೨೪ ಬುಧವಾರ, ಸಂಜೆ ೫.೦೦ ಗಂಟೆಗೆ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.
ದಿನಾಂಕ ೨೪-೦೧-೨೦೨೪ ಬುಧವಾರ, ಸಂಜೆ ೫.೦೦ ಗಂಟೆಗೆ,
ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.
ಸ್ಥಳ: ಶ್ರೀಮಠದ ಕೆರೆಯ ಆವರಣ
ಸಂಗೀತ ಕಾರ್ಯಕ್ರಮ: ಅಯ್ಯಪ್ಪಯ್ಯ ಹಲಗಲಿಮಠ, ಧಾರವಾಡ ಹಾಗೂ ಸಂಗಡಿಗರಿಂದ
ತೆಪ್ಪೋತ್ಸವ: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ವ?ದಿಂದ ವ?ಕ್ಕೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಇದು ಕೇವಲ ಸಾಂಪ್ರ್ರದಾಯಿಕ ಜಾತ್ರೆಯಾಗಿರದೆ, ಜ್ಞಾನ ವೈಚಾರಿಕತೆ, ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿ ಮುನ್ನಡೆಸುವ ಮಹತ್ವದ ಜಾತ್ರೆಯಾಗಿದೆ.ಇಲ್ಲಿಗೆ ಆಗಮಿಸುವ ಯಾತ್ರಿಕರಲ್ಲಿ ಭಕ್ತಿಯ ಜೊತೆಗೆ ಏನೋ ಆನಂದ ಉತ್ಸಾಹ ಮಡುಗಟ್ಟಿ ನಿಂತಿರುತ್ತದೆ.ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ.ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕರ್ತೃ ಶ್ರೀ ಗವಿಸಿದ್ಧೇಶನಲ್ಲಿ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ.ತೆಪ್ಪೋತ್ಸವ ಎಂದರೆ ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವವೆಂದು ಅರ್ಥ.ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮೂಹೂರ್ತಗೊಳಿಸಿದ ತೆಪ್ಪವನ್ನು ಅಂಬಿಗರ ಸಹಾಯದಿಂದ ಹುಟ್ಟು ಹಾಕಿ ಸಾಗಿಸುತ್ತಾರೆ.
ಸುಂದರ ವಾತಾವರಣದ ಶುಭ ಸಾಯಂಕಾಲ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳ್ಳಂ ಬೆಳಕಿನ ಕಿರಣಗಳ ಆಗಮನದಲ್ಲಿ ಜರುಗುವ ಈ ಮಹೋತ್ಸವ ಭಕ್ತರನ್ನು ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ಧಗೊಳಿಸುತ್ತದೆ.ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಶ್ರೀ ಗವಿಮಠದ ಆವರಣದಲ್ಲಿ ಪುಷ್ಕರಣಿಯು ಅಕ್ಷರಶಃ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯು ನೋಡಲು ಸುಂದರ, ಮನೋಹರವಾಗಿ ಕಾಣುವುದು.ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪವು ದೈವದ ತೊಟ್ಟಿಲಿನಂತೆ ತೇಲುತ್ತ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಆಸೀನಗೊಳಿಸಿಕೊಂಡು ತೂಗುತ್ತಾ, ತೊನೆಯುತ್ತಾ ಭಕ್ತರ ಹೃನ್ಮನಗಳನ್ನು ತಣಿಸುತ್ತದೆ.ಸುಗಂಧ ಭರಿತ ಪು?ಗಳಿಂದ ಅಲಂಕಾರಗೊಂಡ ತೆಪ್ಪವು ನೋಡಲು ಸುಂದರ ಮನೋಹರ.ಭವ್ಯ ಮೆರವಣಿಗೆಯಿಂದ ಪಲ್ಲಕ್ಕಿಯಲ್ಲಿ ಸಾವಿರಾರು ಭಕ್ತರ ನಡುವೆ ವಿರಾಜಮಾನರಾದ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತೆಪ್ಪದಲ್ಲಿ ಪ್ರತಿ?