ಪತಿ ಪತ್ನಿ ಸಂಸಾರ ರಥದ ಸಾರಥಿಗಳು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕು: ಡಾ.ಈಶ್ವರ್ ಸವಡಿ
ಗಂಗಾವತಿ: ದೇಶದ ಆರ್ಥಿಕ ಶಕ್ತಿ ವೃದ್ಧಿಯ ಜತೆಗೆ ಸಮಾಜ ತಿದ್ದುವಲ್ಲಿ ಮಹಿಳಯರು ಬಹು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಇಲ್ಲಿನ ಉಪ ವಿಭಾಗದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳಿದರು.
ಅವರು, ಶ್ರೀ ಧರ್ಮಸ್ಥಳ ಮಂಜುನಾಥ್ ಗ್ರಾಮೀಣಾಭಿವೃದ್ಧಿ ಸೇವಾ ಸಂಘವು ಶ್ರೀಚನ್ನಬಸವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ನಗರದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಪ್ರತಿಭಾ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಶನಿವಾರಮಾತನಾಡಿದರು.
ಪುರುಷ ಪ್ರಧಾನ ಸಮಾಜ ಹೆಸರಿಗಷ್ಟೆ ಮಹಿಳೆಯರು ಬಹುತೇಕ ಮನೆಗಳನ್ನು ಸುಸೂತ್ರವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಪತಿ ಪತ್ನಿ ಸಂಸಾರ ರಥದ ಸಾರಥಿಗಳು ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕು ಹಾಗಿದ್ದಾಗ ಮಾತ್ರ ಸಂಸಾರ ಹಾಲು ಜೇನಾಗಿರುತ್ತದೆ. ಸಮಾಜದಲ್ಲಿನ ದುಷ್ಚಟಗಳಿಗೆ ದಾಸರಾಗಿರುವ ತಮ್ಮ ಕುಟುಂಬದವರನ್ನು ತಿದ್ದುವಲ್ಲಿ ಮಹಿಳೆ ಅತ್ಯಂತ ಯಶಸ್ವಿ ಪಾತ್ರ ನಿರ್ವಹಿಸಲಿದ್ದಾಳೆ ಎಂದು ಕಿವಿಮಾತು ಹೇಳಿದರು.
ರಾಜ ವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಜ್ಞಾನ ವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ, ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯ ಪಾತ್ರ, ಅತ್ತೆ, ಸೊಸೆ ಮತ್ತು ತಾಯಿ ಮಗಳ ಸಾಮರಸ್ಯದ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗಣೇಶ್ ಮಾತನಾಡಿ, ಜನನ, ಜೀವನ, ಮರಣದ ಆಗು ಹೋಗುಗಳ ಮದ್ಯೆ ಮನುಷ್ಯ ಸಮಾಜಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ, ತುಂಬಾ
ಅರ್ಥಗರ್ಭಿತವಾದ ಮಾಹಿತಿ ನೀಡಿದರು. ತಾಲೂಕಿನಲ್ಲಿ ಕಳೆದ ೧೨ ವರ್ಷದ ಅವಧಿಯಲ್ಲಿ ಮೂಡಿ ಬಂದ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ, ಸಹಾಯಕ ಸಬ್‌ಇನ್ಸ್ ಪೆಕ್ಟರ್ ಕಲಾವತಿ, ಸರಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿ ಉಪನ್ಯಾಸಕರಾದ, ಲಲಿತ ಕಂದಗಲ್, ವಿದ್ಯಾನಿಕೇತನ ಪದವಿ ಕಾಲೇಜ್ ನ ಕನ್ನಡ ಪ್ರಾಧ್ಯಪಕರಾದ ರಾಜೇಶ್ವರಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಪಲ್ಲವಿ, ಆಪ್ತ ಸಮಾಲೋಚಕಿ ಉಪ ವಿಭಾಗ ಆಸ್ಪತ್ರೆ ಇವರು ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಕುರಿತು ಉತ್ತಮ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗೊಂದಿ ರಾಜವಂಶಸ್ತೆ ಶ್ರೀಮತಿ ಲಲಿತಾ ರಾಣಿ, ರಂಗದೇವರಾಯಲು ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯ ನೀಲಕಂಠಪ್ಪ ನಾಗಶೆಟ್ಟಿ, ಸತ್ಯನಾರಾಯಣ, ಚೆನ್ನವೀರ ಗೌಡ, ಆರಾಳ, ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ, ಸಮನ್ವಯಧಿಕಾರಿ ಶಾರದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ೫ ಮಂದಿ ಮಹಿಳಾ ಸಾಧಕರನ್ನು, ಮತ್ತು ಉತ್ತಮವಾದ ಜ್ಞಾನ ವಿಕಾಸ ಕೇಂದ್ರಗಳನ್ನುನಿರ್ವಹಣೆ ಮಾಡುತ್ತಿರುವ ಕೇಂದ್ರಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಬಳಿಕ ಸದಸ್ಯರಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
Comments are closed.