಕ್ಕಳು ಸ್ವತಂತ್ರ ಹೋರಾಟಗಾರರು, ರಾಜ ಮಹಾರಾಜರ, ಕವಿ ಸಾಹಿತಿಗಳ ಮತ್ತು ವಿವಿದ ರೀತಿಯ ಉಡುಪುಗಳನ್ನು ಧರಿಸಿ ಉತ್ಸಾಹದಿಂದ ಭಾಗವಹಿಸಿದ್ದಾರೆ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತೇಜಸ್ಸು, ಸಹನಾ, ರೂಪ ಮೋಜಸ್ ಪಾಲ್, ಯಾಸ್ಮಿನ್, ಶಿಲ್ಪಾ ಶ್ವೇತ, ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Comments are closed.