ಸರಕಾರ ವಿಶ್ವಕರ್ಮ ಜನಾಂಗದವರಿಗೆ ಪ್ರತ್ಯೇಕ ನಿವೇಶನ ನೀಡಲಿ- ಜಯರಾಂ ಪೆ ಪತ್ತಾರ

Get real time updates directly on you device, subscribe now.

2A ಸಾಕು ST ಬೇಕು ಕೊಪ್ಪಳದಲ್ಲಿ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ

ಕೊಪ್ಪಳ, ಫೆ 15: ನಗರದ ಜಿಲ್ಲಾ ಆಡಳಿತ ಭವನದ ಬಳಿ, ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಜಯರಾಂ ಪೆ ಪತ್ತಾರ, ಭಾಗವಹಿಸಿ ಮಾತನಾಡಿ, ಬೇರೆಯವರಿಗೋಸ್ಕರವೇ ಬದುಕು ಮುಡುಪಾಗಿಟ್ಟು ದುಡಿಯುವ ಶ್ರಮಜೀವಿ ಸಮುದಾಯ ವಿಶ್ವಕರ್ಮ. ನಮ್ಮ ಸಮುದಾಯ ವಿಶ್ವಕರ್ಮ ಜಾತಿಯವರ, ಅಭಿಯಂತರರ, ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು “ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ” ಮತ್ತು ಬ್ರಹ್ಮನ್ ಹಾಗೂ ಪುರುಷರ ಮೂಲ ಪರಿಕಲ್ಪನೆ ಎಂದು ನಂಬಲಾಗಿದೆ. ಇಂಥ ಸಮಾಜ ಇಂದು ಶೈಕ್ಷಣಿಕ ಆರ್ಥಿಕ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದೆ. ಹೀಗಾಗಿ ಸರ್ಕಾರ ಕೂಡಲೇ 2A ಸಾಕು ST ಬೇಕು ಎಂದು ಹೋರಾಟವನ್ನ ಮಾಡುತ್ತಿದ್ದೇವೆ ಸರ್ಕಾರ ಅಧ್ಯಯನದ ವರದಿಯನ್ನು ತೆಗೆದುಕೊಂಡು ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ವಿಶ್ವಕರ್ಮ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ, ಕೊಪ್ಪಳ ನಗರದಲ್ಲಿ ಮೌನೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ಸರ್ಕಾರದಿಂದ ಜಾಗ ಹಾಗೂ ಒಂದು ಕೋಟಿ ಅನುದಾನ ಬಿಡುಗಡೆ, ದಂತೆ 15 ಬೇಡಿಕೆಗಳ ಮನವಿಯನ್ನ ಸರ್ಕಾರ ಪೂರೈಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ಸದಸ್ಯ ಪ್ರಭಾಕರ್ ಬಡಿಗೇರ್, ಚಂದ್ರಶೇಖರ್ ಬಡಿಗೇರ್, ವೀರಭದ್ರಪ್ಪ ಬಡಿಗೇರ್, ಮೌನೇಶ್ ಮಾದಿನೂರ್,ಎಚ್ಚರೇಶ ಹೊಸಮನಿ, ಪ್ರಶಾಂತ್ ವಿಶ್ವ ಬ್ರಾಹ್ಮಣ, ಮೌನೇಶ್ ಬಡಿಗೇರ್ ಕೊಪ್ಪಳ, ವೀರೇಶ್ ಕಮ್ಮಾರ್, ಕೃಷ್ಣ ಬಡಿಗೇರ್, ಮಹೇಶ್ ಬೇವಿನಹಳ್ಳಿ, ಬಸವರಾಜ್ ಇರಕಲ್ಲಗಡ, ಈರಣ್ಣ ಕಲ್ಲತಾವರಗೇರ, ವಿರುಪಾಕ್ಷಿ ಹಿರೇಬೊಮ್ಮನಾಳ, ಶಂಕರ್ ಗುನ್ನಾಳ, ಜಗದೇವಪ್ಪ ಹಿರೆವಂಕಲಕುಂಟಿ, ವಿಶ್ವನಾಥ್ ಲಿಂಗನಬಂಡಿ, ಶರಣಪ್ಪ ಕಾಮನೂರ್, ಸೇರಿದಂತೆ ಇತರರು ಇದ್ದರು.
ಪ್ರತಿಭಟನೆಯ ಮುಖ್ಯ ಬೇಡಿಕೆಗಳು..
೧) ಕೊಪ್ಪಳ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದು
೨) ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಬಡವರಿಗೆ ಜಿಲ್ಲಾ ಕೈಗಾರಿಕೆ ಇಲಾಖೆ ವತಿಯಿಂದ ನಿವೇಶನ ಬಿಡುಗಡೆ ಮಾಡುವುದು
೩) ಬಡಿಗಿತನ ಸೇರಿದಂತೆ ಪಂಚ ಕಸುಬು ಮಾಡುವ ವಿಶ್ವಕರ್ಮ ಜನಾಂಗದವರಿಗೆ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆ ಇಲಾಖೆ ವತಿಯಿಂದ ಆರ್ಥಿಕ ಸಹಾಯಧನ ನೀಡುವುದು
೪) ಕೊಪ್ಪಳ ನಗರದಲ್ಲಿ ವಿಶ್ವಕರ್ಮ ವಿದ್ಯಾರ್ಥಿ ನಿಲಯಕ್ಕೆ ಅನುದಾನ ನೀಡುವುದು
೫) ವಿಶ್ವಕರ್ಮ ಸಮಾಜದವರಿಗೆ ನೀಡುವ ನಿವೇಶನಕ್ಕೆ ೩,೦೦,೦೦೦ ಸರ್ಕಾರದ ಅನುದಾನ ಬಿಡುಗಡೆ

