ಹೈಟೆಕ್,ಮಧ್ಯಮಗಾತ್ರ, ಅತ್ಯಂತಕಡಿಮೆ ಅಳತೆಯ, ಅತ್ಯಂತ ಕಡಿಮೆ ವೆಚ್ಚದ ಟೆರೆಸ್‌ ಗಾರ್ಡನ ಮತ್ತುಕಿಚನ್‌ಗಾರ್ಡನ ಹಾಗೂ ಫಲಪುಷ್ಪ ಪ್ರದರ್ಶನ

Get real time updates directly on you device, subscribe now.

ಅಂಗೈ ಅಗಲ ಜಾಗ, ಆಕಾಶದಗಲ ಆರೋಗ್ಯ ಶೀರ್ಷಿಕೆ ಅಡಿಯಲ್ಲಿ,

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗವಿಮಠ ಹಾಗೂ ಜಿಲ್ಲಾತೋಟಗಾರಿಕೆ ಇಲಾಖೆ ಕೊಪ್ಪಳ, ಇವರ ಸಹಯೋಗದೊಂದಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಜಾತ್ರಾಆವರಣದಲ್ಲಿ ದಿನಾಂಕ ೨೭/೦೧/೨೦೨೪ರಿಂದ ೦೭/೦೨/೨೦೨೪ವರೆಗೆ ಮಾಡರ್ನನೈಸ್‌ಟೆರೆಸ್‌ಗಾರ್ಡನ(ತಾರಸಿ ತೋಟ) ಮತ್ತುಕಿಚನ್‌ಗಾರ್ಡನ(ಅಡಿಗೆತೋಟ) ಹಾಗೂ ಫಲಪುಷ್ಪ ಪ್ರದರ್ಶನವನ್ನುಹಮ್ಮಿಕೊಳ್ಳಲಾಗಿದ್ದು ಹೈಟೆಕ್, ಉನ್ನತತಂತ್ರಜ್ಞಾನ ಹೊಂದಿದ, ಮಧ್ಯಮಗಾತ್ರ ಹೊಂದಿದಅತ್ಯಂತಕಡಿಮೆ ವೆಚ್ಚದ ಹತ್ತು ಅಡಿ ಅಳತೆಯಿಂದ ನೂರಡಿವರೆಗೆಗಾತ್ರದಲ್ಲಿ ಅಳತೆಗೆ ತಕ್ಕಂತೆಟೆರೆಸ್ ಮತ್ತುಕಿಚನ್‌ಗಾರ್ಡನ್, ವೆರ್ಟಿಕಲ್‌ಗಾರ್ಡನ್, ಹಾರಿಜಂಟಲ್‌ಗಾರ್ಡನ್, ಮುಂತಾದವುಗಳ ಕುರಿತು ಮಾಹಿತಿ ನೀಡುವತರಬೇತಿ ಮತ್ತು ಪ್ರದರ್ಶನವನ್ನುತೋಟಗಾರಿಕೆಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ.
ಕಿಚನ್‌ಗಾರ್ಡನ (ಅಡಿಗೆತೋಟ)
ಹಿಂದಿನ ದಿನಗಳಲ್ಲಿ ರೈತರು ಬಹುತೇಕ ಸ್ವಾವಲಂಬನೆಯಜೀವನ ನಡೆಸುತ್ತಿದ್ದರು.ತಮ್ಮ ಮನೆಯ ಹಿತ್ತಲಲ್ಲಿ ತರಕಾರಿ ಬೆಳೆಯುವುದು ತೀರಾ ಸಾಮಾನ್ಯವಾಗಿತ್ತು.ಇಂದು ಹಲವು ಕಾರಣ-ಬದಲಾವಣೆಗಳಿಂದ ಕೈ ತೋಟಗಳು ಮಾಯವಾಗಿವೆ. ಸಕಲವನ್ನೂ ಮಾರುಕಟ್ಟೆಯಿಂದಕೊಂಡುತಂದುಆರೋಗ್ಯದಜತೆಗೆ ಹಣವನ್ನೂ ಕಳೆದುಕೊಳ್ಳುವ ಸ್ಥಿತಿ.
