ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗಡಿಗಳ ವ್ಯವಸ್ಥೆ
ಅಂಗಡಿಗಳ ವೈಶಿಷ್ಟ್ಯತೆ:
ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದಆವರಣದ ಮುಂಭಾಗದಲ್ಲಿನ ಸುಮಾರು ೧೨ ಎಕರೆ ವಿಸ್ತೀರ್ಣದ ಮೈದಾನದಲ್ಲಿ ೯೦೦ ರಿಂದ ೧೦೦೦ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ವೈವಿಧ್ಯಮಯವಾದಅಂಗಡಿ-ಮುಂಗಟ್ಟುಗಳು ಸ್ಥಾಪಿತವಾಗಲಿವೆ. ಈ ಎಲ್ಲಅಂಗಡಿ ಮುಂಗಟ್ಟುಗಳು ಶ್ರೀಮಠದ ಕಂಬಗಳಂತೆ ಕಾಣುವ ೪ ವಿಶಿಷ್ಟ ಮಹಾದ್ವಾರಗಳನ್ನು ಶ್ರೀಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಲಿವೆ. ಜಾತ್ರಾ ಸಮಯದಲ್ಲಿ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವವು.
ಅಂಗಡಿಗಳ ಶಿಸ್ತು ಮತ್ತು ನೀಲನಕ್ಷೆ:
ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆರಹದಾರಿ ಕಲ್ಪಿಸಿದೆ.ಈ ವಿಶಾಲ ಆವರಣದಲ್ಲಿ ಪ್ರತಿವರ್ಷಜಾತ್ರೆಆವರಣದ ಮಳಿಗೆಗಳು ಹಾಕಲಾಗುತ್ತದೆ.ಪ್ರತಿ ಸಾಲುಗಳ ಮಧ್ಯಜನಸಂದಣಿಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ.ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ.
(೧) ಮಿಠಾಯಿಅಂಗಡಿ ಸಾಲುಗಳು ೨) ಗೋಬಿ ಮಂಚೂರಿಅಂಗಡಿ ಸಾಲುಗಳು ೩) ಬಳೆ ಅಂಗಡಿ ಸಾಲುಗಳು ೪) ಹೋಟೆಲುಗಳ ಸಾಲುಗಳು ೫) ಸ್ಟೇಷನರಿಅಂಗಡಿ ಸಾಲುಗಳು, ೬) ಹಣ್ಣು ಹಾಗೂ ಜ್ಯೂಸ್‌ಅಂಗಡಿ ಸಾಲುಗಳು ೭) ಕಬ್ಬಿಣ ಸಾಮಾನುಳ ಅಂಗಡಿಗಳ ಸಾಲುಗಳು ೮) ಬಾಂಡೆ ಅಂಗಡಿ೯) ಜೋಕಾಲಿ ಆಟ ಆಡುವ ಸಾಲುಗಳು ೧೦) ಕೃಷಿ ಮೇಳ ೧೧) ಫಲ ಪುಷ್ಪ ಪ್ರದರ್ಶನ೧೨)ಕರಕುಶಲ ಅಭಿವೃದ್ಧಿ ಪ್ರದರ್ಶನ ೧೩)ಸ್ನಾನ ಮತ್ತು ಶೌಚಾಲಯಗಳ ವ್ಯವಸ್ಥೆ ೧೪) ಪಾರ್ಕಿಂಗ್ ವ್ಯವಸ್ಥೆ ೧೫) ಪೋಲಿಸ್ ಚೌಕಿ ೧೬) ತುರ್ತುಚಿಕಿತ್ಸಾಘಟಕ ಇವೆಲ್ಲವುಗಳ ವ್ಯವಸ್ಥೆ ಮಾಡಲಾಗಿದೆ.
ಭಕ್ತರಆರೋಗ್ಯ ಕಾಳಜಿ ಮತ್ತುಶ್ರೀರಕ್ಷೆ:ಅಲ್ಲದೇಜಾತ್ರಾ ಮಹೋತ್ಸವದ ಅಂಗಡಿಗಳ ಆವರಣಗಳಲ್ಲಿ ರಥೋತ್ಸವದಿಂದ ಹಿಡಿದುಅಮವಾಸ್ಯೆಯವರೆಗೆ ಮಹಿಳೆಯರ, ಮಕ್ಕಳ, ವಯೋವೃದ್ದರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರದ ಆಭರಣಗಳು, ಮೊಬೈಲ್ ಕಳ್ಳತನ ಮಾಡುವ ಕಳ್ಳಕಾಕರನ್ನು ತಡೆಗಟ್ಟುವ ನಿಟ್ಟಿನಲ್ಲಿಜಾತ್ರೆಯನ್ನು ಶಿಸ್ತುಬದ್ದವಾಗಿ ಜರುಗಿಸಲುಅಲ್ಲಲ್ಲಿ ಸಿ.ಸಿ. ಕ್ಯಾಮರಗಳನ್ನು ಸಹ ಅಳವಡಿಸಲಾಗಿರುತ್ತದೆ.ಅಂಗಡಿಕಾರರ ಮತ್ತು ಯಾತ್ರಾರ್ಥಿಗಳ ಅನಾರೋಗ್ಯಕ್ಕೆಚಿಕಿತ್ಸೆ ನೀಡಲು ನಮ್ಮಆರ್ಯುವೇದ ಮಹಾವಿದ್ಯಾಲಯದ ೩ ಅಥವಾ ೪ ಓ.ಪಿ.ಡಿಚಿಕಿತ್ಸಾ ಕೇಂದ್ರಗಳು ಇದ್ದು ಇವುಗಳ ಜೊತೆಜಿಲ್ಲಾಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಯವರಿಂದತುರ್ತುಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಕೊಪ್ಪಳ ನಗರಸಭೆಜಾತ್ರೆಯ ಸಂಪೂರ್ಣ ಸ್ವಚ್ಛತಾಕಾರ್ಯಕ್ರಮ ಮಾಡುವಲ್ಲಿ ಶ್ರೀ ಗವಿಮಠದೊಂದಿಗೆಕೈಜೊಡಿಸುತ್ತದೆ.ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ.ಜೊತೆಗೆಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಈ ಮಳಿಗೆಗಳ ಆವರಣದಲ್ಲಿ ಸ್ವಚ್ಚತೆಯನ್ನುಕಾಪಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ೯೮೪೫೦೩೭೭೯೭, ೮೨೧೭೭೭೨೧೧೨, ೯೫೧೩೬೯೧೩೩೩, ೯೯೪೫೦೧೧೫೮೧ ಸಂಪರ್ಕಿಸಲು ತಿಳಿಸಲಾಗಿದೆ.
Comments are closed.