ಇಂಗ್ಲಿಷ ವಿಶೇಷ ಉಪನ್ಯಾಸ              

Get real time updates directly on you device, subscribe now.

         ಕೊಪ್ಪಳ :   ಕೊಪ್ಪಳ ಜಿಲ್ಲೆಯ ತಾವರಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಕ್ಯೂ ಎ ಸಿ ಅಡಿಯಲ್ಲಿ ‘ಸ್ಪೋಕನ್ ಇಂಗ್ಲೀಷ್’ ವಿಷಯದ  ಕುರಿತು ವಿಶೇಷ ಕಾರ್ಯಕ್ರಮ ಜರುಗಿತು. ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್     ಉಪನ್ಯಾಸಕರಾದ  ಶಿವಬಸಪ್ಪ ಮಸ್ಕಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಇಂಗ್ಲಿಷ್ ಕಲಿಕೆಯು ಕಷ್ಟ ಅಲ್ಲ. ಸತತ ಪ್ರಯತ್ನ ಹಾಗೂ ಅಭಿರುಚಿ ವಿದ್ಯಾರ್ಥಿಗಳಿಗೆ ಇರಬೇಕು.  ಇಂಗ್ಲಿಷ್ ಕಲಿಕೆ ಜಾಗತಿಕ ಮಟ್ಟಕ್ಕೆ  ಬೆಳೆಯುವಲ್ಲಿ ಸಹಾಯ ಮಾಡುತ್ತದೆಂದು ಉಪನ್ಯಾಸವನ್ನು ನೀಡಿದರು.  ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ  ಅರುಣ ಕುಮಾರಿ .ಟಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ   ಉಮಾಕಾಂತ್ ಅವರೆಡ್ಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ  ಐ ಕ್ಯೂ ಎ ಸಿ ಸಂಚಾಲಕರಾದ  ಡಾ.ಲವಕುಮಾರ, ಕನ್ನಡ ವಿಭಾಗದ ಮುಖ್ಯಸ್ಥ ಲಾಲಸಾಬ್ ಹಾಗೂ ಬಿ.ಎ ಹಾಗ ಬಿ.ಕಾಂ ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!