ವೈವಿಧ್ಯತರಕಾರಿ: ಇವರಕೈತೋಟದಲ್ಲಿ ವಿವಿಧ ಸಸ್ಯಗಳು, ತರಕಾರಿ, ಬಳ್ಳಿ ತರಕಾರಿ ಹಾಗೂ ಹೂಬಿಡುವ ಬಳ್ಳಿಗಳನ್ನು ಬೆಳಸುವುದು ಅಚ್ಚುಕಟ್ಟಾಗಿಕೈತೋಟ ಬೆಳೆಸುವುದು..ಗುಂಟೆಜಾಗದಲ್ಲಿಪುಟ್ಟಕೈತೋಟದಲ್ಲಿಟೊಮೆಟೊ, ಕರಿಬೇವು, ಬಳ್ಳೊಳ್ಳಿ, ಈರುಳ್ಳಿ, ಲಿಂಬೆ, ಮಾವು, ಮೆಣಸಿನಕಾಯಿ, ಬದನೆ, ಕುಂಬಳ ಪಾಲಕ, ಸವತೆ, ಹೀರೇಕಾಯಿ, ಬೆಳೆಸುವುದು.ಇದರಿಂದಅಡುಗೆಗೆ ಬೇಕಾದತಾಜಾ ತರಕಾರಿಗಳು ಬೆಳೆಯುವುದು.ತರಕಾರಿ ಗಿಡಗಳ ತಾಜ್ಯವನ್ನುಗೊಬ್ಬರವಾಗಿಉಪಯೋಗಿಸುವುದು.
ಕೈ ತೋಟದಿಂದ ಸಿಗುವ ತರಕಾರಿಗಳನ್ನು ಮನೆಯ ಬಳಕೆಗೆ ಬಳಸುವುದು.ಮಿಕ್ಕಿದ್ದನ್ನು ಅಕ್ಕ ಪಕ್ಕದಮನೆಯ ಸದಸ್ಯರಿಗೆ ನೀಡುವುದುಇದರಿಂದ ಸೌಹಾರ್ದತೆಯೂ ಹೆಚ್ಚುತ್ತದೆ.ಇದಲ್ಲದೇ ವಾರದ ಸಂತೆಯಖರ್ಚು ಉಳಿತಾಯವಾಗಿದೆ.
ಟೆರೆಸ್‌ಗಾರ್ಡನ್ (ತಾರಸಿ ತೋಟ)
ಪ್ರಸ್ತುತಸಂದರ್ಭದಲ್ಲಿಅದೆ?ಜನರು ಸ್ವಉದ್ಯೋಗ ಹುಡುಕಿಕೊಂಡುತಮ್ಮ ಬದುಕನ್ನುಕಟ್ಟಿಕೊಂಡರು.ಆರೋಗ್ಯದಕಡೆಗೆಜನರು ಹೆಚ್ಚು ಹೆಚ್ಚು ಗಮನ ಹರಿಸಿದಂತೆ ಕೆಲವೊಂದ?ಜನಕೃಷಿಯತ್ತ ವಾಲಿದರು.ಅದರಲ್ಲೂ ಹೆಣ್ಣು ಮಕ್ಕಳು ಟೆರೇಸ್‌ಗಾರ್ಡನ್‌ನತ್ತ ಒಲವು ತೋರಿಸುತ್ತಿದ್ದಾರೆ ಹಾಗೂ ಮಲ್ಲಿಗೆ ಕೃಷಿ, ತರಕಾರಿ, ಹಣ್ಣು ಹಂಪಲು ಹೀಗೆ ಬೇರೆ ಬೇರೆಕೃಷಿಯತ್ತ ಮನಸ್ಸು ಮಾಡಿದುಡಿಯುವ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.
ಟೆರೇಸ್‌ಗಾರ್ಡನಿಂಗ್ ಮಾಡುವ ಸಮಯದಲ್ಲಿ ಕೆಲವೊಂದು ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲಿ ನೀಡುವ ಮಾರ್ಗದರ್ಶನ ಮತ್ತು ತರಬೇತಿಗಳೆಂದರೆ, ತ್ಯಾಜ್ಯದಿಂದಗೊಬ್ಬರತಯಾರಿಸುವುದು.ಗ್ರೇ ವಾಟರ್ (ಪಾತ್ರೆ ತೊಳೆದ ನೀರು, ಕೈ ತೊಳೆದ ನೀರು) ಶುದ್ಧೀಕರಿಸುವುದು.ಮೊಬೈಲ್‌ನಿಂದಲೇ ನಿಯಂತ್ರಣವನ್ನು ಮಾಡುವತರಬೇತಿ, ಸಾವಯವ ಔಷಧಿಗಳನ್ನು ಕ್ರಿಮಿನಾಶಕಗಳನ್ನು ತಾವೇತಯಾರಿಸುವ ಮತ್ತುಕುಟುಂಬಕ್ಕೆತಕ್ಕಂತೆ ಬೆಳೆಯುವ ಮಾಹಿತಿ ಮತ್ತು ಮಾರ್ಗದರ್ಶನ, ತರಬೇತಿಇಲ್ಲಿ ನೀಡಲಾಗುತ್ತದೆ.
ಫಲಪಷ್ಪ ಪ್ರದರ್ಶನ:
