ಝಗ-ಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡಶ್ರೀ ಗವಿಮಠ
ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವವುಜನೆವರಿ ೨೭ರಂದುಜರುಗುವ ಪ್ರಯುಕ್ತ,ಗವಿಮಠದಲ್ಲಿ ಸಿದ್ಧತೆಗಳು ಭರದಿಂದಸಾಗುತ್ತಲಿವೆ. ಹಾಗೆಯೇಜನಮನರಂಜಿಸುವಚಿತ್ತಾಕರ್ಷಕ ವಿದ್ಯುತ್ ದೀಪಾಲಂಕಾರಅತ್ಯಂತಆಕರ್ಷಣಿಯವಾಗಿದೆ. ಶ್ರೀಗವಿಮಠದ ಆವರಣ,ಮಹಾದ್ವಾರ,ಕೈಲಾಸ ಮಂಟಪ, ಗವಿಸಿದ್ಧೇಶ್ವರರಕರ್ತೃಗದ್ದುಗೆ, ಸಂಗೀತ ಪಾಠಶಾಲೆ,ಶಿವಶಾಂತವೀರ ಹಾಗೂ ಮರಿಶಾಂತವೀರ ಮಹಾಸ್ವಾಮಿಗಳಗದ್ದುಗೆ, ಶಿಲಾಮಂಟಪ,ಪುಷ್ಕರಣಿ, ಅನ್ನಪೂರ್ಣೇಶ್ವರಿಗುಡಿ, ಪಾದಗಟ್ಟಿ,ಮಹಾದ್ವಾರದ೨೧ ಇಕ್ಕೆಲಗಳಲ್ಲಿ ವಿದ್ಯುತ್ ದೀಪ ಅಲಂಕಾರವುರಾತ್ರಿಯೂ ಸಹಿತ ಹಗಲಿನೋಪಾದಿಯಲ್ಲಿ ಬೆಳಕನ್ನು ಚೆಲ್ಲುತ್ತಿವೆ.
ಹಾಲಿನ ನೊರೆ ಹರಿದಂತೆಚೆಲ್ಲುಚೆಲ್ಲುವರೆದಗಿಡಮರ-ಲತೆಗಳು,ಮುಗಿಲಿಗೆ ಮುತ್ತಿಡುವ ನೀಲ ನಿರ್ಭರ ಕಾರಂಜಿಗಳು,ಆಗಮಿಸುವ ಭಕ್ತಸಮೂಹ,ನೋಡುಗರ ಕಣ್ಮನಗಳಿಗೆ ಹರ್ಷಾನಂದವನ್ನುಉಂಟುಮಾಡುತ್ತಿರುವದುಆಹ್ಲಾದಕರವಾಗಿದೆ.
ಪ್ರಸ್ತುತ ವರ್ಷ ಶ್ರೀ ಮಠದಆವರಣವುಮೈಸೂರಿನ ಬೃಂದಾವನ,ನೆರೆಯತುಂಗಭದ್ರಾಆಣೆಕಟ್ಟಿನಅಲಂಕಾರವನ್ನುಇಲ್ಲಿ ಸ್ಮರಿಸುವಂತೆ ಅತ್ಯಾಕರ್ಷಕಗೊಳಿಸಲಾಗಿದೆ.ಶ್ರೀಮಠದ ಆವರಣದತುಂಬೆಲ್ಲಬಣ್ಣಬಣ್ಣದಬೆಳಕು ಲಾಸ್ಯವಾದಂತೆ ಶ್ರೀಮಠದ ಮುಂಭಾಗದಲ್ಲಿರುವ ವಿದ್ಯಾಸಂಸ್ಥೆಗಳ ಮೇಲು ಉಪ್ಪರಿಗೆ,ನೆಲಹಾಸು, ಗಿಡಮರಗಳೆಲ್ಲ ವಿದ್ಯುತ್ ದೀಪದಿಂದಅಲಂಕಾರಗೊಂಡಿರುವದುನಿಜಕ್ಕೂ ಸೋಜಿಗವಾಗಿದೆ.ಶ್ರೀ ಮಠದಜಾತ್ರಾ ಆಕರ್ಷಣೆಗಳಲ್ಲಿ ವಿದ್ಯುತ್ ದೀಪಾಲಂಕಾರವುಒಂದು ವಿಶೇಷ.
Comments are closed.