ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡಿದ್ದ ಮದ್ಯ ನಾಶ

Get real time updates directly on you device, subscribe now.

ಕೊಪ್ಪಳ ವಲಯ ವ್ಯಾಪ್ತಿಯಲ್ಲಿ ದಾಖಲಾದ 23 ಅಬಕಾರಿ ಮೊಕದ್ದಮೆಗಳಲ್ಲಿ ವಶಪಡಿಸಿಕೊಳ್ಳಲಾದ ಒಟ್ಟು 349.380 ಲೀ. ಮದ್ಯ, 51.060 ಲೀ. ಬಿಯರ್ ಮತ್ತು 167.250 ಲೀಟರ್ ಗೋವಾ ಮದ್ಯವನ್ನು ನಿರ್ಜನ ಪ್ರದೇಶದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಗುರುವಾರದಂದು ನಾಶಪಡಿಸಲಾಯಿತು.

ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ಭಾರತಿ, ಕೊಪ್ಪಳ ವಲಯ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ, ಅ.ಉ.ನಿ-1 ಮಂಜುನಾಥ ಬಂಡಿ, ಅ.ಉ.ನಿ-2 ಫಸಿಯುದ್ದೀನ್ ಅನ್ಸಾರಿ ಹಾಗೂ ಕೊಪ್ಪಳ ವಲಯ ಕಾನ್ಸ್ಟೇಬಲ್‌ರವರು ಮತ್ತು ಹೆಡ್ ಕಾನ್ಸ್ಟೇಬಲ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!