ಹಣ್ಣುತರಕಾರಿ ಬೆಳೆಯುವುದು ಅಲ್ಲದೆಜನರಿಗೆ ಹೂವಿನ ಬೆಳವಣಿಗೆ ಕುರಿತು ಮಾಹಿತಿ ಮತ್ತು ಹೂಗಳ ವಿವಿಧಅಲಂಕಾರ ಮತ್ತು ಪ್ರದರ್ಶನ ನಡೆಸಲಾಗುತ್ತದೆ.
೧. ವಿವಿಧ ಬಗೆಯ ಹೂಗಳಿಂದ ಅಲಂಕೃತವಾದಕಾಂತಾರಾ ವರಾಹರೂಪ (ಕಾಡು ಬೆಳೆಸಿ ನಾಡು ಉಳಿಸಿ) ಪ್ರತಿಮೆ ಸ್ಥಬ್ದ ಚಿತ್ರದ ಪ್ರದರ್ಶನ.
೨. ವಿವಿಧ ಬಗೆಯ ಹೂಗಳಿಂದ ಅಲಂಕೃತವಾದ ಸೈಕಲ್, ಛತ್ರಿ, ವಾಟರ್ ಫಾಲ್‌ಗಳ ಸ್ಥಬ್ದ ಚಿತ್ರ ಪ್ರದರ್ಶನ.ವಿವಿಧ ಬಗೆಯ ಹೂದಾನಿಗಳು, ಅಲಂಕಾರಿಕ ಸಸಿಗಳ ಪ್ರದರ್ಶನ.
೩. ಹಣ್ಣಿನ ಮತ್ತುತರಕಾರಿಕೆತ್ತನೆ ಪ್ರದರ್ಶನ.
೪. ಅಣಬೆ ಬೇಸಾಯ, ಜೇನು ಕೃಷಿ, ಮನೆ ತೋಟ, ತಾರಸಿ ತೋಟ ಪ್ರಾತ್ಯಕ್ಷಿಕೆಗಳ ಪ್ರದರ್ಶನ.
೫. ತೋಟಗಾರಿಕೆಯಲ್ಲಿ ನವೀನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಮತ್ತುರೈತರಿಗೆ ಮಾಹಿತಿ.
೬. ತೋಟಗಾರಿಕೆಇಲಾಖೆಯಿಂದರೈತರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿಕೇಂದ್ರ ಸ್ಥಾಪನೆ.
೭. ಕೊಪ್ಪಳ ಜಿಲ್ಲೆಯ ವಿವಿಧರೈತರು ಬೆಳೆದ ಉತ್ತಮಗುಣಮಟ್ಟದ ಹಣ್ಣು ತರಕಾರಿಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ.
ರೈತರು ಬೆಳೆದ ವಿವಿಧ ಹೂವಿನ ಮಾದರಿತರಕಾರಿ ಹಣ್ಣು-ಹಂಪಲುಗಳ ಬೃಹತ್ ಪ್ರದರ್ಶನ ನಡೆಯಲಿದೆ. ಇದಕ್ಕೆ ಪೂರಕವನ್ನುವಂತೆಇವೆಲ್ಲಾ ವಿಷಯಗಳ ಕುರಿತು ಸಮಗ್ರ ವಿಷಯಗಳನ್ನು ತಿಳಿಸಿಕೊಡಲಾಗುವದು.ಇದರ ಸದುಪಯೋಗ ಪಡೆಯಬೇಕೆಂದುಹಾಗೂ ಹೆಚ್ಚಿನ ಮಾಹಿತಿಗಾಗಿ೯೪೪೮೯೯೯೨೩೭, ೯೪೪೮೯೯೯೨೩೭ ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದುಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Get real time updates directly on you device, subscribe now.

Comments are closed.

error: Content is protected !!
%d bloggers like this: