ಗಂಗಾವತಿ: ಕಾಂಗ್ರೆಸ್ ಗೆದ್ದು, ಸರ್ಕಾರ ರಚನೆ ಮಾಡಿದಾಗಿನಿಂದಲೂ ಕೇಂದ್ರ ಬಿಜೆಪಿ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸಹಕಾರ ಕೊಡದೇ ಬಡವರನ್ನು ತೊಂದರೆಗೀಡು ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ, ಚುನಾವಣೆಯಲ್ಲಿ ಜಯಗಳಿಸಿದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಪಕ್ಷ ಕಾಂಗ್ರೆಸ್‌ನ್ನು ವಿರೋಧ ಮಾಡುವ ಭರದಲ್ಲಿ ಬಡವರನ್ನು ಇನ್ನೂ ದೂರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಡವರ ಹಾಗೂ ದುಡಿಯುವ ವರ್ಗಗಳ ಪರವಾಗಿದ್ದು, ಇವುಗಳನ್ನು ವಿರೋಧ ಮಾಡಿ, ಬಿಜೆಪಿ ಪಕ್ಷ ಜನರಿಗೆ ದೂರವಾಗುತ್ತಿದೆ.
ಬಿಜೆಪಿ ಪಕ್ಷ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿರೋಧ ಮಾಡಬಾರದು. ಮಾಡಿದಲ್ಲಿ ಸಾಮಾನ್ಯ ದುಡಿಯುವ ಜನರಿಂದ ಬಿಜೆಪಿ ದೂರವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸರ್ಕಾರ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದು ಭಾರಧ್ವಾಜ್ ಎಚ್ಚರಿಸಿದ್ದಾರೆ.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Comments are closed.