ಗ್ರಾಮೀಣರಲ್ಲಿ ಕಾನೂನಿನ ಅರಿವಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ : ರವಿಚಂದ್ರ ಆರ್ ಮಾಟಲದಿನ್ನಿ
ಯಲಬುರ್ಗಾ : ಗ್ರಾಮೀಣ ಭಾಗದ ಕೆಲವು ಜನರಲ್ಲಿ ಕಾನೂನಿನ ಅರಿವಿನ ಕೊರತೆ ಕಾರಣಕ್ಕಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಅವರಿಗೆ ಸೂಕ್ತ ಕಾನೂನಿನ ಅರಿವು ಮತ್ತು ಸಲಹೆ ನೀಡಲು ಕಾನೂನಿನ ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರಾದ ರವಿಚಂದ್ರ ಆರ್. ಮಾಟಲದಿನ್ನಿ ಉಪನ್ಯಾಸ ನೀಡಿದರು.
ಅವರು ಇತ್ತೀಚಿಗೆ ತಾಲ್ಲೂಕಿನ ಮಾಟಲದಿನ್ನಿ ಪ್ರೌಢ ಶಾಲೆಯಲ್ಲಿ ನೆಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪೋಕ್ಸೊ ಕಾಯ್ದೆ 2012, ಎಪ್.ಐ.ಆರ್. ಕುರಿತ ಮಾಹಿತಿ, ಸಿ.ವಿಲ್. ಕ್ರಿಮಿನಲ್, ಕಾಯ್ದೆಗಳ ವಿವರಣೆ, ಮಕ್ಕಳ ಹಕ್ಕುಗಳ, ಬಾಲ್ಯ ವಿವಾಹ ನಿಷೇದ ಕಾಯ್ದೆ 2006, ವರದಕ್ಷಿಣೆ ನಿಷೇದ ಕಾಯ್ದೆ 1961, ವಿವಿಧ ರೀತಿಯ ಜಾಮೀನುಗಳು ಹಾಗೂ ಪ್ರಮುಖ ಐ.ಪಿ.ಸಿ. ಸೆಕ್ಸನ್ ಗಳ ವಿವರಣೆ, ಇತರೆ ಕಾನೂನುಗಳ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಿ.ಬಿ. ಉಪ್ಪಿನ್, ಇಂಗ್ಲಿಷ್ ಶಿಕ್ಷಕರಾದ ವಿರೇಶಪ್ಪ ಕುಂಬಾರ್, ಮತ್ತೊರ್ವ ಶಿಕ್ಷಕರಾದ ಮರೀಗೌಡ್ರು, ಹಾಗೂ ವಿರೂಪಾಕ್ಷಪ್ಪ ಕುರಿ ಶಿಕ್ಷಕರು, ದೈಹಿಕ ಶಿಕ್ಷಕರಾದ ಚಂದ್ರಶೇಖರ ರಾಠೋಡ್, ಹಾಗೂ ರಮೇಶ್ ಆವೊಜಿ ಶಿಕ್ಷಕರು. ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹನುಮಂತಪ್ಪ ಮರಟಗೇರಿ, ಸಮಾಜ ಸೇವಕರು ಹಾಗೂ ಚಿಂತಕರಾದ ಗಿರಿರಾಜ್ ಕೋರಿ, ಇಬ್ಬರು ಭಾವಿ ವಕೀಲರಾದ ಫಕೀರಪ್ಪ ಮೆಳ್ಳಿಕೇರಿ, ಪ್ರಕಾಶ ಹಲಿಗೇರಿ, ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Comments are closed.