ಮುಸ್ಲಿಂ ಬಾಂಧವರಿಂದ ರಾಮಮಂದಿರ, ಆಂಜನೇಯ ದೇವಸ್ಥಾನದಲ್ಲಿ ಪೂಜೆ,ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ
ಭಾಗ್ಯನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಾಗ್ಯನಗರದ ಮುಸ್ಲಿಂ ಸಮುದಾಯದವರು ಭಾವೈಕ್ಯ ಮೆರೆದಿದ್ದಾರೆ. ಭಾಗ್ಯನಗರದ ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ಸಮುದಾಯದ ಪಂಚ ಕಮಿಟಿ ಸದಸ್ಯರು ಸೋಮವಾರ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪಂಚಕಮಿಟಿ ಸದಸ್ಯರು ಪ್ರಸಾದ ವ್ಯವಸ್ಥೆಯನ್ನೂ ಸಹ ಮಾಡಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗಾಗಿ ಅನ್ನ, ಸಾರು, ಬದನೇಕಾಯಿ ಪಲ್ಲೆ, ಗೋಧಿ ಹುಗ್ಗಿ ವ್ಯವಸ್ಥೆ ಮಾಡಲಾಗಿತ್ತು. ರಾಮಮಂದಿರ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಭಕ್ತರು ಜೊತೆಯಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾಗ್ಯನಗರ ಪಂಚ ಕಮಿಟಿ ಅದ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ, ಮಾಲಾಹುಸೇನ್ ಹಣಗಿ ಹೊನ್ನೂರಸಾಬ ಬೈರಾಪುರ, , ಕಬೀರಸಾಬ್ ಭೈರಾಪುರ, , ಬಾಬಾ ಪಟೇಲ್, ಖಾಜಾಸಾಬ್, ನೂರ್‌ಬಾಷಾ, ಹಾಜಿ ಕುತ್ಬುದ್ದೀನಸಾಬ್, ರಫಿಶಾಬ , ಕೋಟ್ರೇಶ್ ಶೆಡ್ಮಿ, ಸುರೇಶ , ಯಮನೂರಪ್ಪ, ಮಂಜುನಾಥ ಕಲಾಲ ಸೇರಿದಂತೆ ಇತರರು ಶರೀಪಸಾಬ ಉಪಸ್ಥಿತರಿದ್ದರು
Comments are closed.