ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಕ್ಕೆ ಭಕ್ತರಿಂದ ಎಂಟು ಲಕ್ಷ ಶೇಂಗಾ ಹೋಳಿಗೆ ತಯಾರಿಕೆ
ಶ್ರೀ ಗವಿಸಿದ್ಧೇಶ್ವರಜಾತ್ರಾಮಹೋತ್ಸವವೆಂದರೆ,ಅದು ಶ್ರದ್ಧಾ-ಭಕ್ತಿಯ ಸಂಗಮ. ಪ್ರಸ್ತುತ ವರ್ಷದಜಾತ್ರಾ ಮಹೋತ್ಸವದಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ವರ್ಷದಿಂದ ವರ್ಷಕ್ಕೆ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವವನ್ನು ಕಣ್ತುಂಬಿಕೊಳ್ಳಲು, ಶ್ರೀ ಗವಿಮಠಕ್ಕೆಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇಇದೆ. ಇದರೊಂದಿಗೆ ಶ್ರೀ ಮಠದಲ್ಲಿ ನಡೆಯುವ ಮಹಾದಾಸೋಹಕ್ಕೆ ಭಕ್ತಿಯಿಂದ ಒಂದಿಲ್ಲೊಂದು ವಿಶೇಷ ಖಾದ್ಯಗಳನ್ನು ತಯಾರಿಸಿ ಸಲ್ಲಿಸುವ ಮೂಲಕ,ತಮ್ಮ ಭಕ್ತಿಯನ್ನುಸಮರ್ಪಿಸುವವರ ಸಂಖ್ಯೆಯೂ ಹೆಚ್ಚುತ್ತಲೇಇದೆ.
ಈ ವರ್ಷವೂ ಸಹ ಶ್ರೀಮಠದ ಮಹಾದಾಸೋಹಕ್ಕಾಗಿ ಸಿಂಧನೂರು, ಕಾರಟಗಿ ಹಾಗೂ ಮಸ್ಕಿಯ ತಾಲೂಕಿನ ಸುತ್ತಮತ್ತಲಿನ ೫೦ ಗ್ರಾಮಗಳ ಸದ್ಭಕ್ತರಿಂದ ಸುಮಾರು೧೫ ದಿನಗಳ ಕಾಲ, ಎಂಟು ಲಕ್ಷ ಶೇಂಗಾ ಹೋಳಿಗೆಯನ್ನು ತಯಾರಿಸಿ ಈ ವರ್ಷದಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದರೂಪದಲ್ಲಿಉಣಬಡಿಸಲಿದ್ದಾರೆ.
Comments are closed.