ಬುದ್ದ,ಬಸವ,ಅಂಬೇಡ್ಕರ್ ಸಮುದಾಯ ಭವನ ರವೀಂದ ಕಲಾ ಕ್ಷೇತ್ರದ ಮಾದರಿಯಲ್ಲೆ ನಿರ್ಮಾಣ ಮಾಡಿ
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಜಿಲ್ಲಾ ಸಮಿತಿ ಮತ್ತು ಯಲಬುರ್ಗಾ ತಾಲೂಕ ಸಮಿತಿಯ ಎಲ್ಲಾ ಪ್ರಕಾರದ ಕಲಾವಿದರು ಸೇರಿ ಇಂದು ಜಿಲ್ಲಾಡಳಿತ ಕೊಪ್ಪಳ ಹಾಗೂ ಜಿಲ್ಲಾಧಿಕಾರಿಗಳ ಆಶ್ರಯದಲ್ಲಿ ನಡೆಯುವ ಜನತಾದರ್ಶನದಲ್ಲಿ ಜಿಲ್ಲಾ ರಂಗಮಂದಿರದ ಕುರಿತು ಹಾಗೂ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬುದ್ದ,ಬಸವ,ಅಂಬೇಡ್ಕರ್ ಸಮುದಾಯ ಭವನವು ಬೆಂಗಳೂರಿನ ರವೀಂದ ಕಲಾ ಕ್ಷೇತ್ರದ ಮಾದರಿಯಲ್ಲೆ ನಿರ್ಮಾಣ ಮಾಡಿ ಅಂತ ಕ.ಕ.ಕ.ಒಕ್ಕೂಟ ಜಿಲ್ಲಾ ಸಮಿತಿ ಹಾಗೂ ಸ್ಥಳಿಯ ಕಲಾವಿದರು ಸೇರಿ ಮನವಿಯನ್ನು ಸಲ್ಲಿಸಲಾಯಿತು. ಆದಷ್ಟು ಬೇಗನೆ ಈ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳ ಕುರಿತು ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಜನತಾದಕ್ಷಣದ ಹೇಳಿದರು ಈ ಸಂಧರ್ಬದಲ್ಲಿ ಕ.ಕ.ಕ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಪಿರಗಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರಣು ಶೆಟ್ಟರ್ ತಾಲೂಕ ಅಧ್ಯಕ್ಷರಾದ ಮುತ್ತಣ್ಣ ತೊಂಡಿಹಾಳ ಹಾಗೂ ಕುಷ್ಟಗಿ ತಾಲೂಕಿನ ಅಧ್ಯಕ್ಷರಾದ ವೆಂಕಟೇಶ ಹೊಸಮನಿ ಮತ್ತು ಹಿರೇವಂಕಲಕುಂಟಾ ಹೋಬಳಿಯ ಎಲ್ಲಾ ಪ್ರಕಾರದ ಕಲಾವಿದರು ಇದ್ದರು.
Comments are closed.