ವಿಧಾನಸಭೆ ಚುನಾವಣೆ ಸೋಲು ಕೆಟ್ಟ ಕನಸು – ಕೆ.ಎಸ್.ಈಶ್ವರಪ್ಪ

Get real time updates directly on you device, subscribe now.

ಕೊಪ್ಪಳ: ನಾವು ಲೋಕಸಭೆ ಚುನಾವಣೆಗೆ ನಾವು ಅಣಿಯಾಗುತ್ತಿದ್ದೆವೆ. ಏಳು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದಿವಿ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ಸಾದಲ್ಲಿದ್ದಾರೆ. ವಿಧಾನಸಭೆ ಚುನಾವಣೆಯ ಸೋಲು ಕೆಟ್ಟ ಕನಸು ಎಂದು ಮರೆಯಬೇಕಿದೆ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೊಪ್ಪಳದ ಬಿಜೆಪಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ರಾಜ್ಯದಲ್ಲಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೋಕೆ ಜನರು ರೆಡಿಯಾಗಿದ್ದಾರೆ. ವಿರೋಧ ಪಕ್ಷಗಳು ಒಂದಾಗಿ ಸೇರಿ ಸಭೆ ಮಾಡುವುದು ಇದು ಮೊದಲೆನಲ್ಲಾ,ಅವರು ಏನೇ ಸಭೆ ಮಾಡಿದ್ರು ಮೋದಿ ಸೋಲಿಸೋಕೆ ಆಗೋದಿಲ್ಲ.ಹಿಂದಿನ ತಪ್ಪು ನಾವೇ ಸರಿ ಪಡಿಸಬೇಕು. ಅದೊಂದು ಕೆಟ್ಟ ಕನಸು ಪದೇ ಪದೇ ಯಾಕೆ ನೆನಪುಮಾಡಿಕೊಳ್ಳಬೇಕು. ಯಾರೋ ಒಬ್ಬರು ಹೇಳಿಕೆ ಕೊಟ್ರು ಅಂತ ತಲೆಕೊಡಿಸಿಕೊಳ್ಳೋದಿಲ್ಲ. ಲೋಕಸಭೆಗೆ ಯಾರಿಗೆ ಟಿಕೆಟ್ ಕೊಡಬೇಕು ಎನ್ನೋದು ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ. ಇದು ಕೇವಲ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿದೆ.
ಕಾಂಗ್ರೆಸ್ ಸರಕಾರ ಗ್ಯಾರೆಂಟಿಗಳನ್ನ ಸರಿಯಾಗಿ ಜಾರಿ ಮಾಡ್ತಿಲ್ಲ. ರಾಜ್ಯದಲ್ಲಿ ಕೆಲವು ಕಡೆ ಕುಡಿಯೋಕೆ ಸಿಗ್ತಿಲ್ಲ.ರೈತರು ಪರದಾಡುತ್ತಿದ್ದಾರೆ, ಚಿಂತ ಜನಕವಾಗಿದೆ. ಅದರ ಬಗ್ಗೆ ಈ ಸರ್ಕಾರ ಗಮನ ಹರಿಸ್ತಿಲ್ಲ. ಸರ್ವರ್ ಹ್ಯಾಕ್ ಮಾಡಿದ್ರು ಅಂತ‌ ಮಂತ್ರಿ ಹೇಳ್ತಾರೆ. ಇದು ನೀತಿಗೆಟ್ಟ ರಾಜಕೀಯ. ಇವಾಗ ಅಕ್ಕಿ ಕೊಡಲಿಲ್ಲ ಅಂತ ಕೇಂದ್ರದ‌ ಮೇಲೆ ಆರೋಪ ಮಾಡ್ತಿದ್ದಾರೆ. ಎಲ್ಲದಕ್ಕೂ ಬಿಜೆಪಿ ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್ ನವರ ಮನೆಯಲ್ಲಿ ಮಗು ಹುಟ್ಟಿದ್ರೆ ಅದಕ್ಕೆ ಕಾರಣ ಬಿಜೆಪಿಯವರು ಅಂತಾರೆ ಕಾಂಗ್ರೆಸ್ ಗೆ ಇದು ತಾತ್ಕಲಿಕ ಜಯ. ಪಕ್ಷ ಬಿಟ್ಟವರನ್ನು ಸೇರಿಸಿಕೊಳ್ಳುವುದನ್ನು ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ ಬಿಜೆಪಿ ಜಿಲ್ಲಾಧ್ಯಕ್ಷ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ , ಮಾಜಿ ಸಚಿವ ಹಾಲಪ್ಪ ಆಚಾರ್,ಮಾಜಿ ಶಾಸಕ ಪರಣ್ಣ ಮುನವಳ್ಳಿ , ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ , ವಕ್ತಾರರಾದ ಮಹೇಶ , ನವೀನ ಗುಳಗಣ್ಣನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: