ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಮತದಾನದ ಅರಿವು ಮೂಡಿಸಲು ಜಾಗೃತಿ ಅಭಿಯಾನ

Get real time updates directly on you device, subscribe now.

: ಭಾರತ ಚುನಾವಣಾ ಆಯೋಗ ಹಾಗೂ ಉನ್ನತ ಶಿಕ್ಷಣ ಸಚಿವಾಲಯದೊಂದಿಗೆ ಫೆ.01 ರಂದು ಚರ್ಚಿಸಿದಂತೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಗಳ ಅಡಿಯಲ್ಲಿ ಬರುವ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಯುವ ಮತದಾರರಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ ಫೆಬ್ರವರಿ ಮಾಹೆಯಲ್ಲಿ ಎರಡು ವಾರಗಳ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ.
ಭಾರತ ಚುನಾವಣಾ ಆಯೋಗದ ಮುಖ್ಯ ಧ್ಯೇಯ ‘ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬುದಾಗಿದೆ. ಅದರಂತೆ ಒಳಗೊಳ್ಳುವ, ಸುಗಮ, ನೈತಿಕ, ಮಾಹಿತಿಯುಕ್ತ ಮತ್ತು ಭಾಗವಹಿಸುವ ಚುನಾವಣೆಗಳನ್ನು ನಡೆಸುವುದು ಆಯೋಗದ ಮುಖ್ಯ ಉದ್ದೇಶವಾಗಿರುತ್ತದೆ. ಭವಿಷ್ಯ ಹಾಗೂ ಯುವ ಮತದಾರರಲ್ಲಿ ಮತದಾನದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಶಿಕ್ಷಣ ಸಚಿವಾಲಯದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳನ್ನು ಒಳಗೊಂಡAತೆ 2023 ರ ನವೆಂಬರ್ 02 ರಂದು ಒಡಂಬಡಿಕೆ ಮಾಡಿಕೊಂಡಿದೆ.
ಭಾರತ ಚುನಾವಣಾ ಆಯೋಗವು ಉನ್ನತ ಶಿಕ್ಷಣ ಸಚಿವಾಲಯದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪ್ರಕಾರ ಯುವ ಮತದಾರರಲ್ಲಿ ಮತದಾನದ ಅರಿವು ಮತ್ತು ಮತದಾರರ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡಿ, ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವುದಾಗಿರುತ್ತದೆ. ಯುಜಿಸಿ ಮತ್ತು ಎಐಸಿಟಿಇ ಗಳ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್/ಎನ್‌ವೈಕೆಎಸ್ ವೇದಿಕೆಗಳ ಮುಖಾಂತರ ಯಾವುದೇ ರಾಜಕೀಯ ಪ್ರೇರಿತವಲ್ಲದ, ಪಕ್ಷಾತೀತವಾಗಿ ಮತದಾನದ ಶಿಕ್ಷಣ ಮತ್ತು ಮತದಾನದ ಅರಿವು/ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಫೆಬ್ರವರಿಯಲ್ಲಿ ಎರಡು ವಾರಗಳ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಈ ಸಂಬAಧ ಕೈಗೊಂಡ ಚಟುವಟಿಕೆಗಳ ಸಾಧನೆಯ ಬಗ್ಗೆ  My Bharath portal     ನಲ್ಲಿ ದಾಖಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ  https://drive.google.com/drive/folders/199911kTcwINSZpDdDq18sCaSAxyKRukw?usp=sharing     ಗೆ ಭೇಟಿ ನೀಡಬಹುದು. ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಪಡೆಯಲು  https://drive.google.com/drive/folders/1MWQ1jMic4c5MwWNjDi1yDGRutHUddb?usp=drive  ಲಿಂಕ್ ಅನ್ನು ಸಂಪರ್ಕಿಸಬಹುದು ಎಂದು ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮಾ ರಾವ್ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: