ವಶಪಡಿಸಿಕೊಂಡ ಒಣಗಿದ ಗಾಂಜಾ ಗಿಡ ಮತ್ತು ಗಾಂಜಾ ನಾಶ ಪಡಿಸಿದ ಪೊಲೀಸ್ ಇಲಾಖೆ
ದಿನಾಂಕ: 09-02-2024 ರಂದು ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು ರವರ ಮಾರ್ಗದರ್ಶನದಂತೆ ಕೊಪ್ಪಳ ಜಿಲ್ಲೆಯಲ್ಲಿ ಸನ್ 2011, 2016, 2020, 2022 & 2023 ರವರೆಗೆ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ದಾಖಲಾದ 6 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಣಗಿದ ಗಾಂಜಾ ಗಿಡಗಳನ್ನು ಮತ್ತು ಗಾಂಜಾವನ್ನು ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮೀತಿಯ ಅಧ್ಯಕ್ಷರಾದ ಶ್ರೀಮತಿ ಯಶೋಧಾ ಎಸ್. ವಂಟಗೋಡಿ, ಐ.ಪಿ.ಎಸ್. ಪೊಲೀಸ್ ವರಿಷ್ಟಾಧಿಕಾರಿಗಳು ಕೊಪ್ಪಳ, ಆರ್. ಹೇಮಂತ್ಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಹಾಗೂ ಸದಸ್ಯರಾದ ಮುತ್ತಣ್ಣ, ಸರವಗೋಳ ಡಿ.ಎಸ್.ಪಿ. ಕೊಪ್ಪಳ ಹಾಗೂ ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ಎಸ್.ಪಿ ಗಂಗಾವತಿ, ರವರ ಸಮಕ್ಷಮದಲ್ಲಿ 13 ಕೆ.ಜಿ. 438 ಗ್ರಾಂ. ಗಾಂಜಾವನ್ನು ಶ್ರೀ ಶರಣ ಅಸೋಸಿಯೇಟ್ಸ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ನಾಗೇಶನಹಳ್ಳಿಯ ಬಾಯ್ಸರ್‌ನಲ್ಲಿ ಹಾಕಿ ಸುಟ್ಟು ವಿಲೇವಾರಿ ಮಾಡಲಾಯಿತು. ಈ ಸಮಯದಲ್ಲಿ ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ಪ್ರಭಾರ ಪಿ.ಐ. ಡಿ. ಸುರೇಶ ಹಾಗೂ ಡಿ.ಸಿ.ಆರ್.ಬಿ ಘಟಕದ ಸಿಬ್ಬಂದಿಯವರು, ಕುಮಾರ ಪರಿಸರ ಇಲಾಖೆಯ ವಾಯು ಮಾಲಿನ್ಯದ ಜಿಲ್ಲಾ ಅಧಿಕಾರಿಗಳು, ಜೈವಿಕ ವೈದ್ಯಕೀಯ ವಿಲೇವಾರಿ ಘಟಕದ ಮುಖ್ಯಸ್ಥರಾದ ಚಂದ್ರು ಗಡಾದ ಮತ್ತು ಸ್ಥಳೀಯ ಮುಖ್ಯಸ್ಥರ ರವರ ಸಮಕ್ಷಮದಲ್ಲಿ ಕುಮಾರರಾಮ ಕಮ್ಮಟ (ಹಳೇಕುಮಟಾ) ಗ್ರಾಮ ಹತ್ತಿರದ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪರಿಸರ ಮಾಲಿನ್ಯವಾಗದಂತೆ ವೈಜ್ಞಾನಿಕ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ವಿಲೇವಾರಿ ಮಾಡಲಾಯಿತು ಎಂದು ಕೊಪ್ಪಳ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Comments are closed.