ವಿದ್ಯಾರ್ಥಿಗಳಿಂದಲೇ ಕಲಿಯುವದು ಶಿಕ್ಷಕನಾದವನಿಗೆ ಬಹಳ ಇದೆ : ಮಾಗಳದ

Get real time updates directly on you device, subscribe now.


ಕೊಪ್ಪಳ : ಪ್ರತಿ ಶಿಕ್ಷಕ ಒಬ್ಬ ವಿದ್ಯಾರ್ಥಿಯೂ ಹೌದು, ಆತ ಕಲಿಸುವದರೊಂದಿಗೆ ಮತ್ತೆ ಮತ್ತೆ ಕಲಿಯುತ್ತಾನೆ ಹಾಗೂ ಕಲಿಯಬೇಕು, ವಿದ್ಯಾರ್ಥಿಗಳಿಂದಲೇ ಶಿಕ್ಷಕ ಕಲಿಯುವದು ಬಹಳ ಇದೆ ಎಂದು ನಿವೃತ್ತ ಶಿಕ್ಷಕ ಟಿ. ವಿ, ಮಾಗಳದ ಹೇಳಿದರು.
ಅವರು ನಗರದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯ ೧೯೮೨ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಅಂದು ತಾವು ಶಿಕ್ಷಕರಾಗಿ ಬಂದ ವೇಳೆಗೆ ತಮ್ಮ ಜೊತೆಗೆ ಈಗ ವೇದಿಕೆ ಹಂಚಿಕೊಂಡ ಶಿಕ್ಷಕರಾಗಿದ್ದವರು ಹಾಗಾಗಿ ಅವರನ್ನು ನನ್ನ ಸಹ ಶಿಕ್ಷಕರು ಅನ್ನದೇ ಅವರೂ ನನಗೆ ಶಿಕ್ಷಕರೇ ಎಂದು ಭಾವಿಸುತ್ತೇನೆ. ಇಲ್ಲಿ ಗುರು ಶಿಷ್ಯರ ಬಾಂಧವ್ಯವೇನಿದೆ ಅದು ನಿಜವಾಗಲೂ ಮನಸ್ಸಿಗೆ ಬಹಳ ಖುಷಿ ಕೊಡುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗೊಮ್ಮೆ ಒಂದೊಂದು ವರ್ಷ ಆಯುಷ್ಯ ರುದ್ದಿಸುತ್ತದೆ. ಗವಿಮಠದ ವಾತಾವರಣವೂ ಸಹ ಹಾಗೆ ಇದೆ, ಇಲ್ಲಿ ಆ ಸಂಸ್ಕಾರ ಮೇಳೈಸಿದೆ. ಗವಿಮಠದ ಶೈಕ್ಷಣಿಕ ಕೊಡುಗೆಯನ್ನು ರಾಜ್ಯದ ಶಿಕ್ಷಣದ ಇತಿಹಾಸದಲ್ಲಿ ದಾಖಲಾಗುತ್ತದೆ ಎಂದರು.
ಮಕ್ಕಳು ಮಕ್ಕಳಾಗೇ ಇರಬೇಕು, ಅವರು ಹಿರಿಯರಾಗಲೇಬಾರದು ಇವತ್ತು ಅಂದಿನ ಮಕ್ಕಳು ಬಂದಿದ್ದೀರಿ ಅಷ್ಟೇ ಗಂಭೀರವಾಗಿ ಕುಳಿತು ಒಂದೂವರೆ ಗಂಟೆ ಸೈಲಾಂಟಿಗೆ ಭಾಷಣ ಕೇಳುತ್ತಿರುವದನ್ನು ನೋಡಿ ಮನಸ್ಸು ಉಕ್ಕಿ ಬರುತ್ತಿದೆ, ಆದರೆ ಗುರುವಾಗಿಯೂ ಭಯ ಆಗುತ್ತಿದೆ ಎಂದು ಹಾಸ್ಯ ಮಾಡಿದರು.
ಇನ್ನು ಶಿಕ್ಷಕರಿಗೆ ಹೇಳುವದಾದರೆ ಪ್ರತಿ ಶಿಕ್ಷಕ ಶಿಕ್ಷಕಿಯೂ ಸಹ ಮೊದಲು ತಾಯಿಯಾಗಬೇಕು, ಮಕ್ಕಳನ್ನು ಪ್ರೀತಿಸಬೇಕು, ಓದಿ ಓದಿ ಕಲಿಸಬೇಕು, ಟೀಚರ್ ಆಗುವದು ಎಂದರೆ ಅದೇ ಆಗಿದೆ, ಕಲಿಸುವದನ್ನು ಕಲಿಯಬೇಕು ಕಲಿತು ಕಲಿಸಬೇಕು. ಅದನ್ನೇ ಮಕ್ಕಳು ಜೀವನದ ಕೊನೆವರೆಗೂ ನೆನಪು ಇಟ್ಟುಕೊಳ್ಳುತ್ತಾರೆ. ಶಿಕ್ಷಕ ವೃತ್ತಿಯನ್ನು ಹೊರತುಪಡಿಸಿ ಇನ್ಯಾವುದೂ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ೧೯೮೨ರ ವಿದ್ಯಾರ್ಥಿ ಮತ್ತು ಪ್ರಸ್ತುತ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಮಲ್ಲೇಶಪ್ಪ ಹೊರಪೇಟೆ ಅವರು ವಹಿಸಿಕೊಂಡು ಮಾತನಾಡಿದರು. ಇವತ್ತು ಇಲ್ಲಿ ನಿಂತು ಮಾತನಾಡುತ್ತಿರುವದೂ ಸೇರಿದಂತೆ ತಮ್ಮ ಪ್ರಗತಿಗೆ ದಾರಿದೀಪವಾಗಿದ್ದು ಶಿಕ್ಷಕರು, ಇಂದಿನ ಶಿಕ್ಷಕರಲ್ಲಿ ತಾವು ೩೦ ವರ್ಷ ಶಿಕ್ಷಣ ಇಲಾಖೆಯಲ್ಲಿದ್ದುಕೊಂಡು ತಮ್ಮ ಗುರುಗಳಂತ ಶಿಕ್ಷಕರನ್ನು ಹುಡುಕಿದರೂ ಸಿಗಲಿಲ್ಲ ಎಂಬುದು ಸೋಜಿಗವಾದರೂ ಸತ್ಯ, ಗುರು ಎನ್ನುವದಕ್ಕೆ ಅಂದಿನ ಶಿಕ್ಷಕರ ಶ್ರಮ, ಪ್ರೀತಿ, ಶ್ರದ್ಧೆ ಮತ್ತು ಬದುಕು ಅತ್ಯಂತ ಅದರ್ಶವಾಗಿದ್ದು ಬಡತನದಲ್ಲೂ ಸಾಧನೆ ಮಡಲು ಸಾಧ್ಯವಾಯಿತು ಎಂದರು. ೪೨ ವರ್ಷಗಳ ನಂತರ ಇಂತಹ ಕಾರ್ಯಕ್ರಮ ಯೋಜನೆಗೊಂಡಿದ್ದು ಅದಕ್ಕಾಗಿ ಶ್ರಮಿಸಿದ ಗೆಳೆಯರಿಗೂ ತುಂಬಾ ಆಭಾರಿಯಗಿದ್ದೇನೆ ಎಂದರು.
ನಿವೃತ್ತ ಶಿಕ್ಷಕರಾದ ಬಿ.ವಿ.ರಾಮರಡ್ಡಿ, ಪಿ.ಡಿ.ಬಡಿಗೇರ, ವಿ.ಕೆ. ಜಾಗಟಗೇರಿ, ಎಸ್. ಸಿ. ಹಿರೇಮಠ, ಕೆ. ಆರ್. ಮಡಿವಾಳರ, ಪಿ. ವಿ. ಹಿರೇಮಠ, ಟಿ.ವಿ. ಮಾಗಳದ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮತ್ತು ನಿರೂಪಣೆಯನ್ನು ಅಂದಾನಪ್ಪ ಬೆಣಕಲ್ ನೆರವೇರಿಸಿದರು. ಚೈತ್ರಾ ಸಂಗಡಿಗರು ಪ್ರಾರ್ಥಿಸಿದರು, ಸತ್ಯನಾರಾಯಣ ಕುಲಕರ್ಣಿ ಸ್ವಾಗತಿಸಿದರು. ಮನೋಜಕುಮಾರ್ ಜೈನ್ ವಂದಿಸಿದರು. ಇದೇ ವೇಳೆ ಅಗಲಿದ ಶಿಕ್ಷಕರು ಮತ್ತು ಗೆಳೆಯರನ್ನು ನೆನೆದು ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳ ಪರವಾಗಿ ಬಸವರಾಜ ಕೊಪ್ಪಳ, ಶಶಿಕುಮಾರ ಪುರಂದರೆ, ಹೀರಾಲಾಲ್ ಹೀರೋಜಿರಾವ್, ಶ್ರೀನಿವಾಸ ಜನಾದ್ರಿ, ಬಸವರಾಜ ದೇವಶೆಟ್ಟಿ, ಗೋಪಿಕೃಷ್ಣ ಇಟಗಿ ಇತರರು ಮಾತನಾಡಿದರು.

Get real time updates directly on you device, subscribe now.

Comments are closed.

error: Content is protected !!