ಇಂದು ಕರವೆ ನೂತನ ಪದಾಧಿಕಾರಿಗಳ ಪದಗ್ರಹಣ: ಆಂಜನೇಯ್ಯ
ಗಂಗಾವತಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಹಾಗು ತಾಲೂಕಾ ನೂತನ ಪದಾಧಿಕಾರಿಗಳ ಪದಗ್ರಹಣವು ಫೆಬ್ರವರಿ ೧೫ ಗುರುವಾರ ಬೆಳಗ್ಗೆ ೧೧.೦೦ ಗಂಟೆಗೆ ನಗರದ ಸರೋಜಮ್ಮ ಕಲ್ಯಾಣ ಮಂಟದಲ್ಲಿ ರಾಜ್ಯಧ್ಯಕ್ಷ ಕೃಷ್ಣಗೌಡ್ರರ ಸಮ್ಮುಖದಲ್ಲಿ ಜರುಗಲಿದೆ ಎಂದು ಜಿಲ್ಲಾಧ್ಯಕ್ಷ ಅಂಜನೇಯ್ಯ ಈಡಿಗೇರ ತಿಳಿಸಿದ್ದಾರೆ
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಕನ್ನಡ ನೆಲ ಜಲ ರಕ್ಷಣೆಗಾಗಿ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜನರ ಸುಖದುಖಃಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ತಾಲೂಕಾ ಅಧ್ಯಕ್ಷ ಹನುಮೇಶ್ ಗಾಂಧಿನಗರ ಮಾತನಾಡಿ, ಈ ವರೆಗಿನ ಸಂಘಟನೆಗಳು ಕೇವಲ ಸ್ವಾರ್ಥಕ್ಕಾಗಿ ದುಡಿಯತ್ತಿವೆ. ಕರವೆ ಸ್ವಾಭಿಮಾನಿ ಬಣ ಬಡವರ, ಹಿಂದುಳಿದವರ, ದೀನ ದಲಿತರ ಸಂಕಷ್ಟಗಳಿಗೆ ಸ್ಪಂದಿಸುವುದಲ್ಲದೆ, ನಾಡ ತಾಯಿಗೆ ದ್ರೋಹವಾದರೆ ಕ್ಷೆಮಿಸುವುದಿಲ್ಲ. ಆದಷ್ಟು ನಮ್ಮ ಸ್ವಂತ ಹಣದಲ್ಲೇ ಕಾರ್ಯಕ್ರಮ ಇತ್ಯಾದಿ ಹಮ್ಮಿಕೊಳ್ಳುತ್ತೇವೆ ಎಂದರು.
ಕೊಪ್ಪಳ ಭಾಗದಲ್ಲಿ ಬಹುತೇಕ ಕಾರ್ಖಾನೆಗಳಲ್ಲಿ ಹೊರ ರಾಜ್ಯದ, ಜಿಲ್ಲೆಯ ಜನರಿಗೆ ಹೆಚ್ಚು ಉದ್ಯೋಗ ಕೊಡುತ್ತಿದ್ದು, ಈ ನಿಟ್ಟಿನಲ್ಲಿ ಕುಲಂಕುಷವಾಗಿ ಪರಿಶೀಲಿಸಿ ದೊಡ್ಡ ಮಟ್ಟದ ಹೋರಾಟದ ಮೂಲಕ ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡುತ್ತೇವೆ, ಫೆ.೧೫ರಂದು ಬೆಳಗ್ಗೆ ಎಂಟು ಗಂಟೆಗೆ ಕೃಷ್ಣೇಗೌಡ್ರ ಭವ್ಯ ಮೆರವಣೆಗೆಯೊಂದಿಗೆ ಶ್ರೀಕೃಷ್ಣದೇವರಾಯ ವೃತ್ತದಿಂದ ತಾತನ ಮಠದವರೆಗೆ, ಪ್ರಮುಖ ವೃತ್ತಗಳಿಗೆ ಮಾಲಾರ್ಪಣೆ ಮಾಡುತ್ತಾ ಸರೋಜಮ್ಮ ಕಲ್ಯಾಣ ಮಂಟಪದವರೆಗೆ ಬೈಕ್ ರ್‍ಯಾಲಿ ನಡೆಸಲಾಗುವುದು. ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಸುಮಾರು ೧೫೦ರಿಂದ ೨೦೦ ಬೈಕ್ ರ್‍ಯಾಲಿಯಲ್ಲಿ ಭಾಗಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಶರಣಬಸವ ಹಂಪನಾಳ, ಚಿರಂಜೀವಿ ನಾಯಕ, ಹುಲಿಗೆಪ್ಪ ಸುಣಗಾರ ಇದ್ದರು.
Comments are closed.