ಅತ್ಯಾಧುನಿಕ ಆಯುಷ್ ಪದ್ಧತಿಯ 50 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲು ಒತ್ತಾಯ
ಕೊಪ್ಪಳ ನಗರಕ್ಕೆ ಜಿಲ್ಲಾ ಅತ್ಯಾಧುನಿಕ ಆಯುಷ್ ಪದ್ಧತಿಯ 50 ಹಾಸಿಗೆಗಳ ಆಸ್ಪತ್ರೆ ಹಾಗೂ ಕುಕನೂರು ಪಟ್ಟಣದಲ್ಲಿ 50 ಹಾಸಿಗೆಗಳ ಸುಸಜ್ಜಿತ ಆಯುಷ್ ಪದ್ದತಿಯ ಆಸ್ಪತ್ರೆ ಪ್ರಾರಂಭಿಸಲು ಒತ್ತಾಯ.
ಕೊಪ್ಪಳ : ನಗರಕ್ಕೆ ಜಿಲ್ಲಾ ಅತ್ಯಾಧುನಿಕ ಆಯುಷ್ ಪದ್ಧತಿಯ ಪ್ರತ್ಯೇಕ 50 ಹಾಸಿಗೆಗಳ ಆಸ್ಪತ್ರೆ ಹಾಗೂ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ 50 ಹಾಸಿಗೆಗಳ ಸುಸಜ್ಜಿತ ಆಯುಷ್ ಪದ್ದತಿಯ ಆಸ್ಪತ್ರೆ ಪ್ರಾರಂಭಿಸಲು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿ
ಒತ್ತಾಯಿಸಿದರು.
ಮನವಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ಜನರು ಚಿಕಿತ್ಸೆಗಾಗಿ ಪರದಾಡುವಂತಹ ಪರಿಸ್ಥಿತಿ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಮೂಲ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ.ಯೋಗ.ಪ್ರಕೃತಿ.
ಯುನಾನಿ. ಹೋಮಿಯೋಪತಿ ಚಿಕಿತ್ಸಾ ಪದ್ದತಿ ದಂತಹ ಅಡ್ಡ ಪರಿಣಾಮಗಳ ಇಲ್ಲದ ಹಾಗೂ ಪುರಾತನ ಕಾಲದಿಂದಲೂ ಅಡುಗೆ ಮನೆಯಲ್ಲಿ ಲಭ್ಯವಿರುವ ಮನೆ ಮದ್ದಿನಿಂದ ಆರಂಭವಾಗುವ ಆಯುರ್ವೇದ ಉತ್ತಮ ಔಷಧಿಯ ಪದ್ಧತಿಯಾಗಿದೆ. ಕೋವಿಡ್ 19 ಸಂದರ್ಭದಲ್ಲಿ ಇಡೀ ಭಾರತದಲ್ಲಿ ಬಹುತೇಕ ಜನರು ಅಡುಗೆ ಮನೆಯಲ್ಲಿ ಲಭ್ಯವಿರುವ ಏಲಕ್ಕಿ.ಚೆಕ್ಕೆ.
ಲವಂಗ.ಕರಿಮೆಣಸು.ಅಲ್ಲ. ಶುಂಠಿ. ಅರಿಶಿಣ. ಕರಿ ಬೆಲ್ಲ ಮುಂತಾದ ಪದಾರ್ಥಗಳನ್ನು ಬಳಸಿ ಕಷಾಯ ಮಾಡಿ ಕುಡಿಯುವ ಮೂಲಕ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಅಪಾಯಕಾರಿ ರೋಗಗಳಿಂದ ಪಾರಾಗಿದ್ದಾರೆ.
