ಕೃಷಿ, ಕಲೆಗಳಲ್ಲಿ ಅವಕಾಶಗಳು ಹೇರಳ-ಡಾ ಜೀವನ್ ಸಾಬ್ ಬಿನ್ನಾಳ

Get real time updates directly on you device, subscribe now.

ಕುಷ್ಟಗಿ: ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಲಲಿತ ಕಲೆಗಳು ಹಾಗೂ ಕೃಷಿ ಕ್ಷೇತ್ರಗಳಲ್ಲಿ ವ್ಯಾಪಕವಾದ ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳ ಕಡೆಗೆ ಲಕ್ಷ ವಹಿಸಬೇಕು ಎಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿ ಡಾ ಜೀವನ್ ಸಾಬ್ ಬಿನ್ನಾಳ ಹೇಳಿದರು.
ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳು, ಸಿವಿಸಿ ಫೌಂಡೇಶನ್ ಹಾಗೂ ಭೂಮಿ ಸ್ಟಡಿ ಸರ್ಕಲ್ ಜಂಟಿಯಾಗಿ ‘ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಮುಂದೇನು?’ ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
“ಉದ್ಯೋಗ ಆಧಾರಿತ ವಿಷಯಗಳು ಈಗ ಹೆಚ್ಚು ಮಹತ್ವ ಪಡೆದಿವೆ. ಸಾಂಪ್ರದಾಯಿಕ ವಿಷಯಗಳಾದ
 ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳ ಆಚೆಗೆ ಕೃಷಿ ಹಾಗೂ ಲಲಿತ ಕಲೆಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳು ಇವೆ. ವಿದ್ಯಾರ್ಥಿಗಳು ವಿಭಿನ್ನವಾಗಿ ಯೋಚಿಸಬೇಕು. ತಮ್ಮ ಆಸಕ್ತಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಶ್ರಮವಹಿಸಬೇಕು. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ. ಲಲಿತ ಕಲಾ ಪ್ರಕಾರಗಳಲ್ಲಿ ಉನ್ನತಿ ಸಾಧಿಸಿ ಯಶಸ್ವಿಯಾದ ಹಲವಾರು ವಿದ್ಯಾರ್ಥಿಗಳಿದ್ದಾರೆ,” ಎಂದರು.
“ಪರೀಕ್ಷೆಗಳಲ್ಲಿ ವಿಫಲರಾಗುವುದು ವಿದ್ಯಾರ್ಥಿ ಜೀವನದಲ್ಲಿ ಸಹಜ. ಆದರೆ ವಿದ್ಯಾರ್ಥಿಗಳು ಜೀವನದ ಪರೀಕ್ಷೆಯಲ್ಲಿ ವಿಫಲರಾಗಬಾರದು. ಉನ್ನತ ಶಿಕ್ಷಣದ ಎಲ್ಲಾ ವಿಷಯಗಳಿಗೂ ಅವುಗಳದೇ ಆದ ಮಹತ್ವವಿದೆ. ತಾವು ಆಯ್ದುಕೊಳ್ಳುವ ವಿಷಯಗಳಲ್ಲಿ ಪರಿಣಿತಿ ಸಾಧಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮುಖ್ಯವಾಗಿ ವಿದ್ಯಾರ್ಥಿಗಳು ಭಾವನೆಗಳನ್ನು ಅಂಕೆಯಲ್ಲಿಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸುವುದೇ ಯಶಸ್ಸಿನ ಗುಟ್ಟು,” ಎಂದು ಉಪನ್ಯಾಸಕರಾದ ಭೀಮಪ್ಪ ಹೆಚ್ ಗೊಲ್ಲರ್ ಹೇಳಿದರು.
 ಭೂಮಿ ಸ್ಟಡಿ ಸರ್ಕಲ್ ನಿರ್ದೇಶಕರಾದ ಮಹೇಶ್ ಪಟ್ಟೆದ್ ಮಾತನಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಲ್ಲಿ ಉನ್ನತ ಶಿಕ್ಷಣದಲ್ಲಿ ಇರುವ ಸವಾಲು ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಉಪನ್ಯಾಸ ನೀಡಿದರು.
” ವಿಜ್ಞಾನಕ್ಕೆ ಇರುವ ಮಹತ್ವ ಉಳಿದ ವಿಷಯಗಳಿಗೂ ಇದೆ. ಹೀಗಾಗಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳಾಚೆ ಗಮನಹರಿಸುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಮೊಬೈಲ್ ತ್ಯಜಿಸಿ ಪುಸ್ತಕ ಹಿಡಿದಾಗ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ,” ಎಂದರು.
 ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಪ್ರಶಾಂತ್ ಹಿರೇಮಠ ಹಾಗೂ ಶಿಕ್ಷಕ ಸಿಬ್ಬಂದಿಗಳು ಹಾಜರಿದ್ದರು.
 ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶೀರ್ಷಿಕೆ: ಶಿಕ್ಷಣ ಸಂಪನ್ಮೂಲ ವ್ಯಕ್ತಿ ಡಾ ಜೀವನ್ ಸಾಬ್ ಬಿನ್ನಾಳ, ಭೂಮಿ ಸ್ಟಡಿ ಸರ್ಕಲ್ ನಿರ್ದೇಶಕರಾದ ಮಹೇಶ್ ಪಟ್ಟೆದ್ ಹಾಗೂ ಉಪನ್ಯಾಸಕ ಭೀಮಪ್ಪ ಹೆಚ್ ಗೊಲ್ಲರ್ ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿದರು. ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಪ್ರಶಾಂತ್ ಹಿರೇಮಠ ಹಾಗೂ ಶಿಕ್ಷಕ ಫಕೀರಪ್ಪ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: