ದೇವಸ್ಥಾನದ ಘಂಟೆ- ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನ ಬಂಧನ

Get real time updates directly on you device, subscribe now.

ಮುನಿರಾಬಾದ್ : ದೇವಸ್ಥಾನದ ಘಂಟೆ ಹಾಗೂ ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸುವಲ್ಲಿ ಮುನಿರಾಬಾದ್ ಪೋಲಿಸರು ಯಶಸ್ವಿಯಾಗಿದ್ದಾರೆ.

ಆರೋಪಿತನಿಂದ ದೇವಸ್ಥಾನದ 07 ಘಂಟೆಗಳು ಹಾಗೂ 04 ಮೋಟಾರ್ ಸೈಕಲ್ ಗಳು ಸೇರಿ ಒಟ್ಟು 2,40,000/-ರೂ. ವಶ ಪಡಿಸಿಕೊಳ್ಳಲಾಗಿದೆ

ಕೊಪ್ಪಳ ಜಿಲ್ಲೆ ಕೊಪ್ಪಳ ಗ್ರಾಮೀಣ ವೃತ್ತ ವ್ಯಾಪ್ತಿಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನಗಳಲ್ಲಿನ

ಘಂಟೆಗಳು ಕಳ್ಳತನವಾದ ಬಗ್ಗೆ ಪ್ರಕರಣ ವರದಿಯಾಗಿದ್ದು, ಈ ಪ್ರಕರಣವನ್ನು ಬೇಧಿಸಲು ಯಶೋಧಾ

ಎಸ್. ವಂಟಗೊಡಿ, ಐ.ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ, ಹೇಮಂತ್ ಕುಮಾರ ಆರ್ ಹೆಚ್ಚುವರಿ

ಪೊಲೀಸ್ ಅಧೀಕ್ಷಕರು ಕೊಪ್ಪಳ, ಶರಣಬಸಪ್ಪ ಸುಬೇದಾರ್ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ

ಮಾರ್ಗದರ್ಶನದಲ್ಲಿ ಮಹಾಂತೇಶ ಸಜ್ಜನ್ ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು, ಕ್ಷೀಪ್ರ ಕಾರ್ಯಾಚರಣೆ ಕೈಗೊಂಡು ಆರೋಪಿತನಾದ ವಿರೇಶ ನಾಯ್ಕ ತಂದೆ ದುರ್ಗ್ಯಾ ನಾಯ್ಕ ವಯ:34 ವರ್ಷ ಸಾ:ಬಾಗಳಿ

ತಾಂಡಾ ತಾ:ಸಂಡೂರು ಹಾ:ವಬಸರಕೋಡ ತಾಂಡಾ ತಾ:ಹಗರಿಬೊಮ್ಮನಹಳ್ಳಿ ಜಿ:ವಿಜಯನಗರ ಎಂಬುವವನನ್ನು

ದಸ್ತಗಿರಿ ಮಾಡಿ ವಿಚಾರಣೆ ಗೊಳಪಡಿಸಿ ಆರೋಪಿತನು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ 50,000/-ರೂ.ಮೌಲ್ಯದ 07 ಘಂಟೆಗಳನ್ನು ಹಾಗೂ ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ 1,90.000/-ರೂ ಮೌಲ್ಯದ 04 ಮೋಟಾರ್ ಸೈಕಲ್ ಗಳನ್ನು ಆರೋಪಿತನಿಂದ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಭೇದಿಸಿದ ತಂಡದಲ್ಲಿ ಮಹಾಂತೇಶ ಸಜ್ಜನ್ ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ, ಸುನೀಲ್ ಹೆಚ್. ಪಿ.ಎಸ್.ಐ (ಕಾ&ಸು), ಶ್ರೀಮತಿ ಮೀನಾಕ್ಷಿ ಪಿ.ಎಸ್.ಐ (ತನಿಖೆ), ಮತ್ತು ಸಿಬ್ಬಂದಿಯವರಾದ ಅಂಜಿನಪ್ಪ, ಶ್ರೀ ಕೃಷ್ಣ ಭಂಡಾರಿ, ಅಮರೇಶಪ್ಪ, ಮಹಮದ್ ರಫಿ, ಈರೇಶ ಗುಡಾರಿ, ಹನುಮೇಶ, ಹನುಮಂತಪ್ಪ, ಶರಣಪ್ಪ, ಪ್ರಕಾಶ ಬೆಂಕಿ, ನರಸಪ್ಪ, ಶಿವಪುತ್ರಪ್ಪ, ಶರಣಪ್ಪ, ಮಂಜುನಾಥ, ಶಶಿಕುಮಾರ ಕಾಳಿ, ಬಸವನಗೌಡ, ಚಾಲಕರಾದ ಚಂದ್ರಶೇಖರ, ವೆಂಕಟೇಶ ನಾಯ್ಕ ಮತ್ತು ಇತರೆ ಸಿಬ್ಬಂದಿಯವರು ಶ್ರಮಿಸಿದ್ದು, ಪ್ರಕರಣವನ್ನು ಬೇಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿ ಎಸ್ಪಿಯವರು ಬಹುಮಾನ ಘೋಷಣೆ ಮಾಡಿದ್ದಾರೆ

Get real time updates directly on you device, subscribe now.

Comments are closed.

error: Content is protected !!