ಆಧುನಿಕ ವಿಧಾನಗಳನ್ನು ಒಳಗೊಂಡ ಚಿಕಿತ್ಸೆ ನೀಡುವ ಜಿಲ್ಲಾ ಅತ್ಯಾಧುನಿಕ ಆಯುಷ್ ಪದ್ದತಿಯ ಆಸ್ಪತ್ರೆ ಅಗತ್ಯವಿದ್ದು. ಜಿಲ್ಲೆಯ ತಾಲೂಕುಗಳಾದ ಕೊಪ್ಪಳ.ಕುಕನೂರ.ಯಲಬುರ್ಗಾ.ಕುಷ್ಟಗಿ. ಗಂಗಾವತಿ.ಕಾರಟಗಿ.ಕನಕಗಿರಿ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 14 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ”ಅತ್ಯಧುನಿಕ ಆಯುಷ್ ಪದ್ದತಿಯ ಪ್ರತ್ಯೇಕ 50 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ” ತುಂಬಾ ಅಗತ್ಯವಿದೆ. ಬಹುತೇಕ ಜನ ಮೂಲ ಚಿಕಿತ್ಸಾ ಪದ್ಧತಿಗಳಾದ ಗಿಡಮೂಲಿಕೆ.ವನ ಔಷಧಿ.ಪ್ರಕೃತಿ.ಯುನಾನಿ. ಹೋಮಿಯೋಪತಿ ಚಿಕಿತ್ಸಾ ಪದ್ದತಿ ಪ್ರಾಚೀನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ.ಕೆಲ ದಶಕಗಳಿಂದ ಆಯುಷ್ ಪದ್ದತಿಯಲ್ಲಿ ಅನುಭವಸ್ಥರ ಕೊರತೆಯಿಂದ ಅನಿವಾರ್ಯವಾಗಿ ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು. ಅದರಿಂದ ಆರೋಗ್ಯದಲ್ಲಿ ಅಡ್ಡ ಪರಿಣಾಮಗಳ ಅರಿವಿರುವವರು ಮೂಲ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ದಂತಹ ಗಿಡಮೂಲಿಕೆ.ವನ.ಪ್ರಕೃತಿ.ಯುನಾನಿ.ಹೋಮಿಯೋಪತಿ ಚಿಕಿತ್ಸಾ ಪದ್ದತಿಗೆ ಮೊರೆ ಹೋಗುತ್ತಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಆಲೋಪತಿ ಔಷಧ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆಯಾ ಔಷಧಿ ಪದ್ಧತಿಗಳನ್ನು ಅನುಸರಿಸುವ ಜನರ ಭಾವನೆಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುವದು ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿನ ಹಳೆ ಜಿಲ್ಲಾ ಆಸ್ಪತ್ರೆಯ ನಾಲ್ಕು ಎಕರೆ ಜಾಗೆಯಲ್ಲಿ ಜಿಲ್ಲಾ ಅತ್ಯಾಧುನಿಕ ಆಯುಷ್ ಪದ್ದತಿಯ ಪ್ರತ್ಯೇಕ ಐವತ್ತು ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡುವುದು ಹಾಗೂ ಕುಕನೂರ ತಾಲೂಕಾಗಿ ಐದಾರು ವರ್ಷಗಳಾದರೂ ಆಯುಷ್ ಪದ್ದತಿಯ ಒಂದೇ ಒಂದು ಆಸ್ಪತ್ರೆ ಇಲ್ಲದ್ದರಿಂದ ತಕ್ಷಣ ಕುಕನೂರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಯುಷ್ ಪದ್ಧತಿಯ ಐವತ್ತು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಜನರ ಆರೋಗ್ಯ ಮಟ್ಟ ಸುಧಾರಿಸಲು ಇನ್ನಷ್ಟು ಜನರಿಗೆ ಪರಿಚಯಿಸಿ. ಆರೋಗ್ಯ ಸುರಕ್ಷಾ ವಿಧಾನಗಳನ್ನು ಅನುಸರಿಸಲು ಆಯುಷ್ ಇಲಾಖೆಯನ್ನು ಸಕ್ರಿಯಗೊಳಿಸಿದರೆ ಜನರ ಜೀವನ ಪದ್ದತಿ ಬದಲಾಯಿಸಿ ಆರೋಗ್ಯ ಸುಧಾರಣೆಯಾಗಿ ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ತಾವು ಹೆಚ್ಚಿನ ಕಾಳಜಿ ವಹಿಸಿ ನಮ್ಮ ಕೊಪ್ಪಳ ಜಿಲ್ಲೆಗೆ ಆಯುಷ್ ವೈದ್ಯ ಪದ್ಧತಿಯ ಅತ್ಯಾಧುನಿಕ ಆಸ್ಪತ್ರೆಗಳನ್ನು ಮಂಜೂರು ಮಾಡಿ ತೀವ್ರದಲ್ಲಿ ಪ್ರಾರಂಭಿಸಲು ಕೋರುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ.ರಿ(ಎ.ಐ.ಟಿ.ಯು.ಸಿ.
ಸಂಯೋಜಿತ)ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ ಕೋರಿದ್ದಾರೆ.
Comments are closed.