೬) ಕಾಂತರಾಜ್ ಆಯೋಗದ ವರದಿ ಜಾರಿಗೆ ಒತ್ತಾಯ
೭) ಕೊಪ್ಪಳ ನಗರದಲ್ಲಿ ಸರ್ಕಾರದಿಂದ ಮೌನೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ಭೂಮಿ ಅಥವಾ ಜಾಗ ನೀಡುವ ಕುರಿತು
೮) ಕೊಪ್ಪಳ ಜಿಲ್ಲೆಯಲ್ಲಿರುವ ಧಾರ್ಮಿಕ ದತ್ತು ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ವಿಶ್ವಕರ್ಮ ಜನಾಂಗದ ಓರ್ವ ವ್ಯಕ್ತಿಯನ್ನು ದೇವಸ್ಥಾನದ ಕಮಿಟಿಯಲ್ಲಿ ಸದಸ್ಯರನ್ನಾಗಿ ಮಾಡಬೇಕು
೯) ಕೊಪ್ಪಳ ನಗರದಲ್ಲಿ ಜಗದ್ಗುರು ಮೌನೇಶ್ವರರ ದೇವಸ್ಥಾನ ನಿರ್ಮಾಣ ಮಾಡಲು ಸರ್ಕಾರದಿಂದ
೧ ಕೋಟಿ ಅನುದಾನ ಬಿಡುಗಡೆ
೧೦) ಕೊಪ್ಪಳ ನಗರದಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ಜಿಲ್ಲಾ ಆಡಳಿತ ಭವನದವರೆಗಿನ ರಸ್ತೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತ ಮಾಡಲು ನಗರಸಭೆ ವತಿಯಿಂದ ಅನುಮತಿ ಕೊಡಿಸುವ ಕುರಿತು
೧೧) ಕಲ್ಯಾಣ ಕರ್ನಾಟಕ ಭಾಗದ ವಿಶ್ವಕರ್ಮ ಸಮಾಜದ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ
೧೨) ವಿಶ್ವಕರ್ಮ ಜನಾಂಗದವರಿಗೆ ಎರಡು ಕೋಟಿ ವೆಚ್ಚದಲ್ಲಿ ಕೈಗಾರಿಕಾ ಘಟಕ ಸ್ಥಾಪನೆ
೧೩) ವಿಶ್ವಕರ್ಮ ಜನಾಂಗದವರಿಗೆ ಜಿಲ್ಲಾ ಕೈಗಾರಿಕೆ ಇಲಾಖೆಯಿಂದ ವಿತರಿಸುತ್ತಿರುವ ಸಾಮಗ್ರಿಗಳ ಬದಲಿಗೆ ಕನಿಷ್ಠ ೨ ಲಕ್ಷ ಅನುದಾನ ಬಿಡುಗಡೆ
೧೪) ವಿಶ್ವಕರ್ಮ ಜನಾಂಗದ ಪತ್ರಕರ್ತರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಸಹಾಯಧನ ನೀಡುವ ಬಗ್ಗೆ
೧೫) ವಿಶ್ವಕರ್ಮ ಸಮಾಜದ ಕರಕುಶಲದಲ್ಲಿ ತೊಡಗಿರುವ ಪಂಚ ಕಸಬುಗಳಲ್ಲಿ ತೊಡಗಿರುವ ಕುಶಕಲಕರ್ಮಿಗಳಿಗೆ ಕಾರ್ಮಿಕ ಇಲಾಖೆ ವ್ಯಾಪ್ತಿಯ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು
೧೬) ವಿಶ್ವಕರ್ಮ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆಗೆ ಒತ್ತಾಯ, ಕುಲಶಾಸ್ತ್ರೀಯ ಅಧ್ಯಯನದ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ ಮಾಡುವಂತೆ ಒತ್ತಾಯ

Get real time updates directly on you device, subscribe now.

Comments are closed.

error: Content is protected !!