ಪಿಸಿದಾಗ ನೆರೆದ ಭಕ್ತರ ಮನವು ಸ್ವರ್ಗವೇ ಧರೆಗಿಳಿದಂತೆ ಪುಳಕಗೊಳ್ಳುವದು. ಸದ್ಗುರು ಶ್ರೀ ಗವಿಸಿದ್ಧೇಶ್ವರರನ್ನು ಹೊತ್ತು ಪು?ವೇ ತೇಲಾಡುವಂತೆ ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಭಕ್ತ ಜನಸ್ತೋಮದಿಂದ ನಾದಮಯವಾಗಿ ಹೊರಹೊಮ್ಮುವ ಶ್ರೀ ಗವಿಸಿದ್ಧೇಶ್ವರ ಗಂಗಾರತಿ ಗೀತೆ ಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀ ಗವಿಸಿದ್ಧೇಶ್ವರ ಎಲ್ಲ ಭಕ್ತರನ್ನು ಹರಸುತ್ತಿದ್ದಾರೆ ಎಂಬ ಭಾವ ಭಕ್ತರಲ್ಲಿ ಮೂಡಿ ತಮ್ಮ ಭಾವ ಗಂಗೆಯಲ್ಲಿ, ಮಿಂದು ಮುಳುಗಿ ಪುಳಕಗೊಂಡು ಪುನೀತರಾಗುತ್ತಾರೆ. ಶ್ರೀ ಗವಿಸಿದ್ಧೇಶ್ವರರು ಕರ್ತೃ ಗದ್ದುಗೆಯಿಂದ ಎದ್ದುಬಂದು ಎಲ್ಲರನ್ನು ಹರಸಿದಂತಾಗಿ ಹ?ದ ಝೇಂಕಾರ ಮೊಳಗಿಸಿ ಪರಮಾನಂದ ಪಡುವದೇ ತೆಪ್ಪೋತ್ಸವ.’ತಿರುಪತಿಯಲ್ಲಿ ಬ್ರಹ್ಮೋತ್ಸವ ಕೊಪ್ಪಳದಲ್ಲಿ ತೆಪ್ಪೋತ್ಸವ’ಎಂದು ಆಗಮಿಸಿದ ಭಕ್ತರು ಆನಂದದಿಂದ ಮನತುಂಬಿ ಸಂತಸದಿಂದ ಹಾಡುತ್ತಾರೆ.. ಅವರ ಉತ್ಸಾಹ ನಿಜಕ್ಕೂ ಸುಂದರ ನಂತರ ಸಂಗೀತ ಕಲಾವಿದರಾದ ಶ್ರೀ ಅಯ್ಯಪ್ಪಯ್ಯ ಹಲಗಲಿಮಠ, ಧಾರವಾಡ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗುವುದು.
ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಗಂಗಾ ಆರತಿಯ ವಿಶೇಷ ಮೆರಗು
ಧಾರ್ಮಿಕ ಆಚರಣೆಗಳಲ್ಲಿ ಗಂಗಾ ಆರತಿಕೂಡ ಒಂದು. ಅನೇಕ ಪವಿತ್ರವಾದ ಸ್ಥಳಗಳಲ್ಲಿ ಗಂಗಾ ಆರತಿಯನ್ನು ಅತ್ಯಂತ ವಿಜೃಂಬಣೆಯಿಂದ ನೆರವೇರಿಸಲಾಗುತ್ತದೆ. ವಾರಾಣಸಿ, ಹರಿದ್ವಾರ, ರಿಷಿಕೇಶ, ಪ್ರಯಾಗ್ ಇವು ಆಧ್ಯಾತ್ಮಿಕ ತಾಣಗಳು ಹಾಗಾಗಿ ಈ ಪವಿತ್ರವಾದ ಸ್ಥಳದಲ್ಲಿ ಗಂಗಾ ಆರತಿ ನೋಡುವುದು ಮನಸ್ಸಿಗೆ ಸಂತೋ?ವಾಗುತ್ತದೆ. ಇಲ್ಲಿ ನಡೆಯುವ ಗಂಗಾ ಆರತಿಯು ಇಡೀ ಭಾರತದಲ್ಲಿಯೇ ಪ್ರಸಿದ್ಧ. ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ.
ಸಂಸ್ಥಾನ ಶ್ರೀ ಗವಿಮಠವು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿನಾಂಕ ೨೪.೦೧.೨೦೨೪ರಂದು ಶ್ರೀಮಠದ ಕೆರೆಯದಡದಲ್ಲಿ ನಡೆಯುವ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಜರುಗುವ ಗಂಗಾ ಆರತಿಯು ಬಹಳ ವಿಜೃಂಬಣೆಯಿಂದ ನೆರವೇರಿಸಲಾಗುತ್ತದೆ. ತೆಪ್ಪೋತ್ಸವದಲ್ಲಿ ವಿರಾಜಮಾನರಾಗಿ ಅಲಂಕೃತಗೊಂಡ ಶ್ರೀ ಗವಿಸಿದ್ಧೇಶ್ವರರ ಉತ್ಸವ ಮೂರ್ತಿಯನ್ನು ಭಕ್ತಸಮೂಹ ದರ್ಶನಗೈಯುತ್ತಿರುವಾಗ ಅರ್ಚಕರಿಂದ ಶ್ರೀ ಗವಿಸಿದ್ದೇಶ್ವರನಿಗೆ ಗಂಗಾ ಆರತಿಯಿಂದ ಬೆಳಗಲಾಗುತ್ತದೆ. ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿ ದೊರೆಯಲು ಭಕ್ತ ಸಮೂಹ ಗಂಗಾ ಆರತಿ ವೀಕ್ಷಿಸಿ ಪುನೀತರಾಗುತ್ತಾರೆ.
Comments are closed.