ಪೌರ ಕಾರ್ಮಿಕರು ಕರ್ತವ್ಯದ ಜೊತೆಗೆ  ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು : ಶಾಸಕ ದೊಡ್ಡನಗೌಡ ಪಾಟೀಲ್ 

Get real time updates directly on you device, subscribe now.

ಕುಷ್ಟಗಿ 24: ಕುಷ್ಟಗಿ ಪಟ್ಟಣದ ಅಭಿವೃದ್ಧಿಗೆ ವಿಶೇಷ ಅನುದಾನ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಸಲಹೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪುರಸಭೆ ಕಾರ್ಯಲಯ ಹಾಗೂ ಪೌರ ಕಾರ್ಮಿಕರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಇಲ್ಲಿನ ಪುರಸಭೆ ಆವರಣದಲ್ಲಿ ಏರ್ಪಡಿಸಿದ್ದ ನೂತನವಾಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರಿಗೆ ಪೌರ ಸನ್ಮಾನ ಸಮಾರಂಭ ಸ್ವೀಕರಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತವನ್ನು ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ ನಿಮಗೆ ಅಭಿನಂದನೆಗಳು.
ಪೌರ ಕಾರ್ಮಿಕರ ಮನೆ ನಿರ್ಮಾಣ ಮಾಡಲು ನಿವೇಶನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನಗರ ಸ್ವಚ್ಛತೆಗೆ ಪೌರ ಕಾರ್ಮಿಕರ ಪಾತ್ರ ಬಹು ಮುಖ್ಯವಾಗಿದೆ ಸ್ವಚ್ಛತೆಗೆ ಜೊತೆಗೆ ಆರೋಗ್ಯ ಕಡೆ ಹೆಚ್ಚಿನ ಆದ್ಯತೆ ವಹಿಸಬೇಕು ಎಂದು ಸಲಹೆ ನೀಡಿದರು.
ಕುಷ್ಟಗಿ ಪಟ್ಟಣದ ಜನತೆ ಪ್ರಗತಿಗೆ ಹೆಚ್ಚು ಸಹಕಾರ ನೀಡುತ್ತಾರೆ ಅವರಿಗೆ ಅನಂತ ಅನಂತ ಧನ್ಯವಾದಗಳು ಎಂದು ಹೇಳಿದರು.
ಕುಡಿಯುವ, ನೀರು, ನೂತನ ಪುರಸಭೆ ಕಚೇರಿ ನಿರ್ಮಾಣ, ಉದ್ಯಾನವನ, ರಸ್ತೆ ಅಗಲೀಕರಣ, ವಿದ್ಯುತ್ ದ್ವೀಪ ನಿರ್ಮಾಣ, ನಗರ ಹಸಿರು ಕರಣಕ್ಕೆ ಸರ್ಕಾರದ ವಿವಿಧ ಯೋಜನೆ ಅನುದಾನವನ್ನು ಪಡೆಯುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ ಡಿ.ಎನ್, ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪುರಸಭೆ ಸದಸ್ಯರಾದ ಕಲ್ಲೇಶ ತಾಳದ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಪತ್ತಾರ, ಅಂಬಣ್ಣ ಭಜಂತ್ರಿ, ವಿರೇಶ ಬೆದವಟ್ಟಿ, ಮಹಾಂತೇಶ ಕಲ್ಲಬಾವಿ, ಮಲ್ಲು ಹಿರೇಮನಿ, ಗೀತಾ ಶರಣಪ್ಪ ತುರಕಾಣಿ, ವಿಜಯಲಕ್ಷ್ಮೀ ಮಂಜುನಾಥ ಕಟ್ಟಿಮನಿ, ನಾಹೀನ್ ಮುಲ್ಲಾ, ಇಮಾಮ್ ಬೀ ಕಲಬುರ್ಗಿ ಹಾಗೂ ಪುರಸಭೆ ಸಿಬ್ಬಂದಿಗಳಾದ ಎಸ್.ಎಮ್ ಖತೀಬ್, ಪ್ರಾಣೇಶ್, ರಾಘವೇಂದ್ರ, ಚಿರಂಜೀವಿ ದೊಡ್ಡಮನಿ, ಮಲಂಗಸಾಬ, ಪ್ರೀತಿ ಬಾಂಡಗೆ, ಶಾಂತಪ್ಪ ಮತ್ತು ಪೌರ ಕಾರ್ಮಿಕರು ಮತ್ತು ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.
ವಿದ್ಯಾನಗರ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಸಿದರು.
ಬಿಆರ್ ಸಿ ಶರಣಪ್ಪ ತೆಮ್ಮಿನಾಳ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ವಾರ್ಡಿನ ನಾಗರಿಕರು ಶಾಸಕ ದೊಡ್ಡನಗೌಡ ಪಾಟೀಲ್ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: